RNI NO. KARKAN/2006/27779|Friday, April 26, 2024
You are here: Home » breaking news » ಗೋಕಾಕ:ಕೌಜಲಗಿಯಲ್ಲಿ ಕನ್ನಡ ರಾಜ್ಯೋತ್ಸವ

ಗೋಕಾಕ:ಕೌಜಲಗಿಯಲ್ಲಿ ಕನ್ನಡ ರಾಜ್ಯೋತ್ಸವ 

ಕೌಜಲಗಿಯಲ್ಲಿ ಕನ್ನಡ ರಾಜ್ಯೋತ್ಸವ

ಕೌಜಲಗಿ ನ 2 : ಕನ್ನಡ ಭಾಷೆ ಮತ್ತು ಸಂಸ್ಕøತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ; ದೇಹ ಮತ್ತು ಪ್ರಾಣಗಳಾಗಿವೆ. ಈ ನೆಲದ ಕನ್ನಡ ಭಾಷೆ ಕನ್ನಡಿಗರ ಪ್ರಾಣ. ಕನ್ನಡವೇ ಕನ್ನಡಿಗರಿಗೆ ಅನ್ನ ಮತ್ತು ಅಮೃತವಾಗಿದೆ ಎಂದು ಸಾಹಿತಿ ಡಾ. ರಾಜು ಕಂಬಾರ ಅಭಿಪ್ರಾಯಿಸಿದರು.
ಕೌಜಲಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರ ಆಚರಿಸಿದ 63ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ, ಕನ್ನಡ ನಾಡು, ನುಡಿ, ಕಲೆ-ಸಾಹಿತ್ಯ-ಸಂಸ್ಕøತಿಗಳ ಬಗ್ಗೆ ಪ್ರತಿಯೊಬ್ಬರಲ್ಲಿ ಅಭಿಮಾನವಿರಬೇಕು. ಕನ್ನಡ ಭಾಷೆಗೆ 2500 ವರ್ಷಗಳ ಪ್ರಾಚೀನ ಇತಿಹಾಸವಿದ್ದು ಹಲ್ಮಡಿ ಶಾಸನ, ಕವಿರಾಜಮಾರ್ಗ ದಂತಹ ಅಪೂರ್ವ ಕೃತಿಗಳು ಸಾಕ್ಷಿಕರಿಸುತ್ತವೆ. ಪಂಪನಾವಿಯಾಗಿ ಕನ್ನಡದ ಹಲವಾರು ಕವಿಗಳು ಕನ್ನಡದ ವೈಶಿಷ್ಟ್ಯತೆಯನ್ನು ತಮ್ಮ ಕೃತಿಗಳಲ್ಲಿ ಚಿತ್ರಿಸಿದ್ದಾರೆ. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಕವಿ ಕುವೆಂಪು ಹೇಳಿ ಕನ್ನಡದ ಕೆಚ್ಚೆದೆಯನ್ನು ತುಂಬಿದ್ದಾನೆ. ಪ್ರತಿಯೊಬ್ಬ ಕನ್ನಡಿಗನು ತಮ್ಮದೇ ಆದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಯನ್ನು ಮಾಡಿ ತಾಯ್ನಾಡಿನ ಋಣ ತೀರಿಸಬೇಕು ಎಂದು ಡಾ.ಕಂಬಾರ ಹೇಳಿದರು.
ವಸತಿ ಶಾಲೆಯ ಪ್ರಾಚಾರ್ಯ ಎನ್.ಬಿ. ಯರಗಟ್ಟಿ ಹಾಗೂ ವಸತಿ ನಿಲಯದ ಮೇಲ್ವಿಚಾರಕಿ ಗೀತಾ ಪಟ್ಟಣ ಹಾಗೂ ಸಿಬ್ಬಂದಿ ವರ್ಗದವರೆಲ್ಲರೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದ ಡಾ. ರಾಜು ಕಂಬಾರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು. ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಕನ್ನಡ ರಾಜ್ಯೋತ್ಸವ ಕುರಿತು ಮಾತನಾಡಿದರು. ಪ್ರಾಚಾರ್ಯ ಎನ್.ಬಿ. ಯರಗಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.

ಜೈಭೀಮ ಸೇನೆ ವತಿಯಿಂದ ಕನ್ನಡ ರಾಜ್ಯೋತ್ಸವ:
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ ಸರ್ಕಲ್‍ನಲ್ಲಿ ಪಟ್ಟಣದ ಜೈ ಭೀಮ ಸೇನೆ ವತಿಯಿಂದ 63ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಿಂದ ಆಚರಿಸಲಾಯಿತು. ಸೇನೆಯ ಮುಖ್ಯಸ್ಥ ಭೀಮಶಿ ಉದ್ದಪ್ಪನವರ ನೇತೃತ್ವದಲ್ಲಿ ನೂರಾರು ಯುವಕರು ಕನ್ನಡ ಜಯಘೋಷಗಳನ್ನು ಕೂಗಿದರು. ತಾ.ಪಂ. ಸದಸ್ಯ ಶಾಂತಪ್ಪ ಹಿರೇಮೇತ್ರಿ ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಪಿಎಚ್.ಡಿ. ಪದವಿ ಪಡೆದ ಸ್ಥಳೀಯ ಸಾಹಿತಿ ಡಾ.ರಾಜು ಕಂಬಾರ ಅವರನ್ನು ಸತ್ಕರಿಸಿದರು. ಮುಖ್ಯ ಅತಿಥಿಗಳಾಗಿ ಡಾ. ರಾಜು ಕಂಬಾರ ಕನ್ನಡ-ನಾಡು-ನುಡಿಯ ಇತಿಹಾಸ ಕುರಿತು ಮಾತನಾಡಿದರು.
ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ನೀಲಪ್ಪ ಕೇವಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಗದೀಶ ಭೋವಿ, ಅಶೋಕ ಉದ್ದಪ್ಪನವರ, ಅಶೋಕ ಶಿವಾಪೂರ, ಫಕೀರಪ್ಪ ಪೂಜನ್ನವರ, ರಾಮಣ್ಣ ಈಟಿ, ಅಶೋಕ ಪೂಜೇರಿ, ರಾಯಪ್ಪ ಬಳೋಲದಾರ ಹಾಗೂ ಜೈ ಭೀಮ ಸೇನೆಯ ನೂರಾರು ಯುವಕರು ಪಾಲ್ಗೊಂಡಿದ್ದರು.

Related posts: