RNI NO. KARKAN/2006/27779|Sunday, August 3, 2025
You are here: Home » breaking news » ಮೂಡಲಗಿ:ವಿದ್ಯಾರ್ಥಿಗಳಲ್ಲಿ ರಾಜಕೀಯ ಆಡಳಿತ ಪ್ರಜ್ಞೆ ಅವಶ್ಯಕವಿದೆ: ಎಮ್.ಜಿ.ದೇವಡಿ

ಮೂಡಲಗಿ:ವಿದ್ಯಾರ್ಥಿಗಳಲ್ಲಿ ರಾಜಕೀಯ ಆಡಳಿತ ಪ್ರಜ್ಞೆ ಅವಶ್ಯಕವಿದೆ: ಎಮ್.ಜಿ.ದೇವಡಿ 

ವಿದ್ಯಾರ್ಥಿಗಳಲ್ಲಿ ರಾಜಕೀಯ ಆಡಳಿತ ಪ್ರಜ್ಞೆ ಅವಶ್ಯಕವಿದೆ: ಎಮ್.ಜಿ.ದೇವಡಿ

ಮೂಡಲಗಿ ನ 28: ವಿದ್ಯಾರ್ಥಿಗಳಲ್ಲಿ ರಾಜಕೀಯ ಆಡಳಿತ ಪ್ರಜ್ಞೆ ಅವಶ್ಯಕವಿದೆ. ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಜ್ಞಾನ ಪ್ರತಿಯೊಬ್ಬನಿಗೂ ಗೊತ್ತಾಗಬೇಕು. ಇಂದು ನಮ್ಮ ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ತಮ್ಮ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡಾಗ ಮಾತ್ರ ಭಾರತೀಯ ಸಂವಿಧಾನಿಕ ಆಡಳಿತ, ಕಾನೂನು, ಅಧಿಕಾರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯ ಪಾತ್ರ ಇನ್ನಿತರ ಜವಾಬ್ದಾರಿಗಳು ಮತ್ತು ದೇಶದ ಆಡಳಿತದಲ್ಲಿ ಸಾಮಾನ್ಯ ಪ್ರಜೆಯ ಕರ್ತವ್ಯಗಳ ಜ್ಞಾನ ದೊರೆಯುವುದು ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ರಾಜ್ಯಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಎಮ್.ಜಿ.ದೇವಡಿ ಹೇಳಿದರು.

ಅವರು ಕರ್ನಾಟಕ ಸರಕಾರದ ಸಂಸದೀಯ ವ್ಯವಹಾರಗಳ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಚಿಕ್ಕೋಡಿ ಹಾಗೂ ಸ್ಥಳೀಯ ಆರ್.ಡಿ. ಸಂಸ್ಥೆಯ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಆಶ್ರಯದಲಿ ಮಂಗಳವಾರಂದು ಆಯೋಜಿಸಿದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪದವಿ ಪೂರ್ವ ಮಹಾವಿದ್ಯಾಲಯಗಳ ಯುವ ಸಂಸತ್ತು ಸ್ಪರ್ಧೆಂiÀ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇಂದು ನಮ್ಮ ದೇಶದ ಆಡಳಿತ ನಿರ್ವಹಣೆಯಲ್ಲಿ ವಿದ್ಯಾವಂತ ನಾಗರಿಕರ ಅವಶ್ಯವಿದೆ ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭಾವಂತಿಕೆಯನ್ನು ಆಧರಿಸಿ ರಾಜಕೀಯ ಜ್ಞಾನ ನೀಡುವುದು ಇಂದಿನ ಶಿಕ್ಷಣದ ವ್ಯವಸ್ಥೆಗಳಲ್ಲಿ ಒಂದಾಗಬೇಕೆಂದರು.

ಅತಿಥಿಗಳಾಗಿದ ಕೌಜಲಗಿಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಮ್. ಕೆ. ಹಾದಿಮನಿ ಮಾತನಾಡಿ, ಇಂದಿನ ರಾಜಕೀಯದಲ್ಲಿ ನಡೆಯುವ ಚಟುವಟಿಕೆಗಳ ಜ್ಞಾನ ನಮ್ಮ ವಿದ್ಯಾರ್ಥಿಗಳಲ್ಲಿ ಬೆಳಸಲು ಕರ್ನಾಟಕ ಸರಕಾರದ ಸಂಸದೀಯ ವ್ಯವಹಾರಗಳ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಅದರಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ರಾಜಕೀಯ ರಂಗದ ತಿಳಿವಳಿಕೆ ಪಡೆದುಕೊಳ್ಳಲು ಪ್ರಯತ್ನಿಸಬೇಕೆಂದರು.

ಸ್ಥಳಿಯ ಶ್ರೀಮಹಾಲಕ್ಷ್ಮೀ ಅರ್ಬನ್ ಸೋಸಾಯಿಟಿಯ ಪ್ರಧಾನ ವ್ಯವಸ್ಥಾಪಕರಾದ ಚನ್ನಬಸು ಬಗನಾಳ ಮಾತನಾಡಿ, ವಿದ್ಯಾರ್ಥಿಗಳು ಇಂದು ಕೇವಲ ಅಧ್ಯಯನಕ್ಕೆ ಮಾತ್ರ ಸೀಮಿತಗೊಳ್ಳುತ್ತಿದ್ದು ಪ್ರಾಯೋಗಿಕ ಜ್ಞಾನದ ಕೊರತೆ ಕಾಣುತ್ತಿದ್ದು ಅದಕ್ಕಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವದರಿಂದ ನಾಯಕತ್ವ ಮತ್ತು ರಾಜಕೀಯ ಜ್ಞಾನ ದೊರೆಯುವುದು ಎಂದರು

ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ ಮಾತನಾಡಿದರು.
ವೇದಿಕೆಯಲ್ಲಿ ಕಮಲದಿನ್ನಿಯ ಮಾಜಿ ಗ್ರಾ.ಪಂ ಸದಸ್ಯ ರಮೇಶ ಪಾಟೀಲ, ಉಪನ್ಯಾಸಕರಾದ ಶಿವಾನಂದ ಸತ್ತಿಗೇರಿ, ಸಂಗಮೇಶ ಕುಂಬಾರ, ಯಲ್ಲಪ್ಪಾ ಕೋರಿಶೆಟ್ಟಿ ಎಂ.ಎಸ್. ಮುನ್ಯಾಳ, ಗಿರಿಮಲ್ಲ ನರಗುಂದ ಇದ್ದರು.
ಗಂಗಾಧರ ಮನ್ನಾಪೂರ ನಿರೂಪಿಸಿದರು. ಪ್ರಾಚಾರ್ಯ ಸಂಜೀವ ವಾಲಿ ಸ್ವಾಗತಿಸಿದರು. ರಾಚಯ್ಯ ನಿರ್ವಾಣಿ ವಂದಿಸಿದರು.
ಸ್ಫರ್ಧೆಯಲ್ಲಿ ಗೋಕಾಕ ತಾಲ್ಲೂಕು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರಥಮ, ಹುಕ್ಕೇರಿ ತಾಲ್ಲೂಕು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ದ್ವೀತಿಯ, ಚಿಕ್ಕೋಡಿ ತಾಲ್ಲೂಕು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದುಕೊಂಡರು. ಉತ್ತಮ ಸಂಸದೀಯ ಪಟು ಕುಮಾರ ವೃಷಭ ಸವದತ್ತಿ ಉತ್ತಮ ಸ್ಪೀಕರ ಲಕ್ಷ್ಮೀ ಪೂಜೇರಿ ನೇಮಕವಾಗಿರುತ್ತಾರೆ.

Related posts: