RNI NO. KARKAN/2006/27779|Friday, April 26, 2024
You are here: Home » breaking news » ಮೂಡಲಗಿ:ಉತ್ತರ ಕರ್ನಾಟಕ ಅಭಿವೃದ್ಧಿ ಅಂಕಿ-ಸಂಖ್ಯೆ, ದಾಖಲೆಗಳ ಸಮೇತ ಸಾರ್ವಜನಿಕರಿಗೆ ಖಚಿತ ಪಡಿಸಬೇಕು : ಭೀಮಪ್ಪ ಗಡಾದ

ಮೂಡಲಗಿ:ಉತ್ತರ ಕರ್ನಾಟಕ ಅಭಿವೃದ್ಧಿ ಅಂಕಿ-ಸಂಖ್ಯೆ, ದಾಖಲೆಗಳ ಸಮೇತ ಸಾರ್ವಜನಿಕರಿಗೆ ಖಚಿತ ಪಡಿಸಬೇಕು : ಭೀಮಪ್ಪ ಗಡಾದ 

ಉತ್ತರ ಕರ್ನಾಟಕ ಅಭಿವೃದ್ಧಿ ಅಂಕಿ-ಸಂಖ್ಯೆ, ದಾಖಲೆಗಳ ಸಮೇತ ಸಾರ್ವಜನಿಕರಿಗೆ ಖಚಿತ ಪಡಿಸಬೇಕು : ಭೀಮಪ್ಪ ಗಡಾದ

ಮೂಡಲಗಿ ಜು 29 : ಸರಕಾರ ಮತ್ತು ಪಕ್ಷದದಲ್ಲಿ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವದಕ್ಕಾಗಿ ಕೆಲ ರಾಜಕೀಯ ನಾಯಕರುಗಳು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲವೆಂದು ಹೇಳುತ್ತಿರುವದು ಸರಿಯಲ್ಲ ಕಾರಣ ಉತ್ತರ ಕರ್ನಾಟಕ್ಕೆ ಅನ್ಯಾಯವಾಗಿಲ್ಲ ಎಂಬುದನ್ನು ಅಂಕಿ-ಸಂಖ್ಯೆ, ದಾಖಲೆಗಳ ಸಮೇತ ಸಾರ್ವಜನಿಕರಿಗೆ ಖಚಿತ ಪಡಿಸಬೇಕು ಇಲ್ಲದೇ ಇದ್ದಲ್ಲಿ ಬಾಯಿ ಮುಚ್ಚಿಕೊಂಡು ಸುಮ್ಮನೆ ಕುಳಿತುಕೊಳ್ಳಬೇಕು ವಿನಾಕಾರಣ ಹೇಳಿಕೆಗಳನ್ನು ನೀಡಿ ಉತ್ತರ ಕರ್ನಾಟಕ ಭಾಗದ ಜನ ಹಿತವನ್ನು ಬಲಿ ಕೊಡಬಾರದು ಎಂದು ಉತ್ತರ ಕರ್ನಾಟಕ ಹೋರಾಟ ಸಮೀತಿ ಅಧ್ಯಕ್ಷ ಭೀಮಪ್ಪ ಗಡಾದ ಆಗ್ರಹಿಸಿದರು.
ರವಿವಾರಂದು ಮೂಡಲಗಿಯಲ್ಲಿ ಏರ್ಪಡಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲಿ ಉತ್ತರ ಕರ್ನಾಟಕಕ್ಕೆ ಮೊದಲಿನಿಂದಲೂ ಅನ್ಯಾಯವಾಗುತ್ತಲೆ ಬಂದಿರುತ್ತದೆ. ಅಲ್ಲದೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ದಶಕಗಳಿಂದಲು ಕೇಳುತ್ತಲೇ ಬಂದಿರುತ್ತದೆ ಆದರೆ ಅಭಿವೃದ್ಧಿ ವಿಷಯದಲ್ಲಿ ಇತ್ತಿಚೀನ ಸರ್ಕಾಗಳ ಮಲತಾಯಿ ದೋರಣೆಯಿಂದ ಈ ಕೂಗು ಹೆಚ್ಚಾಗುತ್ತಲೇ ತೊಡಗಿದೆ ಎಂದರು.
