ಗೋಕಾಕ:ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ : ಠಾಣೆಗೆ ಮುತ್ತಿಗೆ ಹಾಕಿ ದಿಢೀರ್ ಪ್ರತಿಭಟನೆ , ಆರೋಪಿ ಬಂಧನ
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ : ಠಾಣೆಗೆ ಮುತ್ತಿಗೆ ಹಾಕಿ ದಿಢೀರ್ ಪ್ರತಿಭಟನೆ , ಆರೋಪಿ ಬಂಧನ
ಗೋಕಾಕ ಸೆ 18 : 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ . ರವಿವಾರದಂದು ಚಾಕಲೆಟ ಕೊಡಿಸುವದಾಗಿ ಕರೆದು ಅತ್ಯಾಚಾರ ವೆಸಗಿದ್ದಾನೆ ಎಂದು ಹೆಳಲಾಗುತ್ತಿದೆ
ನಗರದ ಹಾಳಬಾಗ ಗಲ್ಲಿಯ 6 ವಯಸ್ಸಿನ ಅಪ್ರಾಪ್ತ ಬಾಲಕಿಯ ಮೇಲೆ ಬಸವರಾಜ ಲಕ್ಷ್ಮಣ ಬೋಸಲೆ (25) ಎಂಬಾತ ಅತ್ಯಾಚಾರ ವೆಸಗಿದ್ದಾನೆ ಎಂದು ಆರೋಪಿಸಿ ನಗರದ ಸಾರ್ವಜನಿಕರು ನಗರ ಪೋಲಿಸ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ
ಆರೋಪಿಯನ್ನು ಬಂಧಿಸಿರುವ ಪೊಲೀಸರು ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಬಾಲಕಿಯನ್ನು ವೈದ್ಯಕೀಯ ಪರೀಕ್ಷಿಗೆ ಕಳುಹಿಸಿದ್ದಾರೆಂದು ತಿಳಿದು ಬಂದಿದ್ದು , ಸ್ಥಳದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ
ಕಲ್ಲು ತುರಾಟ : ಪ್ರಕರಣದಿಂದ ರೊಚ್ಚಿಗೆದ್ದ ಸಾರ್ವಜನಿಕರು ಕಲ್ಲು ತುರಾಟ ನಡೆಸಿದ್ದ ಪರಿಣಾಮ ಕೆಎಸ್ಆರಟಿಸಿ ಬಸ್ ಮತ್ತು ಖಾಸಗಿ ವಾಹನಗಳು ಜಕ್ಕಂ ಗೊಂಡಿವೆ.
ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಭೇಟಿ :
ಪ್ರಕರಣದ ಮಾಹಿತಿಯನ್ನು ಪಡೆದು ನಗರಕ್ಕೆ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ರವೀಂದ್ರ ಗಡಾದಿ ಭೇಟಿ ನೀಡಿದ್ದು , ಗುಂಪು ಗಲಭೆ ಯಾಗದಂತೆ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಕಾರ್ಯಪ್ರವೃತವಾಗಿದ್ದಾರೆ . ಸ್ಥಳದಲ್ಲಿ ಹೆಚ್ಚಿನ ಪೊಲೀಸ ಬಂದೋಬಸ್ತ್ ಕೈಗೋಳ್ಳಲಾಗಿದೆ

