RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಸಿಡಿ ಪ್ರಕರಣ : ರಮೇಶ ಜಾರಕಿಹೊಳಿ ವಿರುದ್ಧ ವ್ಯವಸ್ಥಿತ ಷಡ್ಯಂತ್ರ : ಬೆಂಬಲಿಗರಿಂದ ಆತ್ಮಾಹುತಿ ಯತ್ನ , ನಗರದಲ್ಲಿ ಸ್ವಯಂ ಘೋಷಿತ ಬಂದ್

ಗೋಕಾಕ:ಸಿಡಿ ಪ್ರಕರಣ : ರಮೇಶ ಜಾರಕಿಹೊಳಿ ವಿರುದ್ಧ ವ್ಯವಸ್ಥಿತ ಷಡ್ಯಂತ್ರ : ಬೆಂಬಲಿಗರಿಂದ ಆತ್ಮಾಹುತಿ ಯತ್ನ , ನಗರದಲ್ಲಿ ಸ್ವಯಂ ಘೋಷಿತ ಬಂದ್ 

ಸೀಮೆ ಎಣ್ಣೆ ಸುರಿದುಕೊಂಡು ಆತ್ಮಾಹುತಿಗೆ ಯತ್ನಿಸುತ್ತಿರುವ ಶಾಸಕ ರಮೇಶ ಜಾರಕಿಹೊಳಿ ಅವರ ಬೆಂಬಲಿಗರು

ಸಿಡಿ ಪ್ರಕರಣ : ರಮೇಶ ಜಾರಕಿಹೊಳಿ ವಿರುದ್ಧ ವ್ಯವಸ್ಥಿತ ಷಡ್ಯಂತ್ರ : ಬೆಂಬಲಿಗರಿಂದ ಆತ್ಮಾಹುತಿ ಯತ್ನ , ನಗರದಲ್ಲಿ ಸ್ವಯಂ ಘೋಷಿತ ಬಂದ್

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 3 :

 

ಲೈಂಗಿಕ ಸಿಡಿ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ಮಾಡಲಾಗಿದ್ದು , ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನವರು ರಮೇಶ ಜಾರಕಿಹೊಳಿ ಅವರ ರಾಜೀನಾಮೆಯನ್ನು ಅಂಗೀಕರಿಸಬಾರದೆಂದು ಆಗ್ರಹಿಸಿ ಬುಧವಾರದಂದು ಶಾಸಕ ರಮೇಶ ಜಾರಕಿಹೊಳಿ ಅವರ ಬೆಂಬಲಿಗರು ಮೈಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಆತ್ಮಾಹುತಿ ಮಾಡಿಕೊಳ್ಳುವ ಘಟನೆ ಜರುಗಿತ್ತು.

 

ನಗರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಶಾಸಕರ ಬೆಂಬಲಿಗರು

ಮಧ್ಯಾಹ್ನ 12 ಘಂಟೆ ಸುಮಾರಿಗೆ ಶಾಸಕ ರಮೇಶ ಜಾರಕಿಹೊಳಿ ಅವರ ಮೇಲೆ ಬಂದಿರು ಪ್ರಕಣರದ ಬಗ್ಗೆ ಸಿಓಡಿ , ಸಿಬಿಐ ತನಿಖೆ ಮಾಡುವಂತೆ ಆಗ್ರಹಿಸಿ ರಮೇಶ ಜಾರಕಿಹೊಳಿ ಅವರ ಬೆಂಬಲಿಗರು ನಗರದ ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಿಸುತ್ತಿರುವ ಸಮಯದಲ್ಲಿ ಶಾಸಕರಿಗೆ ಬೆಂಬಲ ವ್ಯಕ್ತಪಡಿಸಿ ಕೆಲ ಬೆಂಬಲಿಗರು ತಮ್ಮ ಮೈಮೇಲೆ ಸೀಮೆ ಎಣ್ಣೆ ಎರಚಿಕೊಂಡು ಶಾಸಕರ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಆತ್ಮಾಹುತಿ ಮಾಡಿಕೊಳ್ಳಲು ಎತ್ತಿಸಿದರು. ಇದನ್ನು ಗಮನಿಸಿದ ಪೊಲೀಸರು ಮಧ್ಯ ಪ್ರವೇಶಿಸಿ ಮುಂದಾಗುವ ಆನಾಹುತವನ್ನು ತಪ್ಪಿಸಿ ಘಟನೆಗೆ ಕಾರಣರಾದವರನ್ನು ತಮ್ಮ ವಶಕ್ಕೆ ಪಡೆದಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ ಅವರು ಬೆಂಬಲಿಗರು ರಾಜಕೀಯ ಷಡ್ಯಂತ್ರದಿಂದ ರಮೇಶ ಜಾರಕಿಹೊಳಿ ಅವರ ಹೆಸರು ಕೆಡಿಸಲು ಈ ಪಿತ್ತೂರಿ ನಡೆದಿದ್ದು, ಕಳೆದ ಮೂರು ದಶಕಗಳಿಂದ ರಮೇಶ ಜಾರಕಿಹೊಳಿ ಅವರು ಈ ಭಾಗದ ಜನರ ಆಶೋತ್ತರಗಳಿಗೆ ಸ್ವಂದಿಸಿ ಸಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟು ಜನರ ದೇವರಾಗಿ ಹೊರಹೊಮ್ಮಿ , ರಾಜ್ಯ ,ರಾಷ್ಟ್ರ ರಾಜಕಾರಣದಲ್ಲಿ ಜಾರಕಿಹೊಳಿ ಮನೆತನ ತಮ್ಮದೇ ಆದ ಛಾಪು ಮೂಡಿಸಿ ಪ್ರತಿಷ್ಠಿತ ಕುಟುಂಬವಾಗಿ ಹೋರ ಹೊಮ್ಮಿದ್ದು ಇದನ್ನು ಸಹಿಸದ ಕೆಲ ವ್ಯಕ್ತಗಳು ವ್ಯವಸ್ಥಿತವಾಗಿ ಷಡ್ಯಂತ್ರ ನಡೆಯಿಸಿ ಶಾಸಕ ರಮೇಶ ಜಾರಕಿಹೊಳಿ ಮತ್ತು ಜಾರಕಿಹೊಳಿ ಕುಟುಂಬಕ್ಕೆ ಮುಗಿಸಲು ಪಿತೂರಿ ನಡೆಸಿದ್ದಾರೆಂದು ಆರೋಪಿ‌ಸಿರುವ ಬೆಂಬಲಿಗರು
ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ಅವರು ರಮೇಶ ಜಾರಕಿಹೊಳಿ ಅವರ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸಬಾರದು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿರುವುದು

ನಗರದಲ್ಲಿ ಸ್ವಯಂ ಘೋಷಿತ ಬಂದ್ : ತ್ರೀವ ಗಂಭೀರತೆ ಪಡೆದಿರುವ ಶಾಸಕ ರಮೇಶ ಜಾರಕಿಹೊಳಿ ಪ್ರಕರಣ ತಣ್ಣಗಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ, ಶಾಸಕ ರಮೇಶ ಜಾರಕಿಹೊಳಿ ಅವರ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸಬಾರದೆಂದು ಪಟ್ಟ ಹಿಡಿದಿರುವ ಗೋಕಾಕ ಮತಕ್ಷೇತ್ರದ ಜನರು ನಗರದಲ್ಲಿ ಅಂಗಡಿ , ಮುಗ್ಗಟ್ಟುಗಳನ್ನು ಸ್ವಯಂ ಘೋಷಿತ ಬಂದ್ ಮಾಡಿ ಶಾಸಕರಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ

Related posts: