ಗೋಕಾಕ:ಜಾರಕಿಹೊಳಿ ಬ್ರದರ್ಸ್ ಒಂದೇ ಅಂತಾ ರಮೇಶ್ ಜಾರಕಿಹೊಳಿ ಟೀಮ್ ಬಿಂಬಿಸುತ್ತಿದ್ದೆ : ಶಾಸಕ ಸತೀಶ

ಜಾರಕಿಹೊಳಿ ಬ್ರದರ್ಸ್ ಒಂದೇ ಅಂತಾ ರಮೇಶ್ ಜಾರಕಿಹೊಳಿ ಟೀಮ್ ಬಿಂಬಿಸುತ್ತಿದ್ದೆ : ಶಾಸಕ ಸತೀಶ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 19 :
ಜಾರಕಿಹೊಳಿ ಬ್ರದರ್ಸ್ ಒಂದೇ ಅಂತಾ ರಮೇಶ್ ಜಾರಕಿಹೊಳಿ ಟೀಮ್ ಬಿಂಬಿಸುತ್ತಿದ್ದಾರೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ನಗರದ ಕಾಂಗ್ರೆಸ ಅಭ್ಯರ್ಥಿ ಲಖನ್ ಜಾರಕಿಹೊಳಿ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಿದ್ದ ಅವರು ಚುನಾವಣೆಯಲ್ಲಿ ಕ್ಷೇತ್ರದ ರಾಜಕೀಯ ವ್ಯವಸ್ಥೆ ಬದಲಾವಣೆ ವಿಷಯವನ್ನು ತೆಗೆದುಕೊಂಡು ಮತದಾರರ ಮುಂದೆ ಹೋಗುವದಾಗಿ ತಿಳಿಸಿದ ಅವರು ಕಳೆದ ನಾಲ್ಕು ತಿಂಗಳಿಂದ ಕ್ಷೇತ್ರದಾದ್ಯಂತ ಸಂಚರಿಸಿ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ಕಾಂಗ್ರೆಸ ಪಕ್ಷದಿಂದ ಎಲ್ಲ ಲಾಭವನ್ನು ಪಡೆದು ಎತ್ತರಕ್ಕೆ ಏರಿದ ರಮೇಶ ಜಾರಕಿಹೊಳಿ ಪಕ್ಷಕ್ಕೆ ದ್ರೋಹ ಬಗೆದು ಬೇರೆ ಪಕ್ಷ ಸೇರ್ಪಡೆ ಆಗಿದ್ದಾರೆಂದು ತಿಳಿಸಿ ಗೋಕಾಕ ಮತಕ್ಷೇತ್ರ ಕಾಂಗ್ರೆಸ ಪಕ್ಷದ ಭದ್ರಕೋಟೆಯಾಗಿದೆ ಎಂದು ಹೇಳಿದರು.
ಲಖನ್ ಜಾರಕಿಹೊಳಿ ಕಾಂಗ್ರೆಸ ಪಕ್ಷದವರೇ ಇದ್ದು ಬೇರೆ ಪಕ್ಷದಿಂದ ಬಂದಿಲ್ಲ. ರಮೇಶ ಜಾರಕಿಹೊಳಿ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದರ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರ ಬಗ್ಗೆ ಪತ್ರಕರ್ತರು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸತೀಶ ಜಾರಕಿಹೊಳಿ ಈ ಬಗ್ಗೆ ಎಚ್ಚರಿಕೆ ವಹಿಸಲಾಗುವದು ಎಂದು ತಿಳಿಸಿದರು.