ಕಂದಾಯ ಗ್ರಾಮಗಳನ್ನು ರಚನೆ ಮಾಡುವಾಗ ದಕ್ಷಿಣ ಕರ್ನಾಟಕ ಭಾಗದಲ್ಲಿ 20165, ಉತ್ತರ ಕರ್ನಾಟಕ ಭಾಗದಲ್ಲಿ ಕೇವಲ 9571 ಕಂದಾಯ ಗ್ರಾಮಗಳನ್ನು ಘೋಷಿಸಲಾಗಿದೆ. ದ.ಕ ಭಾಗದಲ್ಲಿ 3564 ಮತ್ತು ಉ.ಕ 2792 ಗ್ರಾಮ ಪಂಚಾಯತಿಗಳಿದು ಇದರಿಂದ ಗ್ರಾಮ ಪಂಚಾಯತಿವಾರು ಅನುದಾನ ನೀಡುವ ಸಮಯದಲ್ಲಿ ಸಾಕಷ್ಟು ತಾರತಮ್ಯವಾಗುತಿದ್ದು. ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ ಶಾಲೆಗಳ ಸಂಖ್ಯೆಯಲ್ಲಿ ಉ.ಕ ಗಿಂತಲೂ ದ.ಕ ಭಾಗದಲ್ಲಿ ಸುಮಾರು 10000 ಶಾಲೆಗಳು ಹೆಚ್ಚು ಇದು ಇದರಂತೆ ಪ್ರೌಢ ಶಾಲೆಗಳ ಸಂಖ್ಯೆಯಲ್ಲಿ ದ.ಕ ದಲ್ಲಿ 8296 ಇದ್ದರೆ ಉ.ಕ ಕೇವಲ 5556 ಮಾತ್ರ ಇರುತ್ತವೆ. ವಿವಿಧ ಬ್ಯಾಂಕುಗಳ ಶಾಖೆಗಳು ದ.ಕ 5707 ಇದ್ದರೆ ಉ.ಕ ದಲ್ಲಿ ಕೇವಲ 2865 ಮಾತ್ರ ಕಾರ್ಯನಿರ್ವಸುತ್ತಿವೆ. ರಾಜ್ಯದಲ್ಲಿ ಅತೀ ಹೆಚು ಸಕ್ಕರೆ ಕಾರ್ಖಾನೆಗಳು ಉತ್ತರಟಕದಲ್ಲಿದ್ದರು ಕೂಡಾ ಸಕ್ಕರೆ ನಿರ್ದೇಶಕರ ಕಾರ್ಯಾಲಯ ಬೆಂಗಳೂರಿನಲ್ಲಿರುವದು ನಾಚಿಕೆ ಗೇಡಿ£ತ ಸಂಗತಿಯಾಗೆ ಎಂದು ಆಪಾದಿಸಿದರು.
ನಿವೃತ್ತ ಅಧಿಕಾರಿಯಾದ ಡಾ: ಜಾಮಾದಾರ ಅವರು ಬರೆದ ತಾರತಮ್ಯವನ್ನು ಪುಸಕ್ತದಲ್ಲಿ ಉತ್ತರ ಕರ್ನಾಟಕ್ಕೆ ಆಗಿರುವ ಅನ್ಯಾಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜನಪ್ರತಿನಿಧಿಗಳು ಉ.ಕ ಬಗ್ಗೆ ಅಭಿಮಾನ, ಗೌರವ ಇದ್ದರೆ ಅಧಿವೆಸನದಲ್ಲಿ ಚಿಂತನೆ ನಡೆಸುವದು ಅಗತ್ಯವಾಗಿದೆ. ಸುಮಾರು 500 ಕೋಟಿರೂ ವೆಚ್ಚದಲ್ಲಿ ಬೆಳಗಾವಿಯಲ್ಲಿ ನಿರ್ಮಿಸಿರು ಸುವರ್ಣ ಸೌಧ ಕಚೇರಿಗಳನ್ನು ಪ್ರಾರಂಭಿಸುವಂತೆ ಕಳೆದ 4 ವರ್ಷಗಳಿಂದ ಉ.ಕ ಭಾಗದ ಜನರು ಹೋರಾಟ ಮಾಡುತ್ತಿದ್ದರು ಯಾವುದೇ ಪ್ರಯೋಜನವಾಗಿರುವದಿಲ್ಲ, ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಸಾರ್ವಜನಿಕರ ತೇರಿಗೆಯ ಹಣದಲ್ಲಿ ಸೂಮಾರ 2 ಲಕ್ಷ ವೇತನ ಪಡೆಯುತ್ತಿರುವ ಉ.ಕ ಲೋಕಸಭಾ ಮತ್ತು ವಿಧಾನ ಸಭಾ ಸದಸ್ಯರುಗಳಿಗೆ ಹೋರಾಟ ಸಮೀತಿಯಿಂದ ಅನೇಕ ಭಾರಿ ಪತ್ರ ಬರೆದರು ಒಬ್ಬರು ಕೂಡಾ ಸರ್ಕಾರಕ್ಕೆ ಶಿಫಾರಸ್ಸು ಮಾಡದಿರುವದರಿಂದ ಇದರಿಂದ ಪಕ್ಷದಿಂದ ಹೊರ ಹಾಕಬಹುದು ಎಂದು ಹೆದರಿಂದತೆ ಕಾಣುತ್ತದೆ ಎಂದು ಭೀಮಪ್ಪ ಗಡಾದ ಆಕ್ರೋಶ ವ್ಯಕ್ತಪಡಿಸಿದರು.
