RNI NO. KARKAN/2006/27779|Sunday, June 15, 2025
You are here: Home » breaking news » ಘಟಪ್ರಭಾ:ಅರಭಾಂವಿ ಪಿಕೆಪಿಎಸ್‍ಗೆ ಅವಿರೋಧ ಆಯ್ಕೆ

ಘಟಪ್ರಭಾ:ಅರಭಾಂವಿ ಪಿಕೆಪಿಎಸ್‍ಗೆ ಅವಿರೋಧ ಆಯ್ಕೆ 

ಅರಭಾಂವಿ ಪಿಕೆಪಿಎಸ್‍ಗೆ ಅವಿರೋಧ ಆಯ್ಕೆ

ಘಟಪ್ರಭಾ ಅ 15 : ಸಮೀಪದ ಅರಭಾಂವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಅರಭಾವಿ ಮತಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಎಲ್ಲ ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ದಿ.13ರಂದು ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆದಿನವಾಗಿದ್ದರಿಂದ ಈ ಅವಿರೋಧ ಆಯ್ಕೆ ಜರುಗಿತು.
ಸನ್ 1976-77ರಲ್ಲಿ ಸಂಘವು ಸ್ಥಾಪನೆಗೊಂಡಿದ್ದು ಈ ಸಲ ಪ್ರಥಮ ಬಾರಿಗೆ ಅವಿರೋಧ ಆಯ್ಕೆ ಜರುಗಿದ್ದು ಇತಿಹಾಸವಾಗಿದೆ. ಒಟ್ಟು 12 ಸದಸ್ಯರನ್ನು ಹೊಂದಿರುವ ಸಂಘವು ಸಾಮಾನ್ಯ ವರ್ಗದಿಂದ ದುಂಡಪ್ಪ ನಿಂಗನ್ನವರ, ಲಗಮಪ್ಪ ಪೂಜೇರಿ,ಮಲ್ಲಪ್ಪ ಮಾಳ್ಯಾಗೋಳ, ದುಂಡಪ್ಪ ಚಿಗರಿತೋಟ, ಹನಮಂತ ಚಿಪ್ಪಲಕಟ್ಟಿ, ಪ್ರವರ್ಗ ಅ ದಿಂದ ಲಕ್ಷ್ಮಣ ಕೋಳಿ, ಕೆಂಚಪ್ಪ ಮಂಟೂರ, ಮಹಿಳಾ ವರ್ಗದಿಂದ ಇಂದ್ರವ್ವ ತಮದಡ್ಡಿ, ಶಾಂತವ್ವ ಶೀಳನವರ, ಪರಿಶಿಷ್ಟ ಜಾತಿ ವರ್ಗದಿಂದ ರಾಮಪ್ಪ ತಳವಾರ, ಪರಿಶಿಷ್ಟ ಪಂಗಡ ವರ್ಗದಿಂದ ವಿಕಾಸ ಪೂಜೇರಿ, ಬಿನ್ ಸಾಲಗಾರ ವರ್ಗದಿಂದ ಸದಾಶಿವ ಅಂತರಗಟ್ಟಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಬರುವ ದಿ.19 ರಂದು ಸಂಘದ ಚುನಾವಣೆ ಸಮಯ ನಿಗದಿ ಪಡಿಸಿದ್ದು ದಿ.13ರಂದು ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದ್ದರಿಂದ ಒಟ್ಟು 40 ಜನ ಸದಸ್ಯರು ನಾಮಪತ್ರ ಸಲ್ಲಿಸಿದ್ದು ಅದರಲ್ಲಿ ಸ್ವ ಇಚ್ಚೇಯಿಂದ 28 ಜನ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದರಿಂದ ಈ ಅವಿರೋಧ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿ ಬನಕಪ್ಪಾ ಸೋಮನ್ನವರ ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಗ್ರಾಮದ ಮುಖಂಡರಾದ ಬಸವರಾಜ ಮಾಳೇದವರ, ಶಂಕರ ಬಿಲಕುಂದಿ, ಹೊನ್ನಜ್ಜ ಕೋಳಿ, ಭೀಮಪ್ಪ ಹಳ್ಳೂರ, ನಿಂಗಪ್ಪ ಈಳಿಗೇರ, ಮಹಾದೇವ ತಾಂಬಡಿ, ಮುತ್ತೇಪ್ಪ ಝಲ್ಲಿ, ಶಿವಮೂರ್ತಿ ಹುಕ್ಕೇರಿ, ಅಶೋಕ ಖಂಡ್ರಟ್ಟಿ, ಭೀಮಪ್ಪ ಅಂತರಗಟ್ಟಿ, ಶಿವಲಿಂಗಪೂಜೇರಿ, ಶಂಕರ ಗೋರಖನಾಥ, ಕಲ್ಲೋಳೆಪ್ಪ ಜಮಖಂಡಿ, ನಿಂಗಪ್ಪ ಅಂತರಗಟ್ಟಿ, ದೇವೆಂದ್ರ ಅರಭಾವಿ, ರಾಯಪ್ಪ ಬಂಡಿವಡ್ಡರ, ರಾಮಪ್ಪ ಬೆಣಚಿನಮರ್ಡಿ, ಪರಸಪ್ಪ ಸಣ್ಣಾಪನಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣ ಜಡಕಿನ ಇದ್ದರು.

Related posts: