RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಜಂತುನಾಶಕ ವಿತರಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ

ಗೋಕಾಕ:ಜಂತುನಾಶಕ ವಿತರಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ 

ಜಂತುನಾಶಕ ವಿತರಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ

ಗೋಕಾಕ ಅ 10 : ಕುರಿಗಾರರಿಗೆ ಜಂತುನಾಶಕ ವಿತರಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬುಧವಾರ ಸಂಜೆ ಚಾಲನೆ ನೀಡಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಕುರಿಗಾರರಿಗೆ ಸ್ವಿಸ್ ಯೋಜನೆಯಡಿ ಜಂತುನಾಶಕ ಔಷಧಿ, ಲವಣ ಮಿಶ್ರಣ ಹಾಗೂ ಮೇವಿನ ಕಿರು ಪೊಟ್ಟಣವನ್ನು ಕುರಿಗಾರರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ವಿತರಿಸಿದರು.
ಅರಭಾವಿ ಕ್ಷೇತ್ರದಲ್ಲಿ ಸುಮಾರು 20 ಸಾವಿರ ಕುರಿಗಾರರಿಗೆ ಜಂತುನಾಶಕ ಔಷಧಿ ವಿತರಿಸಲಾಗುತ್ತಿದ್ದು, 2500 ಕುರಿಗಾರರಿಗೆ ಮೇವಿನ ಕಿರು ಪೊಟ್ಟಣ ವಿತರಿಸಲಾಗುತ್ತಿದೆ. ಆಯಾ ಪಶು ವೈದ್ಯಕೀಯ ಸಂಸ್ಥೆಯಲ್ಲಿ ಇವುಗಳು ಲಭ್ಯವಿದ್ದು, ಕುರಿಗಾರರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ವಿನಂತಿಸಿದರು.
ಕನಕದಾಸ ಸಂಘಕ್ಕೆ ಗೂಡ್ಸ್ ವಿತರಣೆ : ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 5 ಲಕ್ಷ ರೂ. ಸಹಾಯಧನದಲ್ಲಿ ಅರಭಾವಿಯ ಕನಕದಾಸ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘಕ್ಕೆ ಮಂಜೂರಾದ ಮಹೀಂದ್ರಾ ಗೂಡ್ಸ್ ವಾಹನವನ್ನು ಸಂಘಕ್ಕೆ ವಿತರಿಸಿದರು.
ಅರಭಾವಿಯ ಕನಕದಾಸ ಟ್ರಸ್ಟ್ ಕಮೀಟಿ ಅಧ್ಯಕ್ಷ ಸಿದ್ದಪ್ಪ ಬೋರಗುಂಡಿ, ಕನಕದಾಸ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೆಂಪಣ್ಣಾ ದೊಡ್ಡುಗೋಳ, ಮಾರುತಿ ಮಲ್ಲಿಮಾರ, ಪಶು ವೈದ್ಯಕೀಯ ಸಹಾಯಕ ನಿರ್ದೇಶಕ(ಪ್ರ) ಡಾ.ಮೋಹನ ಕಮತ, ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸಹಕಾರಿ ಸಂಘದಿಂದ ಸತ್ಕರಿಸಿದರು.

Related posts: