RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ರಾಜಾಪೂರ ಪಿಕೆಪಿಎಸ್‍ನ ಅಧ್ಯಕ್ಷರಾಗಿ ಕಮತಿ, ಉಪಾಧ್ಯಕ್ಷರಾಗಿ ಖನದಾಳಿ ಅವಿರೋಧ ಆಯ್ಕೆ

ಗೋಕಾಕ:ರಾಜಾಪೂರ ಪಿಕೆಪಿಎಸ್‍ನ ಅಧ್ಯಕ್ಷರಾಗಿ ಕಮತಿ, ಉಪಾಧ್ಯಕ್ಷರಾಗಿ ಖನದಾಳಿ ಅವಿರೋಧ ಆಯ್ಕೆ 

ರಾಜಾಪೂರ ಪಿಕೆಪಿಎಸ್‍ನ ಅಧ್ಯಕ್ಷರಾಗಿ ಕಮತಿ, ಉಪಾಧ್ಯಕ್ಷರಾಗಿ ಖನದಾಳಿ ಅವಿರೋಧ ಆಯ್ಕೆ

ಗೋಕಾಕ ಸೆ 6 : ತಾಲೂಕಿನ ರಾಜಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ರಾಜಾಪೂರ ಇದರ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯು ಅವಿರೋಧ ಆಯ್ಕೆ ಬುಧವಾರದಂದು ಸಂಘದ ಕಾರ್ಯಾಲಯದಲ್ಲಿ ಜರುಗಿತು.
ಅಧ್ಯಕ್ಷರಾಗಿ ಬಸವಂತ ಕಮತಿ ಮತ್ತು ಉಪಾಧ್ಯಕ್ಷರಾಗಿ ಮಹಾದೇವಿ ಖನದಾಳಿ ಅವರು ಚುನಾವಣೆಯಲ್ಲಿ ತಲಾ ಒಬ್ಬಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿ ಜಹಾಂಗೀರ ಭಾಷಾ ತಿಳಿಸಿದರು.
ಈ ಸಂದರ್ಭದಲ್ಲಿ ಸದಸ್ಯರುಗಳಾದ ಯಮನಪ್ಪ ಐದುಡ್ಡಿ, ರಾಮಚಂದ್ರ ಪಾಟೀಲ, ಕರೆಪ್ಪ ಜೋಕ್ಕಾನಟ್ಟಿ, ಸಿದ್ದಪ್ಪ ತುಕ್ಕಾನಟ್ಟಿ, ಅರ್ಜುನ ಪಂಡ್ರೋಳಿ, ಮುತ್ತೇಪ್ಪ ಜಟ್ಟಿನ್ನವರ, ರಮೇಶ ಮೇದಾರ, ದಶರಥ ಹರಿಜನ, ಚಂದ್ರವ್ವ ಅರಿಕೇರಿ, ಗೋಪಾಲ ಪಾಕನಟ್ಟಿ, ಮುಖಂಡರಾದ ವಿಠ್ಠಲ ಪಾಟೀಲ, ರಾಜು ಬೈರುಗೋಳ, ಸಂಗಯ್ಯ ಹೊನೂರ, ಮಹಾದೇವ ತುಕ್ಕಾನಟ್ಟಿ, ಬಸವರಾಜ ಪಂಡ್ರೋಳಿ, ಬೈರಪ್ಪ ಯಕ್ಕುಂಡಿ, ಪರಸಪ್ಪ ವಗ್ಗ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ರಾಮ ಕಟ್ಟಿಕಾರ ಸೇರಿದಂತೆ ಇತರರು ಇದ್ದರು.

Related posts: