ಗೋಕಾಕ:ಆಕಸ್ಮಿಕ ಅಗ್ನಿ ಅವಘಡ : ಜಿಎನ್ಎಸ್ ಪ್ರೌಢಶಾಲೆಯ ಎರೆಡು ಕೊಠಡಿಗಳು ಭಸ್ಮ
ಆಕಸ್ಮಿಕ ಅಗ್ನಿ ಅವಘಡ : ಜಿಎನ್ಎಸ್ ಪ್ರೌಢಶಾಲೆಯ ಎರೆಡು ಕೊಠಡಿಗಳು ಭಸ್ಮ
ಗೋಕಾಕ ಅ 19 : ಇಲ್ಲಿಯ ಪುರಾಣಿಕ ವೃತ್ತದ ( ಜಲಾಲಗಲ್ಲಿ ಕೂಟ) ಸಮಿಪ ವಿರುವ ಜಿಎನ್ಎಸ್ ಪ್ರೌಢಶಾಲೆಯಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಎರೆಡು ಕೊಠಡಿಗಳು ಸುಟ್ಟು ಧ್ವಂಸವಾಗಿರುವ ಘಟನೆ ರವಿವಾರ ಬೆಳಗಿನ ಜಾವ ನಡೆದಿದೆ
ಬೆಳ್ಳಂಬೆಳಿಗ್ಗೆ ಸಾರ್ವಜನಿಕರು ವಾಯು ವಿಹಾರಕ್ಕೆ ಹೊಗುವ ಸಂಧರ್ಭದಲ್ಲಿ ಬೆಂಕಿ ತಗುಲಿದನ್ನು ಕಂಡು ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ . ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರೂ ಸಹ ಅಷ್ಟೋತ್ತಿಗೆ ಶಾಲೆಯ ಎರೆಡು ಕೊಠಡಿಗಳು ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ.
ಶಾಲೆಗೆ ಇಲ್ಲಿತವರೆಗು ವಿದ್ಯುತ್ ವ್ಯವಸ್ಥೆ ಇಲ್ಲದಿದ್ದರೂ ಸಹ ಅಗ್ನಿ ಅವಘಡ ಸಂಭವಿಸಿದ್ದು ಹೇಗೆ ಎಂಬ ಅನುಮಾನಗಳು ಸೃಷ್ಟಿಯಾಗಿ ಯಾರೋ ದುರ್ಷ್ಕಮಿಗಳು ಈ ಕೃತ್ಯ ವೆಸಗಿರಬಹುದೆಂದು ಹೇಳಲಾಗುತ್ತಿದೆ
ಈ ಅಗ್ನಿ ಅವಘಡದಲ್ಲಿ ಶಾಲಾ ಕೊಠಡಿಯಲ್ಲಿ ಇರುವ ಡೆಸ್ಕ್ , ಕುರ್ಚಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ ಎಂದು ತಿಳಿದು ಬಂದಿದೆ
ವಿಷಯ ತಿಳಿದು ಶಾಲೆಗೆ ಬೇಟಿ ನೀಡಿರುವ ಮದ್ಯಾಹ್ನ ಬಿಸಿಯೂಟ ಶಿಕ್ಷಣಾಧಿಕಾರಿ ಜಿ.ಬಿ ಬಳಗಾರ , ಶಾಲೆಯ ಮುಖ್ಯೋಪಾಧ್ಯಾಯ ಗೋಪಾಲ ಮಾಳಗಿ , ದೈಹಿಕ ಪರಿವಿಕ್ಷಕ ಸೊಲೆಗಾಂವಿ ಪರಿಶೀಲನೆ ನಡೆಯಿಸಿ ಪ್ರಕರಣ ದಾಖಲಿಸಿದ್ದಾರೆ
ಸ್ಥಳಕ್ಕೆ ಬೇಟಿ ನೀಡಿರುವ ಗೋಕಾಕ ಶಹರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ .