RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಪದ್ಧತಿಯನ್ನು ಎಲ್ಲರೂ ಅನುಷ್ಠಾನಕ್ಕೆ ತನ್ನಿ : ಡಾ|| ಪಿ.ಎನ್.ಯಾದವಾಡ

ಗೋಕಾಕ:ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಪದ್ಧತಿಯನ್ನು ಎಲ್ಲರೂ ಅನುಷ್ಠಾನಕ್ಕೆ ತನ್ನಿ : ಡಾ|| ಪಿ.ಎನ್.ಯಾದವಾಡ 

ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಪದ್ಧತಿಯನ್ನು ಎಲ್ಲರೂ ಅನುಷ್ಠಾನಕ್ಕೆ ತನ್ನಿ : ಡಾ|| ಪಿ.ಎನ್.ಯಾದವಾಡ

ಗೋಕಾಕ ಜು 17 : ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಪದ್ಧತಿಯನ್ನು ಎಲ್ಲರೂ ಅನುಷ್ಠಾನಕ್ಕೆ ತಂದು ಜನಸಂಖ್ಯೆಯನ್ನು ನಿಯಂತ್ರಿಸುವಂತೆ ಜೆಎಸ್‍ಎಸ್ ಪದವಿ ಮಹಾವಿದ್ಯಾಲಯ ಉಪನ್ಯಾಸಕ ಡಾ|| ಪಿ.ಎನ್.ಯಾದವಾಡ ಹೇಳಿದರು.
ಮಂಗಳವಾರದಂದು ನಗರದ ತಾಪಂ ಸಭಾ ಭವನದಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ, ರೋಟರಿ, ಇನ್ನರ್‍ವ್ಹಿಲ್ ಸಂಸ್ಥೆಗಳು ಹಾಗೂ ತುಕ್ಕಾರ ನರ್ಸಿಂಗ್ ಕಾಲೇಜ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಡ್ಯೆಂಗಿ ಜ್ವರ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಜನಸಂಖ್ಯಾ ಸ್ಪೋಟವೆನ್ನುವುದು ಇಡಿ ಜಗತ್ತೀನ ಸಮಸ್ಯೆಯಾಗಿದೆ, ನಮ್ಮ ದೇಶವು ಈ ಸಮಸ್ಯೆಯಿಂದ ಹೊರತಾಗಿಲ್ಲ, ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಹಾಗೂ ಉದ್ಯೋಗವನ್ನು ಸೃಷ್ಠಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗಳಿಗೆ ಜನಸಂಖ್ಯಾ ನಿಯಂತ್ರಣ ಮಾಡುವುದೇ ಒಂದು ಪರಿಹಾರವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕಾ ವೈದ್ಯಾಧಿಕಾರಿ ಡಾ|| ಆರ್.ಎಸ್.ಬೆಣಚಿನಮರಡಿ ಮಾತನಾಡಿ, ಸೊಳ್ಳೆಗಳ ನಿಯಂತ್ರಣದಿಂದ ಡ್ಯೆಂಗಿ ಜ್ವರವನ್ನು ನಿಯಂತ್ರಿಸಲು ಸಾಧ್ಯ, ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಮುತುವರ್ಜಿ ವಹಿಸಬೇಕೆಂದು ತಿಳಿಸಿದ ಅವರು, ಊರಿಗೆ ಒಂದು ವನ, ಮನೆಗೊಂದು ಮಗು ಎಂಬ ಆಚರಣೆಯನ್ನು ಜಾರಿಗೆ ತರಬೇಕೆಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಶಿಶು ಅಭಿವೃದ್ದಿ ಯೋಜನಾಧಿಕಾರಿ ಎ.ಎಮ್.ನೀರಗಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮಕ್ಕೂ ಮುನ್ನ ಜನ ಸಂಖ್ಯಾ ನಿಯಂತ್ರಣದ ಜಾಗೃತಿ ಜಾಥಾವು ನಗರದ ಪ್ರಮುಖ ಬೀದಿಗಳ ಸಂಚರಿಸಿ ಜಾಗೃತಿ ಮೂಡಿಸಿತು.
ಈ ಸಂದರ್ಭದಲ್ಲಿ ತಾಪಂ ಸದಸ್ಯರಾದ ಸತ್ತೆಪ್ಪ ಬಬಲಿ, ಲಗಮಣ್ಣ ನಾಗನ್ನವರ, ರೋಟರಿ ಸಂಸ್ಥೆಯ ಅಧ್ಯಕ್ಷ ದಿಲೀಪ ಮೆಳವಂಕಿ, ರೋಟರಿ ರಕ್ತ ಭಂಡಾರದ ಕಾರ್ಯದರ್ಶಿ ಸೋಮಶೇಖರ ಮಗದುಮ್ಮ, ಇನ್ನರ್‍ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ನಮೀತಾ ಆಜರಿ, ಆರೋಗ್ಯ ಇಲಾಖೆಯ ಡಾ|| ಎಸ್.ಬಿ.ಶಿಂಗ್ಯಾಗೋಳ, ಮುಖಂಡರಾದ ಬಸಗೌಡ ಹೊಳೆಯಾಚೆ, ಮುನ್ನಾ ದೇಸಾಯಿ ಸೇರಿದಂತೆ ಅನೇಕು ಇದ್ದರು.

Related posts: