ಗೋಕಾಕ:ನಿರ್ಲಕ್ಷ್ಯ ಆರೋಪದಡಿ ವೈದ್ಯರ ವಿರುದ್ಧ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ನಿರ್ಲಕ್ಷ್ಯ ಆರೋಪದಡಿ ವೈದ್ಯರ ವಿರುದ್ಧ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಗೋಕಾಕ ಮೇ 20 : ಇಲ್ಲಿನ ನಿಸರ್ಗ ಖಾಸಗಿ ಆಸ್ಪತ್ರೆಯಲ್ಲಿ ಮಂಡಿಕ ( ಟಾನಸಂಸ್) ಶಸ್ತ್ರಚಿಕಿತ್ಸೆ ಸಂಬಂಧಿಸಿದಂತೆ ರೋಗಿ ಮೃತಪಟ್ಟ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ಆರೋಪದಡಿ ವೈದ್ಯರ ವಿರುದ್ಧ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆ ವಿವರ : ದೂರುದಾರರ ಮಗಳು ಶೃತಿ ಕರೆಪ್ಪಾ ಚೌಗಲಾ ವಯಸ್ಸು-14 ವರ್ಷ ಇವಳಿಗೆ ಮಂಡಿಕ (Tonsans) ದಿನಾಂಕ 13-05-2025 ರಂದು ಗೋಕಾಕ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದು 17-05-2025 ರಂದು ಗೋಕಾಕ ನಿಸರ್ಗ ಆಸ್ಪತ್ರೆಯ ವೈದ್ಯರಾದ ಡಾ|| ಭೀಮಪ್ಪಾ ಕೋಳಿ, ಡಾ|| ರಾಮಪ್ಪಾ ಅರಬಾಂವಿ ಮತ್ತು ಡಾ।। ಪೂಜಾ ಸಾಗರ ಇವರು ಮಂಡಕಿ (Tonsans) ಆಪರೇಶನ್ ಮಾಡುವಾಗ ಅವಳಿಗೆ ಸರಿಯಾಗಿ ಆಪರೇಶನ್ ಮಾಡದೇ ನಿರ್ಲಕ್ಷ ಮಾಡಿದ್ದರಿಂದ ಶೃತಿ ಚೌಗಲಾ ಇತಳ ಶರೀರ ಒಮ್ಮೆಲೆ ಬಾವು ಬಂದು ಅವಳು ಮೂರ್ಛೆಹೋಗಿ ತೀರಿಕೊಂಡಿದ್ದಾಳೆ ಎನ್ನಲಾಗಿದ್ದು, ಕಾರಣ ಇದರಲ್ಲಿಯ ದೂರುದಾರರ ಮಗಳ ಸಾವಿಗೆ ನಿಸರ್ಗ ಆಸ್ಪತ್ರೆಯ ವೈದ್ಯರೆ ಕಾರಣರಿದ್ದು ಅವರ ಮೇಲೆ ದೂರೂ ಇದ್ದು ಈ ಬಗ್ಗೆ ಸೂಕ್ತ ತನಿಖೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.