ಅಭಿವೃದ್ಧಿ ದೃಷ್ಟಿಯಿಂದ ಹೊಸ ತಾಲೂಕಾ ಹಾಗೂ ಜಿಲ್ಲಾ ವಿಭಜನೆ ಮಾಡಲಾಗಿದೆ ಅದರಂತೆ ಅಭಿವೃದ್ಧಿ ದೃಷ್ಠಿಯಿಂದ ಉತ್ತರ ಕರ್ನಾಕಟ ಪ್ರತ್ಯೇಕ ರಾಜ್ಯ ಮಾಡುವದಕ್ಕೆ ಏಕೆ ಚರ್ಚಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಉತ್ತರ ಕರ್ನಾಟಕ ಭಾಗದ ಮಠಾಧೀಶರುಗಳು ಕೂಡಾ ಉ.ಕ ಪ್ರತ್ಯೇಕ ರಾಜ್ಯ ಹೋರಾಟ ಬೆಂಬಲಿಸುತ್ತಿರುವದು ಉ.ಕ ಜನರ ಹೋರಾಟಕ್ಕೆ ಆನೆ ಬಲಬಂದತ್ತಾಗಿದೆ ಪ್ರತ್ಯೇಕ ರಾಜ್ಯದ ಕುರಿತು ಈಗಾಗಲೇ ಸುಮಾರು 65 ಲಕ್ಷ ಜನರ ಅಭಿಪ್ರಾಯ ಸಂಗ್ರಹಿಸಿದ್ದು ಶೇ.90 ರಷ್ಟುಕ್ಕಿಂತಲು ಹೆಚ್ಚು ಜನರು ಪ್ರತ್ಯೇಕ ರಾಜ್ಯ ಅಗತ್ಯ ಇದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಇರುತ್ತದೆ. ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟ ನಡೆಸಲ್ಲಾಗುದು ಎಂದು ತಿಳಿಸಿದ ಅವರು ಬರುವ ಅಗಷ್ಟ 2 ರಂದು ಉ.ಕ ಪ್ರತ್ಯೇಕ ರಾಜ್ಯ ಬೇಡಿಕೆಗಾಗಿ ವಿವಿಧ ಹೋರಾಟ ಸಮೀತಿಗಳಿಂದ ಬಂದ ಆಚರಿಸಲ್ಲಾಗುತ್ತದೆ ಎಂದರು.
ಬೆಳಗಾವಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯಕ್ಕೆ 178 ಏಕರೆ ಭೂಮಿ ಮಂಜೂರು ಮಾಡುವಂತೆ ಪ್ರಸ್ತಾವಣೆ ಕಳೆದ 3 ವರ್ಷಗಳಿಮದ ಕೇಂದ್ರದಲ್ಲಿ ಉಳಿದಿದೆ ಇದ್ದರ ಬಗ್ಗೆ ದೆಹಲಿ ಪ್ರತಿನಿಧಿಗಳು ಗಮನ ಹರಿಸದಿರುವದು ವಿಪರ್ಯಾಸ ಸಂಗತಿಯಾಗಿದೆ ಎಂದರು.
ಉತ್ತರ ಕರ್ನಾಟಕಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಂದ ಅನ್ಯಾಯವಾಗಿದೆ ಎಂದು ಹೇಳುತ್ತಿರುವದು ಸತ್ಯಕ್ಕೆ ದುರವಾದದು. ಹಿಂದಿನ ಸರ್ಕಾಗಳಿಂದ ಉ.ಕ ಕ್ಕೆ ಅನ್ಯಾಯವಾಗಿದೆ. ಕುಮಾರ ಸ್ವಾಮಿಯವರು ಈ ಹಿಂದೆ ಮುಖ್ಯ ಮಂತ್ರಿಯಾದ ಸಮಯದಲ್ಲಿ ಬೆಳಗಾವಿಯಲ್ಲಿ ಸುರ್ವಣ ಸೌಧ ಕಟ್ಟಡಕ್ಕೆ ಭೂಮಿ ಪೂಜೆ ಮಾಡಿದು. ಸದಸ್ಯ ತಾವೇ ಮುಖ್ಯ ಮಂತ್ರಿ ಇರುವದರಿಂದ ಸುರ್ವಣ ಸೌಧಕ್ಕೆ 1 ತಿಂಗಳಲ್ಲಿ ಕಚೇರಿಗಳನ್ನು ಸ್ಥಳಾಂತರ ಆಗದಿದಲ್ಲಿ ಆಮರಣ ಉಪವಾಸ ಕೈಗೋಳ್ಳುವದಾಗಿ ತಿಳಿಸಿದ್ದರು.
ಪತ್ರಿಕಾ ಗೋಷ್ಠಿಯಲ್ಲಿ ಶಿವಬಸು ಹಂದಿಗುಂದ, ಚನ್ನಪ್ಪ ಅಥಣಿ, ಮಲ್ಲಪ್ಪ ತೇರದಾಳ ಉಪಸ್ಥಿತರಿದ್ದರು.

Related posts: