ಗೋಕಾಕ:ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ ಅವರಿಂದ ಘಟಪ್ರಭಾ ನದಿಗೆ ಭಾಗಿಣ ಅರ್ಪಣೆ
ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ ಅವರಿಂದ ಘಟಪ್ರಭಾ ನದಿಗೆ ಭಾಗಿಣ ಅರ್ಪಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 27 :
ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಮದಾಗಿ ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಮಂಗಳವಾರದಂದು ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ ಅವರು ನಗರದ ಕಿಲ್ಲಾ ಸಮೀಪ ಘಟಪ್ರಭಾ ನದಿಗೆ ಭಾಗಿಣ ಅರ್ಪಿಸಿದರು.
ಈ ಸಂದರ್ಭದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಆಪ್ತ ಸಹಾಯಕ ಸುರೇಶ ಸನದಿ, ನಗರಸಭೆ ಉಪಾಧ್ಯಕ್ಷ ಬಸವರಾಜ ಆರೆನ್ನವರ, ಸದಸ್ಯರಾದ ಸಂತೋಷ ಮಂತ್ರಣ್ಣವರ, ಪ್ರಕಾಶ ಮುರಾರಿ, ಹನಮಂತ ಕಾಳಮ್ಮನಗುಡಿ, ಮುಖಂಡರಾದ ದುರ್ಗಪ್ಪ ಶಾಸ್ತ್ರಿಗೊಲ್ಲರ, ವಿಜಯ ಜತ್ತಿ, ಬಸವರಾಜ ದೇಶನೂರ, ಡಾ. ಎ.ಜಿ.ಜಮಾದರ, ಅಬ್ದುಲಸತ್ತಾರ ಶಾಬಾಶಖಾನ, ಲಕ್ಷ್ಮಣ ಖಡಕಬಾಂವಿ, ಲಕ್ಕಪ್ಪ ತಹಶೀಲ್ದಾರ, ಕಿರಣ ಡಮಾಮಗರ, ವಿರೇಂದ್ರ ಎಕ್ಕೇರಿಮಠ, ಪ್ರಸನ್ನ ಕುಲಕರ್ಣಿ, ನರಹರಿ ಜೋಶಿ, ವಿಶ್ವನಾಥ ಜೋಶಿ, ಶ್ರೀರಂಗ ನಾಯ್ಕ, ಜ್ಯೋತಿ ಕೋಲಾರ, ನೇತ್ರಾ ಕುರಬೇಟ, ಕುಸುಮಾ ಖನಗಾಂವಿ, ರಾಜಶ್ರೀ ವಡೇಯರ್, ಪಾರ್ವತಿ ಹಳ್ಳೂರ, ಸಂಗೀತಾ ಗೌಡರ, ಆರತಿ ಕುಲಕರ್ಣಿ, ನೀಲಾ ಜೋಶಿ ಸೇರಿದಂತೆ ಅನೇಕರು ಇದ್ದರು.