ಘಟಪ್ರಭಾ:ರಾಜಾಪೂರ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ ಪ್ರತಿಮೆ ಅನಾವರಣ
ರಾಜಾಪೂರ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ ಪ್ರತಿಮೆ ಅನಾವರಣ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಮೇ 8 :
ಸಮೀಪದ ರಾಜಾಪೂರ ಗ್ರಾಮದಲ್ಲಿ ಬುಧವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 30 ಲಕ್ಷ ವ್ಯೆಚ್ಚದ ಕಂಚಿನ ಪ್ರತಿಮೆಯನ್ನು ಪೂ.ಶ್ರೀ.ಮ.ನಿ.ಪ್ರ.ಸ್ವ ಮುರಘರಾಜೇಂದ್ರ ಮಹಾಸ್ವಾಮಿಗಳು ಶೂನ್ಯ ಸಂಪಾದನಾ ಮಠ ಗೋಕಾಕ ಹಾಗೂ ಪ.ಪೂ. ತಪೋನಿಧಿ ಶ್ರೀ ಮುತ್ತೇಶ್ವರ ಮಹಾಸ್ವಾಮಿಜಿ ಬೆಂಗಳೂರು ಅನಾವರಣಗೊಳಿಸಿದರು
ಈ ಸಂಧರ್ಭದಲ್ಲಿ ಶ್ರೀ ಪಾಂಡುರಂಗ ಮಂದಿರದ ಕಳಸಾರೋಹಣ, ಶ್ರೀ ರೇಣುಕಾದೇವಿಯ ಗುಡಿಯ ಉದ್ಘಾಟಣೆ ಹಾಗೂ ಮೂರ್ತಿ ಪ್ರತಿಷ್ಠಾಪಣೆ ಮಾಡಲಾಯಿತು. ಪ.ಪೂ. ಶ್ರೀ ನಿಜಗುಣ ದೇವರು ಕೈವಲ್ಯಾಶ್ರಮ ಹುಣಶ್ಯಾಳ ಪಿ.ಜಿ ಇವರು ಮಾತನಾಡಿ ಸಂಗೋಳ್ಳಿ ರಾಯಣ್ಣನನ್ನು ಜಾತಿ ಬೇದದಿಂದ ನೋಡಬೇಡಿ ಇವನೊಬ್ಬ ಅಪ್ಪಟ ದೇಶ ಪ್ರೇಮಿ ಹೀಗಾಗಿ ನಾವು ಕೂಡ ಇವನ ದೇಶ ಪ್ರೇಮ, ಪ್ರೀತಿ ವಿಶ್ವಾಸದಿಂದ ಮನೆಯ ಮಗನೆಂದು ನೋಡಿದರೇ ಮಾತ್ರ ಜ್ಯಾತ್ಯಾತೀತ ಮನೋಬಾವನೆ ಮೂಡಲು ಸಾದ್ಯ ಇಲ್ಲವಾದರೆ ಇಂತಹ ಮಹಾನ ಚೇತನಗಳನ್ನ ಕೇವಲ ಒಂದು ಜಾತಿಯಿಂದ ಅಳೆದು ಜಾತಿಗಷ್ಟೇ ಸೀಮಿತ ಮಾಡಿ ಬೀಡುತ್ತಾರೆ ಜನ ಎಂದು ಹಿತ ವಚನ ನುಡಿದರು.
ಪ.ಪೂ ಶ್ರೀ ಅಮರೇಶ್ವರ ಮಹಾರಾಜರು ಸಿದ್ದಶ್ರೀ ಸಿದ್ದಾಶ್ರಮ ಕವಲಗುಡ್ಡ ಮಾಹಾಸ್ವಾಮಿಜಿ ಮಾತನಾಡಿ ಸಂಗೊಳ್ಳಿ ಎಂದರೆÉ ಒಂದು ತರಹದ ವಿದ್ಯುತ ಸಂಚಲನವಾದಂತಾಗುತ್ತದೆ. ಇಂತಹ ರಾಷ್ಟ್ರ ರಕ್ಷಕನನ್ನು ನಮ್ಮವೇ ಸೆರೆ ಹಿಡಿದು ಕೊಟ್ಟಿದ್ದು ನಿಜವಾಗಲು ಮನವಿಡಿಯುವಂತಹ ಸಂಗತಿ ಎಂದರು. ಕೇವಲ 32 ವರ್ಷ ಬದುಕಿದ ಮಹಾನ್ ಹೋರಾಟಗಾರನ ಬದುಕು ಇಂದಿನ ಯುವಕರಿಗೆ ಸ್ಪೂರ್ತಿಯಾಗಲಿ ಎಂದರು.