RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ

ಗೋಕಾಕ:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ 

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 17 :

 

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಗುರುವಾರದಂದು ಮನವಿ ಸಲ್ಲಿಸಿದರು.

ಕೊರೋನಾ ಲಾಕಡೌನ ನಿಂದಾಗಿ ರೈತರು ಅನುಭವಿಸಿರುವ ನಷ್ಟದ ಬಗ್ಗೆ ಅಂದಾಜು ಮಾಡಲು ಸಮಿತಿಯನ್ನು ನೇಮಿಸಬೇಕು. ಕೊರೋನಾದಿಂದ ಮೃತಪಟ್ಟ ಕುಟುಂಬಕ್ಕೆ ತಲಾ 10 ಲಕ್ಷ ರೂ ಪರಿಹಾರ ನೀಡಬೇಕು. ಆ ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊರಬೇಕು. ಗ್ರಾಮಾಂತರ ಪ್ರದೇಶದಲ್ಲಿ ಕೊರೋನಾ ಟೆಸ್ಟ್ ಗಳನ್ನು ಹೆಚ್ಚಿಸಬೇಕು. ಕೃಷಿ ಪರಿಕರಗಳ ಮೇಲೆ ವಿಧಿಸಿರುವ ಜಿ.ಎಸ್.ಟಿ ಹಾಗೂ ಎಸ್.ಜಿ.ಎಸ್‌.ಟಿ ಯನ್ನು ಕೈ ಬಿಡಬೇಕು. ಡಿಜೆಲ್, ಪೆಟ್ರೋಲ್ , ವಿದ್ಯುತ್ ದರ ಕಡಿಮೆ ಮಾಡಬೇಕು ಸೇರಿದಂತೆ ಇನ್ನೂ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಶಿವನಗೌಡಾ ಗೌಡರ, ಹಾಗೂ ಪದಾಧಿಕಾರಿಗಳಾದ ಶಿವಪುತ್ರ ಜಗಬಾಳ, ಬಾಳಪ್ಪ ಪಾಟೀಲ, ಆನಂದ ಪಡಿಮನಿ, ಪತ್ರಪ್ಪ ಹಡಗಿನಾಳ, ಮುತ್ತೆಪ್ಪ ಹಳ್ಳೂರ , ಅಡಿವೆಪ್ಪ ಮಲ್ಲಾಪೂರೆ, ಈರಪ್ಪ ಬೆನವಾಡ, ಅರ್ಜುನಗೌಡರ, ರಮೇಶ ಪತ್ತಾರ,ನಾಗರಾಜ್ ಪತ್ತಾರ, ರಮೇಶ ಅಂಗಡಿ, ಯಮನಪ್ಪ ಚುಂಚನೂರ ಸೇರಿದಂತೆ ಅನೇಕರು ಇದ್ದರು.

Related posts:

ಗೋಕಾಕ:170 ಕೋಟಿ ರೂ. ವೆಚ್ಚದ ಕಲ್ಮಡ್ಡಿ ಯಾತ ನೀರಾವರಿ ಯೋಜನೆಗೆ ನಾಳಿನ ಬಜೆಟ್‍ನಲ್ಲಿ ಅನುಮೋದನೆ : ಶಾಸಕ ಬಾಲಚಂದ್ರ ಜಾ…

ಗೋಕಾಕ:ಕೊರೋನಾ ಹಿನ್ನೆಲೆ : ಪ್ರತಿವರ್ಷ ಶ್ರಾವಣ ಮಾಸದ ಪ್ರಯುಕ್ತ ನಡೆಯುತ್ತಿದ್ದ ಪ್ರವಚನ ಹಾಗೂ ರುದ್ರಾಭಿಷೇಕ ರದ್ದು

ಬೆಳಗಾವಿ:ಪ್ರತಿಕೋಧ್ಯಮವನ್ನು ಸತ್ಯದ ಕಡೆಗೆ ಮುಂದುವರೆಸಿಕೊಂಡು ಹೋಗುವುದು ಬಹಳ ಮುಖ್ಯವಾಗಿದೆ : ಶಾಸಕ ಆಸೀಫ್ ಸೇಠ್ ಅಭಿಮ…