ಗೋಕಾಕ:ರಮೇಶ ಕ್ರೀಡಾ ಸಂಕೀರ್ಣ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ
ರಮೇಶ ಕ್ರೀಡಾ ಸಂಕೀರ್ಣ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ
ಗೋಕಾಕ ಜು 20 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಮೇಶ ಕ್ರೀಡಾ ಸಂಕೀರ್ಣ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಸಲಾಯಿತು. ಗುರುವಾರ ಮುಂಜಾನೆ ನಗರದ ತಹಶೀಲದಾರ ಕಛೇರಿಯಲ್ಲಿ ಸೇರಿದ ಕ.ರ.ವೇ ಕಾರ್ಯಕರ್ತರು ಕ್ರೀಡಾ ಸಬಲೀಕರಣ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಿ ಪಡಿಸಿ ತಹಶೀಲ್ದಾರ ಮುಖಾಂತರ ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಸಿ.ಬಿ. ರಂಗಯ್ಯ ಇವರಿಗೆ ಮನವಿಯನ್ನು ಸಲ್ಲಿಸಿದರು.
ಕಳೆದು ಒಂದು ವರ್ಷದಿಂದ ಯುವ ಸಬಲೀಕರಣ, ಕ್ರೀಡಾ ಇಲಾಖೆಯ ಅನುದಾನದಲ್ಲಿ ಬರುವ ರಮೇಶ ಕ್ರೀಡಾ ಸಂಕೀರ್ಣದಲ್ಲಿ ಕ್ರೀಡಾಸಕ್ತರಿಗಳಿಗಾಗಿ ಸ್ಥಾಪಿತವಾಗಿರುವ ಮಲ್ಟಿ ಜಿಮ್ ಮತ್ತು ಬ್ಯಾಟ್‍ಮಿಂಟನ್ ಒಳಾಂಗಣ ಕ್ರೀಡಾಂಗಣವು ಹಾಳಾಗಿ ಕ್ರೀಡಾಪಟುಗಳಲ್ಲಿ ನಿರಾಶೆ ಮೂಡಿಸುತ್ತಿದೆ. ಪೌರಾಡಳಿತ ಸಚಿವರಾದ ರಮೇಶ ಜಾರಕಿಹೊಳಿಯವರು ಮುತುವರ್ಜಿಯಿಂದ ಸ್ಥಾಪಿತಲಾಗಿರುವ ಸುಸಜ್ಜಿತ ಮಲ್ಟಿಜಿಮ್ ಮತ್ತು ಬ್ಯಾಟ್‍ಮಿಂಟನ್ ಕ್ರೀಡಾಂಗಣದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿಗಳ ನೀರ್ಲಕ್ಷ್ಯದಿಂದ ಸಂಪೂರ್ಣ ಹಾಳಾಗಿದೆ. ಜಿಮ್‍ನ ಬಿಡಿಭಾಗಗಳು ಮುರಿದಿರುವ ಪರಿಣಾಮ ದೇಹದಾಡ್ಯ ಪಟುಗಳಲ್ಲಿ ದೈಹಿಕ ಕಸರತ್ತು ಮಾಡಲು ಬಹಳಷ್ಟು ತೊಂದರೆಯಾಗುತ್ತದೆ. ಇದರ ಬಗ್ಗೆ ಕಳೆದ ಒಂದು ವರ್ಷದಿಂದ ಇಲ್ಲಿಗೆ ಬರುವ ದೇಹದಾಡ್ಯ ಪಟುಗಳು ಇಲ್ಲಿಯ ಅಧಿಕಾರಿಗಳಿಗೆ ಮೌಖಿಕವಾಗಿ ದೂರು ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಕಛೇರಿಯಲ್ಲಿರುವ ಶೌಚಾಲಯಗಳನ್ನು ಸರಿಯಾಗಿ ನಿರ್ವಹಣೆಯಾಗದೆ ದುರಸ್ತಿಯಲ್ಲಿವೆ. ಬ್ಯಾಟ್‍ಮಿಂಟನ್ ಒಳಾಂಗಣ ಕ್ರೀಡಾಂಗಣಗಳಲ್ಲಿ ಸ್ವಚ್ಚತೆ ಇಲ್ಲದೆ ಕ್ರೀಡಾಳುಗಳು ಆಡಲು ತೊಂದರೆಯಾಗುತ್ತಿದೆ. ಇಷ್ಟೆಲ್ಲಾ ಅವ್ಯವಸ್ಥೆಯಿಂದ ಕೂಡಿರುವ ಕ್ರೀಡಾ ಸಂಕೀರ್ಣವು ಅಧಿಕಾರಿಗಳ ನೀರ್ಲಕ್ಷೆಯಿಂದ ದುರಸ್ಥಿ ಕಾಣದೆ ಹಾಳಾಗಿದೆ.
ಈ ಪ್ರಕರಣವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಿ ಆದಷ್ಟೂ ಬೇಗ ಕ್ರೀಡಾ ಸಂಕೀರ್ಣವನ್ನು ದುರಸ್ಥಿಗೊಳಿಸಿ ಗೋಕಾಕಿನ ಕ್ರೀಡಾಸಕ್ತರು ಪಡುತ್ತಿರುವ ಗೋಳಿನಿಂದ ಪಾರು ಮಾಡಬೇಕೆಂದು ಸಮಸ್ತ ಕ್ರೀಡಾಪಟುಗಳ ಪರವಾಗಿ ಕರವೇ ಮನವಿಯಲ್ಲಿ ವಿನಂತಿಸಿದೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ, ಮುಗುಟ ಪೈಲವಾನ, ಮಹಾದೇವ ಮಕ್ಕಳಗೇರಿ, ದೀಪಕ ಹಂಜಿ, ರೆಹಮಾನ ಮೋಕಾಶಿ, ಸತ್ತೆಪ್ಪ ಗಾಡಿವಡ್ಡರ, ರಮೇಶ ಕಮತೆ, ಬಸು ಗಾಡಿವಡ್ಡರ, ನಿಯಾಜ ಪಟೇಲ, ಮಲ್ಲಪ್ಪಾ ಸೈದಾಪೂರ, ಲಕ್ಕಪ್ಪಾ ನಂದಿ, ಮಲ್ಲಪ್ಪಾ ಸಂಪಗಾರ, ಶಾನೂಲ ದೇಸಾಯಿ, ಶ್ರೀಕಾಂತ ಬಾದರವಾಡಿ, ಸದಾನಂದ ಬಂಬರಗಿ, ಮುತ್ತೆಪ್ಪ ಘೋಡಗೇರಿ, ರಾಜು ಪರಕನಹಟ್ಟಿ, ರವಿ ನಾವ್ಹಿ, ಆನಂದ ಖಾನಪ್ಪನವರ, ರಮೇಶ ಬಿ.ಕೆ., ಅಜೀತ ಮಲ್ಲಾಪೂರ, ವಸಂತ ಹಂಜಿ, ರಾಮ ಕೊಂಗನೊಳ್ಳಿ, ಮಲ್ಲಪ್ಪಾ ತಲೆಪ್ಪಗೋಳ, ಸಂಜು ಗಾಡಿವಡ್ಡರ, ರಾಮಣ್ಣಾ ಸಣ್ಣಲಗಮನ್ನವರ, ಮಲ್ಲೇಶ ಮಡಿವಾಳರ, ದುಂಡಪ್ಪಾ ಖಿಚಡಿ ಸೇರಿದಂತೆ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತ ಇದ್ದರು.