RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಸಿದ್ದಾರ್ಥ ಪೈನ್‍ಆಟ್ಸ್ ಕಾಲೇಜಿನ ಫಲಿತಾಂಶ ಟಾಪರ್ಸ್

ಗೋಕಾಕ:ಸಿದ್ದಾರ್ಥ ಪೈನ್‍ಆಟ್ಸ್ ಕಾಲೇಜಿನ ಫಲಿತಾಂಶ ಟಾಪರ್ಸ್ 

ರೇವತಿ ಎಮ್ಮಿ

ಸಿದ್ದಾರ್ಥ ಪೈನ್‍ಆಟ್ಸ್ ಕಾಲೇಜಿನ ಫಲಿತಾಂಶ ಟಾಪರ್ಸ್
ಗೋಕಾಕ ಜೂ 9 : ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರು ಕಳೆದ ಮೇ ತಿಂಗಳಲ್ಲಿ ನಡೆಸಿದ 2017-18 ನೇ ಸಾಲಿನ ವಾರ್ಷಿಕ ಚಿತ್ರಕಲಾ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದ್ದು, ಸ್ಥಳೀಯ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದ ದೃಶ್ಯಕಲಾ ಮೂಲ ಪ್ರಥಮ ವರ್ಷಕ್ಕೆ ಕು.ರೇವತಿ ಶಿವಪ್ಪ ಎಮ್ಮಿ. 515 ಅಂಕ (ಶೇಕಡಾ 64.37), ದ್ವಿತೀಯ ವರ್ಷಕ್ಕೆ ವಿದ್ಯಾ ಸುಂದರ ತೊಂಡಿಕಟ್ಟಿ 548 ಅಂಕ,(ಶೇಕಡಾ68.05), ಡಿಪ್ಲೋಮ ವಿಶೇಷ ಪೆರಿಣಿತಿ ಮೂರನೇ ವರ್ಷಕ್ಕೆ ಮಂಜುನಾಥ ಸದಾಶಿವ ಮಡಿವಾಳ 555 ಅಂಕ ( ಶೇಕಡಾ69.37), ನಾಲ್ಕನೇಯ ವರ್ಷಕ್ಕೆ ಲಕ್ಕಪ್ಪಾ ಶಿವಪ್ಪ ಯಡ್ರಾಂವಿ 547 ಅಂಕ (ಶೇಕಡಾ68.37), ಬಸವರಾಜ ಈಶ್ವರ ಗದಗಿನ 613 ಅಂಕ ( ಶೇಕಡಾ76.62) ಪಡೆದು ಕಾಲೇಜಿಗೆ ಟಾಪರ್ಸಗಳಾಗಿದ್ದಾರೆ. ವಿದ್ಯಾಲಯಕ್ಕೆ ಅತೀ ಹೆಚ್ಚು ಅಂಕ ಪಡೆದು ಕೀರ್ತಿ ಮೆರೆದ ವಿದ್ಯಾರ್ಥಿಗಳನ್ನು ಸಂಸ್ಥೆಯ ಚೇರಮನ್ ಬಸವರಾಜ ಕಡಕಬಾಂವಿ ಕಾಲೇಜಿನ ಪ್ರಾಚಾರ್ಯ ಜಯಾನಂದ ಮಾದರ ಹಾಗೂ ಸಿಬ್ಬಂದಿ ಬಳಗ ಅಭಿನಂದಿಸಿದ್ದಾರೆ.

Related posts: