ಗೋಕಾಕ:ಇಂದು ಕೌಜಲಗಿ ಪುಟ್ಟರಾಜ ಗವಾಯಿ ಸಂಗೀತ ತಂಡ ಉದ್ಘಾಟನೆ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮ
ಇಂದು ಕೌಜಲಗಿ ಪುಟ್ಟರಾಜ ಗವಾಯಿ ಸಂಗೀತ ತಂಡ
ಉದ್ಘಾಟನೆ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮ
ಗೋಕಾಕ ಜ 25: ಪಟ್ಟಣದ ಬಸವೇಶ್ವರ ಪೇಟೆಯಲ್ಲಿ ಹಾಕಿದ ಭವ್ಯ ರಂಗ ಸಜ್ಜಿಕೆಯಲ್ಲಿ ಗುರುವಾರ ಸಾಯಂಕಾಲ 6 ಗಂಟೆಗೆ ಪುಟ್ಟರಾಜ ಗವಾಯಿ ಮೆಲೋಡಿಸ್ ತಂಡದ ಉದ್ಘಾಟನೆ ನೆರವೇರಲಿದೆ.
ಪಟ್ಟಣದ ಯುವ ಕಲಾವಿದರು ಕಟ್ಟಿಕೊಂಡ ಸಂಗೀತ ತಂಡವನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉದ್ಘಾಟಿಸಲಿದ್ದಾರೆ. ಸುಣಧೋಳಿಯ ಶ್ರೀ ಜಡಿಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಮುಖಂಡರಾದ ಡಾ. ರಾಜೇಂದ್ರ ಸಣ್ಣಕ್ಕಿ ವಹಿಸಲಿದ್ದು ಗ್ರಾ.ಪಂ. ಅಧ್ಯಕ್ಷ ರಾಯಪ್ಪ ಬಳೋಲದಾರ ಮತ್ತು ಮಾದರಿ ಶಿಕ್ಷಣ ಸಂಸ್ಥೆಯ ಚೇರಮನ್ ಅಶೋಕ ಪರುಶೆಟ್ಟಿ ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎಂ.ಆರ್.ಭೋವಿ, ಶಿವಾನಂದ ಲೋಕನ್ನವರ, ಸಣ್ಣಪ್ಪ ಭೋವಿ, ಮಹಾಂತಪ್ಪ ಶಿವನಮಾರಿ, ಕೇಶವ ಭೋವಿ, ಸುಭಾಸ ಕೌಜಲಗಿ, ತಾ.ಪಂ.ಸದಸ್ಯರಾದ ಲಕ್ಷ್ಮಣ ಮಸಗುಪ್ಪಿ, ಶಾಂತಪ್ಪ ಹಿರೇಮೇತ್ರಿ, ಮಹೇಶ ಪಟ್ಟಣಶೆಟ್ಟಿ, ಅಡಿವೆಪ್ಪ ದಳವಾಯಿ, ನೀಲಪ್ಪ ಕೇವಟಿ, ಈರಣ್ಣ ಹುದ್ದಾರ ಮುಂತಾದವರು ಆಗಮಿಸಲಿದ್ದಾರೆ. ಪುಟ್ಟರಾಜ ಗವಾಯಿ ಸಂಗೀತ ತಂಡ ಉದ್ಘಾಟನೆ ಪ್ರಯುಕ್ತ ಸ್ವರಸಂಗೀತ ಹಾಗೂ ಹಾಸ್ಯಸಂಜೆ ಕಾರ್ಯಕ್ರಮ ಜರುಗಲಿದೆ. ಯಲ್ಲೇಶ ಕೌಜಲಗಿ, ಮಹಾದೇವ ಹುಂಡರದ, ರಮೇಶ ಸಾವಳಗಿ, ಜ್ಯೋತಿ ಗುಳೇದಗುಡ್ಡ, ಚನ್ನಪ್ಪ ಹಿರೇಮಠ, ಹಾಸ್ಯ ಮತ್ತು ಡನ್ಸರ್ ಕಲಾವಿದರಾದ ಪ್ರಿಯಾ ಧಾರವಾಡ, ಶೀಲಾ ಬಾಗಲಕೋಟ, ಕಾಮಿಡಿ ಕಿಲಾಡಿಯ ಸಂಜು, ಬಸಯ್ಯಾ, ಮಹಾಂತೇಶ, ಕುನ್ನಾಳ ಮುಂತಾದ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಾರೆಂದು ಕಾರ್ಯಕ್ರಮದ ಸಂಚಾಲಕ ರವೀಂದ್ರ ಪರುಶೆಟ್ಟಿ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.