ಗೋಕಾಕ:ಜೆಸಿಐ ಸಂಸ್ಥೆಯಿಂದ ವನಮಹೋತ್ಸವ ಆಚರಣೆ
ಜೆಸಿಐ ಸಂಸ್ಥೆಯಿಂದ ವನಮಹೋತ್ಸವ ಆಚರಣೆ
ಗೋಕಾಕ ಜು 8 : ಜೆಸಿಐ ಸಂಸ್ಥೆ ಪರಿಸರ ರಕ್ಷಣೆ, ಸ್ವಚ್ಛತೆ, ಶಿಕ್ಷಣ ಸೇರಿದಂತೆ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುವುದರೊಂದಿಗೆ ಜನರ ಮನದಲ್ಲಿ ಉಳಿದಿದೆ ಎಂದು ನಿವೃತ್ತ ಪೌರಾಯುಕ್ತ ವಿ.ಸಿ.ಚಿನ್ನಪ್ಪಗೌಡರ ಹೇಳಿದರು.
ರವಿವಾರದಂದು ಇಲ್ಲಿಯ ವಿವೇಕಾನಂದ ನಗರದಲ್ಲಿ ಜೆಸಿಐ ಸಂಸ್ಥೆಯವರು ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬಡಾವಣೆಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಸಸಿಗಳನ್ನು ನೆಡುವ ಮೂಲಕ ಅರಣ್ಯ ಇಲಾಖೆಯೊಂದಿಗೆ ಪರಿಸರ ರಕ್ಷಣೆಯ ಕಾರ್ಯದಲ್ಲಿ ಸಂಸ್ಥೆಯ ಸದಸ್ಯರು ತೊಡಗಿಸಿಕೊಂಡಿರುವುದು ಅಭಿನಂದನಾರ್ಹ ಕಾರ್ಯವಾಗಿದ್ದು, ಈ ಸಂಸ್ಥೆಯಿಂದ ಇನ್ನು ಹೆಚ್ಚಿನ ಸಮಾಜಮುಖಿ ಕೆಲಸಗಳಾಗಲೆಂದು ಹಾರೈಸಿದರು.
ನಂತರ ಜೆಸಿಐ ಕಾರ್ಯಾಲಯದಲ್ಲಿ ವಿ.ಸಿ. ಚಿನ್ನಪ್ಪಗೌಡರ ಹಾಗೂ ಪ್ರಬಾರಿ ಪೌರಾಯುಕ್ತ ಎಮ್.ಎಚ್.ಅತ್ತಾರ ಹಾಗೂ ಇತ್ತಿಚೆಗೆ ವಿದೇಶ ಪ್ರವಾಸ ಮುಗಿಸಿ ಬಂದ ಸಂಸ್ಥೆಯ ಸದಸ್ಯ ಮಲ್ಲಪ್ಪ ಮದಿಹಳ್ಳಿ ದಂಪತಿಗಳನ್ನು ಹಾಗೂ ದೀಪಕ ಮೆಳವಂಕಿ ದಂಪತಿಗಳನ್ನು ಸಂಸ್ಥೆಯ ವತಿಯಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ವಲಯ ಉಪಾಧ್ಯಕ್ಷ ಡಾ|| ಕುಮಾರಗೌಡ ಪಾಟೀಲ, ರಾಷ್ಟ್ರೀಯ ಸಂಯೋಜಕ ವಿಷ್ಣು ಲಾತೂರ, ಸ್ಥಳಿಯ ಜೆಸಿಐ ಅಧ್ಯಕ್ಷ ಜಿ.ಆರ್.ನಿಡೋಣಿ, ಪದಾಧಿಕಾರಿಗಳಾದ ವಿಜಯಕುಮಾರ ಖಾರೆಪಾಟಣ, ಸುಧಾ ನಿಡೋಣಿ, ವಿ.ಎಸ್.ತಡಸಲೂರ, ಮಾಲತೇಶ ಸಣ್ಣಕ್ಕಿ, ಕೆಂಪಣ್ಣ ಚಿಂಚಲಿ, ಧನ್ಯಕುಮಾರ ಕಿತ್ತೂರ, ಮಹಾವೀರ ಖಾರೆಪಾಟಣ, ರವಿ ಮಾಲದಿನ್ನಿ, ರಾಚಪ್ಪ ಅಂದಾನಿ, ಅರಣ್ಯ ರಕ್ಷಕ ಎಸ್.ಎಸ್.ಮುಂಗರವಾಡಿ ಸೇರಿದಂತೆ ಅನೇಕರು ಇದ್ದರು. ಕಾರ್ಯಕ್ರಮವನ್ನು ಶೈಲಾ ಕೊಕ್ಕರಿ ಸ್ವಾಗತಿಸಿ, ವಂದಿಸಿದರು.