RNI NO. KARKAN/2006/27779|Sunday, August 3, 2025
You are here: Home » breaking news » ಘಟಪ್ರಭಾ:ಗಣೇಶ ಚತುರ್ಥಿ ಹಾಗೂ ಮೊಹರಮ್ ಹಬ್ಬದ ನಿಮಿತ್ತ ಶಾಂತಿ ಸಭೆ

ಘಟಪ್ರಭಾ:ಗಣೇಶ ಚತುರ್ಥಿ ಹಾಗೂ ಮೊಹರಮ್ ಹಬ್ಬದ ನಿಮಿತ್ತ ಶಾಂತಿ ಸಭೆ 

ಗಣೇಶ ಚತುರ್ಥಿ ಹಾಗೂ ಮೊಹರಮ್ ಹಬ್ಬದ ನಿಮಿತ್ತ ಶಾಂತಿ ಸಭೆ

ಘಟಪ್ರಭಾ ಸೆ 8 : ಗಣೇಶ ಚತುರ್ಥಿ ಹಾಗೂ ಮೊಹರಮ್ ಹಬ್ಬದ ನಿಮಿತ್ತ ಘಟಪ್ರಭಾ ಪೋಲಿಸ ಠಾಣೆಯಲ್ಲಿ ಶಾಂತಿ ಸಭೆಯನ್ನು ಶುಕ್ರವಾರ ಸಂಜೆ ಕರೆಯಲಾಗಿತ್ತು.
ಈ ಸಂದರ್ಭದಲ್ಲಿ ಗೋಕಾಕ ಡಿ.ವಾಯ್.ಎಸ್.ಪಿ ಡಿ.ಟಿ.ಪ್ರಭು ಮಾತನಾಡಿ, ಘಟಪ್ರಭಾ ಪಟ್ಟಣವು ಮೂದಲಿನಿಂದಲೂ ಶಾಂತಿ ಸೌಹಾರ್ದತೆಯಿಂದ ಎಲ್ಲ ಹಬ್ಬಗಳನ್ನು ಅಚರಿಸುತ್ತ ಬಂದಿದ್ದು ಯಾವದೇ ತೊಂದರೆ ಇಲ್ಲ. ಅದರೂ ಎಲ್ಲರು ಕಾನೂನಿನ ನಿಯಮಗಳ ಪ್ರಕಾರ ಮೊಹರಮ್ ಹಾಗೂ ಗಣೇಶ ಚತುರ್ಥಿಯನ್ನು ಅಚರಣೆ ಮಾಡಬೇಕು. ಯಾವದೇ ಅಹಿತಕರ ಘಟನೆ ಜರುಗದಂತೆ ಸೂಕ್ತ ಪೊಲೀಸ ಬಂದೋಬಸ್ತ ಮಾಡಲಾಗುವುದು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮೂಡಲಗಿ ಸಿಪಿಆಯ್ ವೆಂಕಟೇಶ ಮುರನಾಳ, ಘಟಪ್ರಭಾ ಪಿಎಸಆಯ ಎಸ್.ದೇವಾನಂದ, ಪಟ್ಟಣದ ಹಿರಿಯರಾದ ಡಿ.ಎಂ.ದಳವಾಯಿ, ಗ್ರಾ.ಪಂ ಅಧ್ಯಕ್ಷ ಎಚ್.ಐ.ಬೆಣವಾಡಿ, ಸುಧೀರ ಜೋಡಟ್ಟಿ, ಸುರೇಶ ಪಾಟೀಲ, ಜಿ.ಎಸ್.ರಜಪೂತ, ಜಾಕೀರ ಬಾಡಕರ, ಸುರೇಶ ಪೂಜಾರಿ, ಮಲ್ಲು ಕೋಳಿ, ಕೃಷ್ಣಾ ಗಂಡವ್ವಗೋಳ, ಮೌಲಾ ಬಾಗವಾನ, ದೌಲತ ದೇಸಾಯಿ, ಸಲೀಮ ಕಬ್ಬೂರ, ಸುರೇಶ ದೇವಮಾನೆ, ರಫೀಕ ಸಯ್ಯದ, ಅಪ್ಪಾಸಾಬ ಮುಲ್ಲಾ ಸೇರಿದಂತೆ ಅನೇಕರು ಇದ್ದರು.

Related posts: