RNI NO. KARKAN/2006/27779|Sunday, June 15, 2025
You are here: Home » breaking news » ಮೂಡಲಗಿ:ಉಪ ಕೃಷಿ ಉತ್ಪನ್ನ ಮಾರುಕಟ್ಟೆಯ ಸಹ ಕಾರ್ಯದರ್ಶಿಗೆ ಸತ್ಕಾರ

ಮೂಡಲಗಿ:ಉಪ ಕೃಷಿ ಉತ್ಪನ್ನ ಮಾರುಕಟ್ಟೆಯ ಸಹ ಕಾರ್ಯದರ್ಶಿಗೆ ಸತ್ಕಾರ 

ಉಪ ಕೃಷಿ ಉತ್ಪನ್ನ ಮಾರುಕಟ್ಟೆಯ ಸಹ ಕಾರ್ಯದರ್ಶಿಗೆ ಸತ್ಕಾರ

ಮೂಡಲಗಿ ಅ 6 : ಇಲ್ಲಿಯ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯ ಇಲಾಖೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸಹಾಯಕ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಎನ್.ಕೆ ಕಮನಾ ಅವರನ್ನು ಇಲ್ಲಿಯ ವ್ಯಾಪರಸ್ತರು ಸತ್ಕರಿಸಿ ಬೀಳಕ್ಕೋಟುರು.
ಈ ಸಂಧರ್ಭದಲ್ಲಿ ಗೋಕಾಕ ಕೃಷಿ ಉತ್ಪನ ಮಾರುಕಟ್ಟೆಯ ಮಾಜಿ ನಿರ್ಧೇಶಕ ಮಾರುತಿ ಮಾವರಕರ ಮಾತನಾಡಿ, ಕಮನಾ ಅವರು ರೈತಾಪಿ ಹಾಗೂ ವ್ಯಾಪಾರಸ್ಥರ, ಜನರ ಜೋತೆ ಸ್ನೇಹ, ಪ್ರೀತಿ, ವಿಶ್ವಾಸದಿಂದ ಹತ್ತು ವರ್ಷಗಳ ಕಾಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದು ಶ್ಲಾಘನೀಯವಾದದು ಎಂದರು.
ಸಮಾರಂಭದಲ್ಲಿ ಭೂ ಸಾರಿ ವ್ಯಾಪಾರಸ್ಥರಾದ ಈಶ್ವರ ಸತರಡ್ಡಿ, ಸದಾಶಿವ ಶಿಲವಂತ, ಚನ್ನಪ್ಪ ಗೋಕಾಕ, ವಿಲಾಸ ನಾಶಿ, ಎಮ್.ಎ.ಮೋಗಲ, ಪ್ರಕಾಶ ಶಿಲವಂತ, ಕೃಷ್ಣಾ ನಾಶಿ, ವೆಂಕಟೇಶ ಸತರಡ್ಡಿ, ಮಾಧು ಗೋಕಾಕ, ರಾಜು ನೇಸೂರ, ಆನಂದ ಕುರಣಿ, ಪಟ್ಟಣಶೇಟ್ಟಿ, ಭರಮಪ್ಪ ಸಪ್ತಸಾಗರ ಹಾಗೂ ಸಿಬ್ಬಂದಿ ವರ್ಗ ಆರ್.ಬಿ.ಸರಪ್ಪನ್ನವರ, ಎಸ್.ಸಿ.ಕುರಬೇಟ, ಎಸ್.ವಾಯ್.ಕುಂಬಾರ, ಬಿಎಸ್.ಹಂಜಿ ಮತ್ತಿತರು ಉಪಸ್ಥಿತರಿದ್ದರು.

Related posts: