ಗೋಕಾಕ:ಎಎಸ್‍ಐ ವೀರಭದ್ರ ನೀಲಣ್ಣವರ ಅವರ ಸೇವೆ ಶ್ಲಾಘನೀಯ : ಪಿಎಸ್‍ಐ ಆರ್.ವೈ.ಬೀಳಗಿ

ಎಎಸ್‍ಐ ವೀರಭದ್ರ ನೀಲಣ್ಣವರ ಅವರ ಸೇವೆ ಶ್ಲಾಘನೀಯ : ಪಿಎಸ್‍ಐ ಆರ್.ವೈ.ಬೀಳಗಿ
ಬೆಟಗೇರಿ ಜೂ 1 : ಸುಮಾರು 32 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ, ಎಎಸ್‍ಐಯಾಗಿ ಸೇವಾ ನಿರತ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಸೇವೆ ಸಲ್ಲಿಸಿದ ಕುಲಗೋಡ ಪೊಲೀಸ್ ಠಾಣೆಯ ಎಎಸ್‍ಐ ವೀರಭದ್ರ ನೀಲಣ್ಣವರ ಅವರ ಸೇವೆ ಶ್ಲಾಘನೀಯವಾಗಿದೆ ಎಂದು ಮೂಡಲಗಿ ತಾಲೂಕಿನ ಕುಲಗೋಡ ಪೊಲೀಸ್ ಠಾಣೆಯ ಪಿಎಸ್‍ಐ ಆರ್.ವೈ.ಬೀಳಗಿ ಹೇಳಿದರು.
ಸಮೀಪದ ಕುಲಗೋಡ ಪೊಲೀಸ್ ಠಾಣೆಯಲ್ಲಿ ಗುರುವಾರ ಮೇ.31 ರಂದು ಆಯೋಜಿಸಿದ ಎಎಸ್‍ಐ ವೀರಭದ್ರ ನೀಲಣ್ಣವರ ಅವರ ಸೇವಾ ನಿವೃತ್ತಿ ಸನ್ಮಾನ ಕಾರ್ಯಕ್ರಮದಲ್ಲಿ ಸೇವಾ ನಿವೃತ್ತಿ ಹೊಂದಿದ ಎಎಸ್‍ಐ ವೀರಭದ್ರ ನೀಲಣ್ಣವರ ಅವರನ್ನು ಸನ್ಮಾನಿಸಿ ಮಾತನಾಡಿದರು.
ಕುಲಗೋಡ ಗ್ರಾಮದ ನಾಗರಿಕರ ಮತ್ತು ಸ್ಥಳೀಯ ಸೀಮೆ ಕರೆಮ್ಮ ದೇವಿ ಜಾತ್ರಾ ಸಮಿತಿ ಹಾಗೂ ಠಾಣೆಯ ಪರವಾಗಿ ಸೇವಾ ನಿವೃತ್ತಿ ಹೊಂದಿದ ಕುಲಗೋಡ ಪೊಲೀಸ್ ಠಾಣೆಯ ಎಎಸ್‍ಐ ವೀರಭದ್ರ ನೀಲಣ್ಣವರ ಅವರನ್ನು ಸನ್ಮಾನಿಸಲಾಯಿತು. ಸ್ಥಳೀಯ ತಾಪಂ ಮಾಜಿ ಸದಸ್ಯ ಸುಭಾಷ ಒಂಟಗೋಡಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕುಲಗೋಡ ಪೊಲೀಸ್ ಠಾಣೆಯ ಎಎಸ್‍ಐ ಕೆ.ಎನ್.ಪತ್ತಾರ, ನಿವೃತ್ತ ಎಎಸ್‍ಐ ಗಂಗಣ್ಣವರ, ರಾಮಣ್ಣ ಚೆನ್ನಾಳ, ಮುದಕಪ್ಪ ಗೋಡಿ, ಪತ್ರಕರ್ತ ಶಂಕರ ಹಾದಿಮನಿ, ಎಸ್.ಕೆ.ಪಾಟೀಲ, ಎಲ್.ಎಮ್.ನಾಯ್ಕ, ವಿ.ಆರ್.ಗಲಬಿ, ಸಿ.ಬಿ.ಪಾಟೀಲ, ವಿ.ಎಮ್.ಹದ್ಲಿ, ರಾಜು ಪತ್ತಾರ ಸೇರಿದಂತೆ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಗ್ರಾಮಸ್ಥರು ಇದ್ದರು.