ಮೂಡಲಗಿ:ಪಾಠದ ಜೋತೆ ಆಟವಿದ್ದರೆ ಮಾತ್ರ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಸಾಧ್ಯ : ಗೋವಿಂದ ಕೊಪ್ಪದ
ಪಾಠದ ಜೋತೆ ಆಟವಿದ್ದರೆ ಮಾತ್ರ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಸಾಧ್ಯ : ಗೋವಿಂದ ಕೊಪ್ಪದ
ಮೂಡಲಗಿ ಜು 28 : ವಿದ್ಯಾರ್ಥಿ ಜೀವನವೆಂದರೆ ಆಟ,ಪಾಠ, ಮನರಂಜನೆಯಿಂದ ಕೂಡಿರುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸಿದರೆ ಮಾತ್ರ ಏಕಾಗ್ರತೆ ಬರುವುದಿಲ್ಲಾ ಪಾಠದ ಜೋತೆ ಆಟವಿದ್ದರೆ ಮಾತ್ರ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಆಗುತ್ತೇ ಎಂದು ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಹೇಳಿದರು.
ಅವರು ಕುಲಗೋಡ ಎನ್.ಎಸ್.ಎಫ್ ಮತ್ತು ಕೇಳಕರ ಪ್ರೌಢ ಶಾಲೆಯ ಆಶ್ರಯದಲ್ಲಿ ಜರುಗಿದ ಕುಲಗೋಡÀ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಧೃಡ ಶರೀರದ ಜೊತೆಗೆ ಆರೋಗ್ಯವಂತ ಮನಸ್ಸು ನಿರ್ಮಾಣವಾಗುತ್ತೆ ಎಂದರು.
ಕೇಳಕರ ಸಂಸ್ಥೆಯ ಅಧ್ಯಕ್ಷ ಸದಾನಂದ ಪಂಡಿತ ಧ್ವಜಾತೋಹಣ ನೇರವೇರಿಸಿದರು. ರಕ್ಷಿತಾ ಗಾಣಿಗೇರ ಸಂಗಡಿಗರು ತಂದ ಕ್ರೀಡಾಜ್ಯೋತಿಯನ್ನು ವೇದಿಕೆಯಲ್ಲಿದ ಅತಿಥಿಮಹೋದಯರು ಕ್ರೀಡಾಪಟುಗಳಿಂದ ಸ್ವೀಕರಿಸಿದರು. ಎಲ್.ಆರ್.ಪೂಜೇರಿ ಕ್ರೀಡಾಪಟ್ಟುಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು.
ಕ್ರೀಡಾಕೂಟದಲ್ಲಿ ಕುಲಗೋಡ. ಮಸಗುಪ್ಪಿ, ಸುಣಧೋಳಿ, ಹುಣಶ್ಯಾಳ ಪಿ.ವಾಯ್, ಯಾದವಾಡÀ. ಅವರಾದಿ, ಕೊಪದಟ್ಟಿ ಶಾಲೆಗಳ ಮಕ್ಕಳು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಶಂಕರಗೌಡ ಪಾಟೀಲ. ಗ್ರಾಪಂ ಅಧ್ಯಕ್ಷೆ ಶಕುಂತಲಾ ಚಿಪ್ಪಲಕಟ್ಟಿ. ವಿಠ್ಠಲ ಸವದತ್ತಿ, ಆರ್.ಕೆ ಪಾಟೀಲ, ಎಸ್.ಎಸ್.ಪರುಶೆಟ್ಟಿ, ಪ್ರಕಾಶ ಬೀಸನಕೊಪ್ಪ, ದುಂಡಪ್ಪ ಹರಿಜನ, ಮಾರುತಿ ಬಾಗಿಮನಿ, ಎಸ್.ಎ.ಬೇಗ, ಮಹಾಂತೇಶ ಬೆಟಗೆರಿ, ಸಂದಾನಂದ ಪಂಡಿತ, ಕೃಷ್ಣಪ್ಪ ಯರಗಟ್ಟಿ, ಭೀಮಶಿ ಕುರುವಚನ್ನಾಳ ಹಾಗೂ ದೈಹಿಕ ಶಿಕ್ಷಕರು, ಮಕ್ಕಳು, ಗ್ರಾಮಸ್ಥರು ಇದ್ದರು.
ಆರ್.ಕೆ ಕುಲಕರ್ಣಿ ನಿರೂಪಿಸಿ. ಎಸ್.ಎಸ್.ಪರುಶೆಟ್ಟಿ ಸ್ವಾಗತಿಸಿದರು, ಎಲ್.ಆರ್.ಭಜಂತ್ರಿ ವಂದಿಸಿದರು.