ಗೋಕಾಕ:ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ : ನಾಳೆ ಕರವೇ ಪ್ರತಿಭಟನೆ
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ : ನಾಳೆ ಕರವೇ ಪ್ರತಿಭಟನೆ
ಗೋಕಾಕ ಸೆ 19 : ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ನಾಳೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕದಿಂದ ಪ್ರತಿಭಟನೆ ಹಮ್ಮಿಕೋಳಲಾಗಿದೆ ಎಂದು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ತಿಳಿಸಿದ್ದಾರೆ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಹಲವು ದಿನಗಳಿಂದ ದೇಶಾದ್ಯಂತ ಹಿಂತಹ ಹೇಯ ಕೃತ್ಯಗಳು ಪದೇ ಪದೇ ನಡೆಯುತ್ತಿದ್ದು , ಅತ್ಯಾಚಾರವೆಂಬ ಪಿಡುಗು ದೇಶಕ್ಕೆ ಮಾರಕವಾಗುತ್ತಿರುವದು ಖಂಡಿನೀಯ. ಈ ಹೇಯ ಕೃತ್ಯವನ್ನು ಖಂಡಿಸಿ ನಾಳೆ ಪ್ರತಿಭಟನೆ ಹಮ್ಮಿಕೊಂಡಿದ್ದು , ತಹಶೀಲ್ದಾರ ಮುಖಾಂತರ ಕೇಂದ್ರ ಗೃಹ ಸಚಿವ ಮತ್ತು ರಾಜ್ಯದ ಗೃಹ ಸಚಿವರಿಗೆ ಮನವಿ ಅರ್ಪಿಸಿ , ಅತ್ಯಾಚಾರಿ ಅಪರಾಧಿಪರ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿಲಾಗುವದಲ್ಲದೆ ಅವನ ಪರವಾಗಿ ಯಾರು ವಕಾಲತ್ತು ವಹಿಸಿಬಾರದೆಂದು ಮನವಿ ಮಾಡಿಕೋಳಲಾಗುವದು ಖಾನಪ್ಪನವರ ತಿಳಿಸಿದ್ದಾರೆ .
ಗುರುವಾರ ಮಧ್ಯಾಹ್ನ 12 ಘಂಟಗೆ ನಡೆಯುವ ಈ ಪ್ರತಿಭಟನೆಯಲ್ಲಿ ಕಾರ್ಯಕರ್ತರು ,ನಗರದ ಸಾರ್ವಜನಿಕರು ,ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಪಕ್ಷ ಬೇಧ ಮೆರೆತು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಖಾನಪ್ಪನವರ ಮನವಿ ಮಾಡಿಕೊಂಡಿದ್ದಾರೆ
