RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ಪರಿಸರ ರಕ್ಷಣೆಗಾಗಿ ಪ್ಲಾಸ್ಟಿಕ್ ನಿಷೇಧ ಅತ್ಯವಶ್ಯವಾಗಿದೆ : ವಿಶ್ವನಾಥ ಕಡಕೋಳ

ಗೋಕಾಕ:ಪರಿಸರ ರಕ್ಷಣೆಗಾಗಿ ಪ್ಲಾಸ್ಟಿಕ್ ನಿಷೇಧ ಅತ್ಯವಶ್ಯವಾಗಿದೆ : ವಿಶ್ವನಾಥ ಕಡಕೋಳ 

ಪರಿಸರ ರಕ್ಷಣೆಗಾಗಿ ಪ್ಲಾಸ್ಟಿಕ್ ನಿಷೇಧ ಅತ್ಯವಶ್ಯವಾಗಿದೆ : ವಿಶ್ವನಾಥ ಕಡಕೋಳ

ಗೋಕಾಕ ಅ 14 : ಪರಿಸರ ರಕ್ಷಣೆಗಾಗಿ ಪ್ಲಾಸ್ಟಿಕ್ ನಿಷೇಧ ಅತ್ಯವಶ್ಯವಾಗಿದೆ ಎಂದು ಗೋಕಾಕ ಶಿಕ್ಷಣ ಸಂಸ್ಥೆಯ ಚೇರಮನ್ ವಿಶ್ವನಾಥ ಕಡಕೋಳ ಹೇಳಿದರು.
ಅವರು ಮಂಗಳವಾರದಂದು “72ನೇ ಸ್ವಾತಂತ್ರ್ಯ ದಿನಾಚರಣೆ”É ನಿಮಿತ್ಯವಾಗಿ ಗೋಕಾಕ ಶಿಕ್ಷಣ ಸಂಸ್ಥೆಯ ನವಚೇತನ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಹಮ್ಮಿಕೊಂಡ ಪರಿಸರ ಜಾಗೃತಿ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಈ ರ್ಯಾಲಿಯಲ್ಲಿ ಶಾಲೆಯ ವಿದ್ಯಾರ್ಥಿಗಳು ಜೂನ್ ಮತ್ತು ಜುಲೈ ತಿಂಗಳಲ್ಲಿ ಸಿದ್ಧಪಡಿಸಿದ ಹತ್ತು ಸಾವಿರ ಪೇಪರ್ ಬ್ಯಾಗಗಳನ್ನು ನಗರದ ವ್ಯಾಪಾರಸ್ಥರಿಗೆ ಉಚಿತವಾಗಿ ವಿತರಿಸಿದರು. ಜೊತೆಗೆ ಎಲ್ಲ ನಾಗರಿಕರು ಹಾಗೂ ವ್ಯಾಪಾರಸ್ಥರಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಮನವಿ ಮಾಡಿದರು.
ರ್ಯಾಲಿಯಲ್ಲಿ ನಗರದ ರೋಟರಿ ಸಂಸ್ಥೆ ಅಧ್ಯಕ್ಷ ದಿಲೀಪ ಮೆಳವಂಕಿ, ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ| ಆರ್.ಬಿ.ಪಟಗುಂದಿ ಜೆ.ಸಿ.ಐ ಸಂಸ್ಥೆ ಅಧ್ಯಕ್ಷ ಜಿ.ಆರ್.ನಿಡೋಣಿ, ದೈಹಿಕ ಶಿಕ್ಷಣಾಧಿಕಾರಿ ವಿಜಯಕುಮಾರ ಸೊಲೆಗಾಂವಿ, ಪೌರಾಯುಕ್ತ ಎಂ.ಎಚ್.ಅತ್ತಾರ, ಶಾಲೆಯ ಮುಖ್ಯೋಪಾಧ್ಯಾಯ ಎಸ್.ಕೆ.ಮಠದ, ಮಹೇಶ್ವರಿ ಶಿಕ್ಷಣ ಸಂಸ್ಥೆಯ ಗಿರೀಶ ಝಂವರ ಸೇರಿದಂತೆ ಪ್ರಮುಖ ಸಾಮಾಜಿಕ ಸಂಸ್ಥೆಗಳು, ಮಹಿಳಾ ಮಂಡಳಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಗೃತಿ ಜಾಥಾ ಕಾರ್ಯಕ್ರಮ ಜರುಗಿತು.

Related posts: