RNI NO. KARKAN/2006/27779|Wednesday, May 20, 2026
You are here: Home » breaking news » ಬೆಳಗಾವಿ: ಶಾಸಕ ಪಿ ರಾಜೀವ ಬಿಜೆಪಿ ಸೇರುವುದು ಖಚಿತ : ಮಾಜಿ ಸಚಿವ ಶ್ರೀರಾಮುಲು ಮಾಹಿತಿ

ಬೆಳಗಾವಿ: ಶಾಸಕ ಪಿ ರಾಜೀವ ಬಿಜೆಪಿ ಸೇರುವುದು ಖಚಿತ : ಮಾಜಿ ಸಚಿವ ಶ್ರೀರಾಮುಲು ಮಾಹಿತಿ 

ಶಾಸಕ ಪಿ ರಾಜೀವ ಬಿಜೆಪಿ ಸೇರುವುದು ಖಚಿತ : ಮಾಜಿ ಸಚಿವ ಶ್ರೀರಾಮುಲು ಮಾಹಿತಿ

ಬೆಳಗಾವಿ ಜೂ 6: ಕುಡಚಿ ಶಾಸಕ ಪಿ.ರಾಜೀವ ಬಿಜೆಪಿ ಸೇರುವುದು ಖಚಿತವೆಂದು ಮಾಜಿ ಸಚಿವ ಬಿಜೆಪಿ ಸಂಸದ ಶ್ರೀ ರಾಮುಲು ತಿಳಿಸಿದ್ದಾರೆ.

ನಿನ್ನೆ ನಗರದಲ್ಲಿ ಮಾತನಾಡಿದ ಅವರು, ಬಿಎಸ್‍ಆರ್ ಪಕ್ಷದಿಂದ ಆಯ್ಕೆಯಾಗಿದ್ದ ಪಿ.ರಾಜೀವ ಅವರು ಬಿಜೆಪಿ ಸೇರ್ಪಡೆ ಕುರಿತು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದರು. 

ಚಿಕ್ಕೋಡಿ ಪಟ್ಟಣದ ಸಿಎಲ್ಇ ಸಂಸ್ಥೆ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಿ.ರಾಜೀವ ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿ ಪಕ್ಷ ಸೇರುತ್ತಾರೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಹಬ್ಬಿದ್ದವು. ಈ ಸಂಬಂಧ ಶ್ರೀರಾಮುಲು ವದಂತಿಗಳಿಗೆ ಪ್ರತಿಕ್ರಿಯೆ ನೀಡಿ ತೆರೆ ಎಳೆದಿದ್ದಾರೆ

Related posts: