RNI NO. KARKAN/2006/27779|Friday, April 26, 2024
You are here: Home » breaking news » ಗೋಕಾಕ:ಭಾರತೀಯ ಮಹಿಳೆಯರಲ್ಲಿ ಅತ್ಯ-ಅದ್ಭುತವಾದ ಶಕ್ತಿ ಇದೆ : ಕಾಯಕಶ್ರೀ ಪ್ರಶಸ್ತಿ ಸ್ವೀಕರಿಸಿದ ಡಾ.ಟೇಸ್ಸಿ ಥಾಮಸ್

ಗೋಕಾಕ:ಭಾರತೀಯ ಮಹಿಳೆಯರಲ್ಲಿ ಅತ್ಯ-ಅದ್ಭುತವಾದ ಶಕ್ತಿ ಇದೆ : ಕಾಯಕಶ್ರೀ ಪ್ರಶಸ್ತಿ ಸ್ವೀಕರಿಸಿದ ಡಾ.ಟೇಸ್ಸಿ ಥಾಮಸ್ 

ಭಾರತೀಯ ಮಹಿಳೆಯರಲ್ಲಿ ಅತ್ಯ-ಅದ್ಭುತವಾದ ಶಕ್ತಿ ಇದೆ : ಕಾಯಕಶ್ರೀ ಪ್ರಶಸ್ತಿ ಸ್ವೀಕರಿಸಿದ ಡಾ.ಟೇಸ್ಸಿ ಥಾಮಸ್

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 3 :

 

ಭಾರತೀಯ ಮಹಿಳೆಯರಲ್ಲಿ ಅತ್ಯ-ಅದ್ಭುತವಾದ ಶಕ್ತಿ ಇದ್ದು, ಶಿಸ್ತು,ಸಂಯಮ, ಕಾರ್ಯಕ್ಷಮತೆಯಿಂದ ಮನಸ್ಸು ಪೂರ್ವಕವಾಗಿ ಮುನ್ನುಗ್ಗಿದ್ದರೇ ಸಾಧಕರಾಗಲು ಸಾಧ್ಯ ಎಂದು ಮಹಿಳಾ ವಿಜ್ಞಾನಿ ಭಾರತದ ಕ್ಷಿಪಣಿ ಮಹಿಳೆ ಡಾ. ಟೆಸ್ಸಿ ಥಾಮಸ್ ಹೇಳಿದರು.
ಸೋಮವಾರ ಸಂಜೆ ನಗರದ ಶೂನ್ಯ ಸಂಪಾದನ ಮಠದ ಕಾಯಕಯೋಗಿ ಲಿಂಗೈಕ್ಯ ಬಸವ ಮಹಾಸ್ವಾಮಿಜಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ 15ನೇ ಶರಣ ಸಂಸ್ಕೃತಿ ಉತ್ಸವ, ಮಹಿಳಾ ಸಮಾವೇಶ ಸಮಾರಂಭದಲ್ಲಿ ಶ್ರೀಮಠದ ವತಿಯಿಂದ ನೀಡಲಾದ 1 ಲಕ್ಷ ನಗದು ಹಾಗೂ ಕಾಯಕಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ತಾಯಿಯಿಂದ ಜಗತ್ತು ಪ್ರಾರಂಭವಾಗುತ್ತದೆ. ಜೀವನದಲ್ಲಿ ಎಲ್ಲ ಬದಲಾವಣೆಯೂ ಕೂಡಾ ತಾಯಿಯಿಂದ ಆರಂಭವಾಗುತ್ತದೆ. ನಾನು ಡಾ: ಎಪಿಜೆ ಅಬ್ದುಲಕಲಾಂ ಅವರ ಕೈ ಕೆಳಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ನನ್ನ 33 ವರ್ಷಗಳ ಸಾರ್ಥಕ ಸೇವೆ ಭಾರತಕ್ಕೆ ಮೀಸಲಾಗಿದೆ. ಭಾರತಕ್ಕೆ ಚಾಲಕ ರಹಿತ ಯುದ್ಧವಿಮಾನ ತಯಾರಿಸುತ್ತೇವೆ. ಸುಸಜ್ಜಿತ ಡ್ರೋಣಗಳ ನಿರ್ಮಾಣದಿಂದ ಭಾರತವನ್ನು ಸ್ವಸಮರ್ಥರನ್ನಾಗಿ ಮಾಡುವುದು ನಮ್ಮ ಗುರಿ. ನಾನು ದೇಶಕ್ಕಾಗಿ ದುಡಿಯುತ್ತಿದ್ದೇನೆ. ಇಂದು ಜನತೆಯ ಕೈಯಲ್ಲಿ ಎಲ್ಲ ಮಾಹಿತಿ ಇದ್ದರೂ ಸಹ ಅದನ್ನು ಸದುಪಯೋಗ ಪಡೆಯುವಲ್ಲಿ ವಿಫಲವಾಗುತ್ತಿದ್ದಾರೆ. ಯಾವುದು ಉಪಯುಕ್ತ, ಯಾವುದು ಉಪಯುಕ್ತ ಅಲ್ಲ ಎಂದು ಯೋಚಿಸಿ ಗೂಗಲ್‍ದಂತಹ ಸಾಮಾಜಿಕ ಜಾಲತಾಣದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ವಾಯು ಸೇನೆ, ಭೂ ಸೇನೆ ಮತ್ತು ನೌಕಾ ಸೇವೆಗಳ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಡಿ.ಆರ್.ಡಿ.ಒ ಸಂಸ್ಥೆ ಕಾರ್ಯನಿರ್ವಹಿಸುತ್ತದೆ. ಇದು ಸಾಮಾಜಿಕ ಸಂಸ್ಥೆ ಅಲ್ಲ, ರಕ್ಷಣಾ ಸಂಸ್ಥೆಗೆ ಪೂರಕವಾಗಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ ಎಂದ ಅವರು ಶ್ರೀಮಠದ ವತಿಯಿಂದ ಕಾಯಕಶ್ರೀ ಪ್ರಶಸ್ತಿ ದೊರೆತ್ತಿದ್ದು ನಾನು ಜೀವನ ಪರ್ಯಂತ ಮರೆಯಲಾಗದ ಪ್ರಶಸ್ತಿಯಾಗಿದೆ ಎಂದರು.
ಮಹಿಳಾ ಸಮಾವೇಶ ಸಮಾರಂಭದ ದಿವ್ಯ ಸಾನಿಧ್ಯವನ್ನು ಶಿವಮೊಗ್ಗ ಆನಂದಪುರದ ಶ್ರೀ ಬೆಕ್ಕಿನಕಲ್ಮಠದ ಶ್ರೀಮನ್ ನಿರಂಜನ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಜಿ ಆಶೀರ್ವಚನ ನೀಡಿದರು. ಶಿಗ್ಗಾಂವಿಯ ಪ್ರಗತಿಪರ ರೈತೆ ಶ್ರೀಮತಿ ರಾಜೇಶ್ವರಿ ಪಾಟೀಲ ಮಾತನಾಡಿದರು.
ವೇದಿಕೆ ಮೇಲೆ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ, ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷ ಈರಣ್ಣಾ ಕಡಾಡಿ, ಡಾ: ಮಂಗಲಾ ಕಮತ, ಸರಸ್ವತಿ ಪೂಜೇರಿ, ಪಾರ್ವತಿ ಪಾಟೀಲ, ಮಹಾದೇವಿ ಹಿರೇಮಠ, ಚೇತನಾ ಪಾಗದ, ವಿಜಯಲಕ್ಷ್ಮೀ ಸಿದ್ಧಾಪೂರಮಠ, ನೇತ್ರಾವತಿ ಲಾತೂರ, ಡಾ: ಕೀರ್ತಿ ಬೀರನಗಡ್ಡಿ, ಡಾ: ಹೇಮಾ ಕಲ್ಲೋಳಿ, ಶಕುಂತಲಾ ಕಟ್ಟಿ ಇದ್ದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಗೌರವ ಸನ್ಮಾನ ಜರುಗಿತು.
ಕಾರ್ಯಕ್ರಮವನ್ನು ಎಸ್.ಕೆ.ಮಠದ ಸ್ವಾಗತಿಸಿದರು. ಆರ್.ಎಲ್.ಮಿರ್ಜಿ ನಿರೂಪಿಸಿದರು. ಶೈಲಾ ಕೊಕ್ಕರಿ ವಂದಿಸಿದರು.

Related posts: