RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಶೈಕ್ಷಣಿಕ ಚಟುವಟಿಕೆನ್ನು ಗಟ್ಟಿಗೋಳಿಸುವ ಮಹತ್ತರ ಕಾರ್ಯ ಶಿಕ್ಷಕರಿಂದ ಜರುಗಬೇಕಾಗಿದೆ : ಬಿಇಒ ಜಿ.ಬಿ.ಬಳಗಾರ

ಗೋಕಾಕ:ಶೈಕ್ಷಣಿಕ ಚಟುವಟಿಕೆನ್ನು ಗಟ್ಟಿಗೋಳಿಸುವ ಮಹತ್ತರ ಕಾರ್ಯ ಶಿಕ್ಷಕರಿಂದ ಜರುಗಬೇಕಾಗಿದೆ : ಬಿಇಒ ಜಿ.ಬಿ.ಬಳಗಾರ 

ಶೈಕ್ಷಣಿಕ ಚಟುವಟಿಕೆನ್ನು ಗಟ್ಟಿಗೋಳಿಸುವ ಮಹತ್ತರ ಕಾರ್ಯ ಶಿಕ್ಷಕರಿಂದ ಜರುಗಬೇಕಾಗಿದೆ : ಬಿಇಒ ಜಿ.ಬಿ.ಬಳಗಾರ
ಗೋಕಾಕ ನ 23 : ಶೈಕ್ಷಣಿಕ ಚಟುವಟಿಕೆನ್ನು ಗಟ್ಟಿಗೋಳಿಸುವ ಮಹತ್ತರ ಕಾರ್ಯ ಶಿಕ್ಷಕರಿಂದ ನಿರಂತರವಾಗಿ ಜರುಗಬೇಕಾಗಿದೆ ಎಂದು ಗೋಕಾಕ ವಲಯದ ನೂತನ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಜಿ.ಬಿ.ಬಳಗಾರ ಹೇಳಿದರು .

ಶುಕ್ರವಾರದಂದು ಸಾಯಂಕಾಲ ನಗರದ ಎನ್ಇಎಸ್ ಶಾಲಾ ಸಭಾಂಗಣದಲ್ಲಿ ನಡೆದ ಶಿಕ್ಷಣಾಧಿಕಾರಿ ದೀಪಕ ಎಸ್. ಕುಲಕರ್ಣಿ ಅವರ ಬೀಳ್ಕೊಡುಗೆ ಮತ್ತು ನೂತನವಾಗಿ ಶಿಕ್ಷಣಾಧಿಕಾರಿ ಅವರ ಸ್ವಾಗತ ಸಮಾರಂಭದಲ್ಲಿ ಸ್ವಾಗತ ಸ್ವೀಕರಿಸಿ ಮಾತನಾಡಿದರು.

ವಲಯದ ಶಿಕ್ಷಕರ ಸಹಕಾರಿದಿಂದ ಗೋಕಾಕ ವಲಯ ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ವಲಯ ಪ್ರಥಮ ಸ್ಥಾನ ಗಿಟ್ಟಿಸಿದೆ ನನ್ನ ಅಧಿಕಾರವಧಿಯಲ್ಲಿಯೂ ಸಹ ಗೋಕಾಕ ವಲಯ ರಾಜ್ಯದಲ್ಲೇ ಪ್ರಥಮ ಸ್ಥಾನ ಗಿಟ್ಟಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಇದಕ್ಕೆ ನಿಮ್ಮೇಲರ ಸಹಕಾರ ಅತಿ ಮುಖ್ಯವಾಗಿದೆ . ಆ ದೀಸೆಯಲ್ಲಿ ನಾವೆಲ್ಲ ಒಗ್ಗಟಿನಿಂದ ಶ್ರಮಿಸಬೇಕಾಗಿದೆ ಎಂದು ಬಳಗಾರ ಹೇಳಿದರು.

ಡಿಡಿಪಿಐ ಎಂ.ಜಿ ದಾಸರ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿಕಟಪೂರ್ವ ಶಿಕ್ಷಣಾಧಿಕಾರಿ ದೀಪಕ ಕುಲಕರ್ಣಿ ಬೀಳ್ಕೊಡುಗೆ ಸ್ವೀಕರಿಸಿ ತಮ್ಮ ಅಧಿಕಾರವಧಿಯ ಅನುಭವಗಳನ್ನು ಹಂಚಿಕೊಂಡರು .

ಪ್ರೌಢ ಶಾಲಾ ಸಹ ಶಿಕ್ಷಕರಾದ ಟಿ.ಬಿ ಬಿಲ್ಲ , ಮುಖ್ಯೋಪಾಧ್ಯಾಯ ಬಿ.ಎನ್.ಬಶೆಟ್ಟಿ , ಪ್ರಭಾರಿ ಪ್ರಧಾನ ಗುರುಗಳಾದ ಅಶೋಕ ನಾಯಿಕ ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಗೋಕಾಕ ವಲಯದ ಎಲ್ಲ ಶಿಕ್ಷಕ ವೃಂದದ ವತಿಯಿಂದ ನೂತನವಾಗಿ ಅಧಿಕಾರ ಸ್ವೀಕರಿಸಿದ ಜಿ.ಬಿ.ಬಳಗಾರ ಮತ್ತು ನಿರ್ಗಮಿತ ಶಿಕ್ಷಣಾಧಿಕಾರಿ ದೀಪಕ ಕುಲಕರ್ಣಿ ಅವರಿಗೆ ಸತ್ಕರಿಸಿ ಗೌರವಿಸಲಾಯಿತು .

ನೂತನವಾಗಿ ಅಧಿಕಾರ ಸ್ವೀಕರಿಸಿದ ಜಿ.ಬಿ.ಬಳಗಾರ ಮತ್ತು ನಿರ್ಗಮಿತ ಶಿಕ್ಷಣಾಧಿಕಾರಿ ದೀಪಕ ಕುಲಕರ್ಣಿ ಅವರಿಗೆ ಸತ್ಕರಿಸಿ ಗೌರವಿಸಲಾಯಿತು

ವೇದಿಕೆಯಲ್ಲಿ ಮೂಡಲಗಿ ಶಿಕ್ಷಣಾಧಿಕಾರಿ ಅಜೀತ ಮನ್ನೀಕೇರಿ , ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಿ.ವಾಯ್.ಪಿ. ಸಿ ಶ್ರೀಮತಿ ರೇವತಿ ಮಠದ , ಎಂ.ಡಿ.ಬೇಗ್ , ಗೋಪಾಲ ಮಾಳಗಿ , ಬಿ.ಎಂ.ಸುಲೆಗಾಂವಿ , ಎಂ.ಬಿ.ಪಾಟೀಲ , ಎಲ್.ಎಲ್.ಲಗಮ್ಮಪಗೋಳ , ಆರ್.ಎಂ ಕುಡೊಳಿ , ಎಂ.ಎಲ್ ಹಸರಂಗಿ , ಎಂ .ಬಿ ಜೌಗಲಾ , ಎಂ.ಬಿ.ಹಿರೇಮಠ , ಸನದಿ , ಆರ್.ಬಿ.ಢವಳೇಶ್ವರ , ಎಸ್.ಎಸ್.ಮಾಳಗಿ , ಗಿರೀಶ್ ಝಂವರ , ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ಕಾರ್ಯಕ್ರಮವನ್ನು ಶಿಕ್ಷಕ ರಾಮಪ್ಪ ಮಿರ್ಜಿ ನಿರೂಪಿಸಿ ವಂದಿಸಿದರು.

Related posts: