ಗೋಕಾಕ:ಗಡಿ ಜಿಲ್ಲೆಯ ಮೂವರು ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರತಿರುವದು ಅತೀವ ಸಂತೋಷ ತಂದಿದೆ : ಖಾನಪ್ಪನವರ
ಗಡಿ ಜಿಲ್ಲೆಯ ಮೂವರು ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರತಿರುವದು ಅತೀವ ಸಂತೋಷ ತಂದಿದೆ : ಖಾನಪ್ಪನವರ
ಗೋಕಾಕ ನ 29 : ಗಡಿ ಜಿಲ್ಲೆ ಬೆಳಗಾವಿಯ ಮೂವರು ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರತಿರುವದು ಜಿಲ್ಲೆಯ ಕನ್ನಡಿಗರಿಗೆ ಅತೀವ ಸಂತೋಷ ತಂದಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಅಧ್ಯಕ್ಷ ಬಸವರಾಜ ಖಾನಪ್ಪನವರ ಹರ್ಷ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಹಲವು ದಶಕಗಳಿಂದ ಶಿಕ್ಷಣ, ಸಾಹಿತ್ಯ ಮತ್ತು ಕನ್ನಡದ ಕಾರ್ಯದಲ್ಲಿ ತೊಡಗಿ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಜಿಲ್ಲೆಯ ಪ್ರತಿಷ್ಟಿತ ಸಂಸ್ಥೆಯ ಅಧ್ಯಕ್ಷರಾದ ಶಿವಾನಂದ ಕೌಜಲಗಿ, ಸಾಹಿತಿ ಹಸನ ನಯೀಮ ಸುರಕೋಡ ಮತ್ತು ಸಿ.ಕೆ ಜೋರಾಪೂರ ಅವರಿಗೆ ರಾಜ್ಯ ಸರಕಾರ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ. ಬರುವ ಡಿಸೆಂಬರ 10 ಅಥವಾ 17 ರಂದು ನಡೆಸಲು ಉದ್ದೇಶಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಸಮಾವೇಶದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಸನ ನಯೀಮ ಸುರಕೋಡ, ಶಿವಾನಂದ ಕೌಜಲಗಿ ಹಾಗೂ ಸಿ. ಕೆ.ಜೋರಾಪೂರ ಅವರನ್ನು ಸತ್ಕರಿಸಿ ಗೌರವಿಸಲಾಗುವದು. ಎಂದು ಬಸವರಾಜ ಖಾನಪ್ಪನವರ ತಿಳಿಸಿದ್ದಾರೆ.