RNI NO. KARKAN/2006/27779|Sunday, June 15, 2025
You are here: Home » breaking news » ಬೆಳಗಾವಿ:ಡ್ಯಾನ್ಸ್ ವರ್ಡ್ ಕಪ್ ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಕುಂದಾ ನಗರಿಯ ಕುವರಿ

ಬೆಳಗಾವಿ:ಡ್ಯಾನ್ಸ್ ವರ್ಡ್ ಕಪ್ ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಕುಂದಾ ನಗರಿಯ ಕುವರಿ 

ಡ್ಯಾನ್ಸ್ ವರ್ಡ್ ಕಪ್ ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಕುಂದಾ ನಗರಿಯ ಕುವರಿ
ಬೆಳಗಾವಿ ಜು 3 : ಆರ್ಥಿಕ ಸಂಕಷ್ಟದ ನಡುವೆಯು ಸ್ಪೇನ್ ದೇಶದಲ್ಲಿ ಭಾರತವನ್ನು ಪ್ರತಿನಿಧಿಸಿದ ಕುಂದಾ ನಗರಿಯ ಕುವರಿ ಡ್ಯಾನ್ಸ್ ವರ್ಡ್ ಕಪ್ ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿ , ಅದ್ಭುತ ಪ್ರರ್ದಶನ ನೀಡಿ ಎಲ್ಲರ ಗಮನ ಸೆಳೆದಿದ್ಧಾರೆ
ಬೆಳಗಾವಿಯ ವನಿತಾ ವಿದ್ಯಾಲಯದಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರೇರಣಾ ಗೋನ್ಬಾರೆ ಈ ಸಾಧನೆ ಮಾಡಿರುವ ಬಾಲಕಿ. ಚಿಲ್ಡ್ರನ್ ಸೋಲೋ ಶೋ ಡ್ಯಾನ್ಸ್ ವಿಭಾಗದಲ್ಲಿ ಪ್ರೇರಣಾ 8ನೇ ಸ್ಥಾನ ಪಡೆದು ಮಿಂಚಿದ್ದಾರೆ. 
ನಗರದ ಗಣೇಶಪುರದಲ್ಲಿರುವ ಸ್ಟೈಲ್ ಡ್ಯಾನ್ಸ್ ಅಕಾಡೆಮಿಯಲ್ಲಿ ಕಳೆದ ಐದು ವರ್ಷಗಳಿಂದ ಪ್ರೇರಣಾ ನೃತ್ಯ ತರಬೇತಿ ಪಡೆಯುತ್ತಿದ್ದಳು. ನೃತ್ಯ ಶಿಕ್ಷಕ ಮಹೇಶ್​ ಜಾಧವ ಇವರಿಗೆ ತರಬೇತಿ ನೀಡಿದ್ದರು. 
ಕಳೆದ ಜೂನ್ 22ರಂದು ಸ್ಪೇನ್‍ನ ಬಾರ್ಸಿಲೋನಾ ನಗರದಲ್ಲಿ ನಡೆದಿದ್ದ ಡ್ಯಾನ್ಸ್ ವರ್ಲ್ಡ್ ಕಪ್‍ನಲ್ಲಿ  45 ದೇಶಗಳಿಂದ ಒಟ್ಟು 5600 ನೃತ್ಯಪಟುಗಳು ಪಾಲ್ಗೊಂಡಿದ್ದರು. ಭಾರತದಿಂದ ಪ್ರತಿನಿಧಿಯಾಗಿ ಬೆಳಗಾವಿಯ ಪ್ರೇರಣಾ ಗೋನ್ಬಾರೆ ಪಾಲ್ಗೊಂಡಿದ್ದರು.  

ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದಿದ್ದ ಆಡಿಷನ್‍ನಲ್ಲಿ ಪ್ರೇರಣಾ ಪಾಲ್ಗೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಸ್ಪೇನ್‍ಗೆ ತೆರಳಲು ಆರ್ಥಿಕ ಸಂಕಷ್ಟ ಎದುರಾದಾಗ ಸ್ನೇಹಿತರು ಹಣ ಸಂಗ್ರಹಿಸಿ ನೀಡಿದ್ದರು. ಸ್ನೇಹಿತರ ಸಹಕಾರದಿಂದ ಸ್ಪೇನ್‍ಗೆ ತೆರಳಿದ್ದ ಪ್ರೇರಣಾ ಹಿಂದಿ, ತೆಲುಗು ಹಾಗೂ ಮರಾಠಿ ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ.
 
ಸ್ಪರ್ಧೆಯ ಕುರಿತು ಮಾಹಿತಿ ನೀಡಿದ ನೃತ್ಯ ಶಿಕ್ಷಕ ಮಹೇಶ ಜಾಧವ್, ಇಂಗ್ಲೆಂಡ್‍ನ ಜಾರ್ಜ್ ಶ್ರೀಮ್‍ಶಾ ಎಂಬುವರು ಪ್ರತಿ ವರ್ಷ ಡ್ಯಾನ್ಸ್ ವರ್ಲ್ಡ್ ಕಪ್‍ನಲ್ಲಿ ನೃತ್ಯ ಸ್ಪರ್ಧೆ ಆಯೋಜಿಸುತ್ತಾರೆ. ಈ ಸಲ ಸ್ಪೇನ್ ದೇಶದಲ್ಲಿ ಈ ನೃತ್ಯ ಸ್ಪರ್ಧೆ ನಡೆಸಲಾಗಿತ್ತು. ದೇಶದ ಪ್ರತಿನಿಧಿಯಾಗಿದ್ದ  ಪ್ರೇರಣಾ ಅದ್ಭುತ ಪ್ರದರ್ಶನ ತೋರಿದ್ದು, ಮುಂದಿನ ಸಲ ಟ್ರೋಫಿ ಪಡೆಯಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದರು. 

Related posts: