ಗೋಕಾಕ:ಮತದಾರ ಪಟ್ಟಿಯಲ್ಲಿನ ನೂನ್ಯತೆಯನ್ನು ಸರಿ ಪಡಿಸಲು ವಿಶೇಷ ನೊಂದಣಿ ಅಭಿಯಾನ : ಎಮ್.ಎಚ್.ಅತ್ತಾರ
ಮತದಾರ ಪಟ್ಟಿಯಲ್ಲಿನ ನೂನ್ಯತೆಯನ್ನು ಸರಿ ಪಡಿಸಲು ವಿಶೇಷ ನೊಂದಣಿ ಅಭಿಯಾನ : ಎಮ್.ಎಚ್.ಅತ್ತಾರ
ಗೋಕಾಕ ನ 21 : ಮುಖ್ಯ ಚುನಾವಣಾಧಿಕಾರಿಗಳ ಆದೇಶದಂತೆ ಮತದಾರರ ಪಟ್ಟಿಗೆ ಅರ್ಹ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಹಾಗೂ ಮತದಾರ ಪಟ್ಟಿಯಲ್ಲಿನ ನೂನ್ಯತೆಯನ್ನು ಸರಿ ಪಡಿಸಲು ದಿ. 23, 24 ಹಾಗೂ 25 ರಂದು ವಿಶೇಷ ನೊಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಗರ ಸಭೆ ಪೌರಾಯುಕ್ತ ಎಮ್.ಎಚ್.ಅತ್ತಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ವಿಶೇಷ ನೊಂದಣಿ ಅಭಿಯಾನ ಕುರಿತು ಗೋಕಾಕ ನಗರದ ಎಲ್ಲ ಮತಗಟ್ಟೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮತಗಟ್ಟೆ ಮಟ್ಟದ ಅಧಿಕಾರಿಗಳು(ಬಿಎಲ್‍ಓ) ಈಗಾಗಲೇ ತಿಳಿಸಲಾಗಿದ್ದು, ವಿಶೇಷ ನೊಂದಣಿ ಅಭಿಯಾನದಲ್ಲಿ ಮತದಾರ ಯಾದಿ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡಿ, ಸೇರ್ಪಡೆಯಾಗದೇ ಇರುವ ಮತದಾರ ಸೇರ್ಪಡೆ, ಅನರ್ಹ ಮತದಾರರನ್ನು ಕಡಿಮೆ ಮಾಡುವುದು ಹಾಗೂ ಮತದಾರರ ಯಾದಿಯಲ್ಲಿನ ಲೋಪದೋಷಗಳನ್ನು ಸರಿಪಡಿಸುವಂತೆ ತಿಳಿಸಲಾಗಿದೆ. ನಗರದ ಸಾರ್ವಜನಿಕರು ಸಹಕಾರ ನೀಡಿ ಈ ವಿಶೇಷ ನೊಂದಣಿ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಪೌರಾಯುಕ್ತರು ಕೋರಿದ್ದಾರೆ.