RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ;ಸ್ವಚ್ಛತೆ ಇದಲ್ಲಿ ಆರೋಗ್ಯ ರಕ್ಷಣೆ ಸಾಧ್ಯವಿದೆ : ವಿಷ್ಣು

ಗೋಕಾಕ;ಸ್ವಚ್ಛತೆ ಇದಲ್ಲಿ ಆರೋಗ್ಯ ರಕ್ಷಣೆ ಸಾಧ್ಯವಿದೆ : ವಿಷ್ಣು 

ಸ್ವಚ್ಛತೆ ಇದಲ್ಲಿ ಆರೋಗ್ಯ ರಕ್ಷಣೆ ಸಾಧ್ಯವಿದೆ : ವಿಷ್ಣು

ಗೋಕಾಕ ಮೇ 26 : ಸ್ವಚ್ಛತೆ ಇದಲ್ಲಿ ಆರೋಗ್ಯ ರಕ್ಷಣೆ ಸಾಧ್ಯವಿದ್ದು, ಜನತೆ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡುವಂತೆ ಜೆಸಿಐ ಸಂಸ್ಥೆಯ ವಲಯ ಉಪಾಧ್ಯಕ್ಷ ವಿಷ್ಣು ಲಾತೂರ ಹೇಳಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಇಲ್ಲಿನ ಜೆಸಿಐ ಸಂಸ್ಥೆಯವರು ಆಯೋಜಿಸಿದ್ದ ಪೌರಕಾರ್ಮಿಕರಿಗೆ ಬಕೆಟ್ ಹಾಗೂ ಬ್ರಶ್ ಗಳನ್ನು ವಿತರಿಸಿ ಅವರು ಮಾತನಾಡುತ್ತಾ ನಗರದ ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವವಾಗಿದ್ದು, ಸಾರ್ವಜನಿಕರು ಅವರಿಗೆ ಸಹಕಾರ ನೀಡುವಂತೆ ಕೋರಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅಗ್ನಿ ಶಾಮಕದಳದ ಎಸ್.ಎನ್.ನಧಾಪ ಹಾಗೂ ಎಸ್.ಎನ್.ಮೆಳವಂಕಿ ಅವರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಆರೋಗ್ಯ ಅಧಿಕಾರಿ ಜೆ.ಸಿ.ತಾಂಬೂಳೆ, ಜೆಸಿಐ ಸಂಸ್ಥೆಯ ಅಧ್ಯಕ್ಷ ಶೇಖರ ಉಳ್ಳಾಗಡ್ಡಿ, ಪದಾಧಿಕಾರಿಗಳಾದ ರಜನಿಕಾಂತ್ ಮಾಳೋದೆ, ಮಿನಾಕ್ಷಿ ಸವದಿ, ರಾಜೇಶ್ವರಿ ಹಳ್ಳಿ ಇದ್ದರು.

Related posts: