RNI NO. KARKAN/2006/27779|Tuesday, January 27, 2026
You are here: Home » breaking news » ಘಟಪ್ರಭಾ:ಘಟಪ್ರಭಾದಲ್ಲಿ ರಾಜ್ಯ ಬಂದಗೆ ನಿರಸ ಪ್ರತಿಕ್ರಿಯೆ

ಘಟಪ್ರಭಾ:ಘಟಪ್ರಭಾದಲ್ಲಿ ರಾಜ್ಯ ಬಂದಗೆ ನಿರಸ ಪ್ರತಿಕ್ರಿಯೆ 

ಘಟಪ್ರಭಾದಲ್ಲಿ ಬಂದಕ್ಕೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರೆದಿದ್ದು ವ್ಯಾಪಾರ ವಹಿವಾಟ ಜೋರಾಗಿ ನಡೆಯಿತು.

ಘಟಪ್ರಭಾದಲ್ಲಿ ರಾಜ್ಯ ಬಂದಗೆ ನಿರಸ ಪ್ರತಿಕ್ರಿಯೆ

ಘಟಪ್ರಭಾ ಮೇ 28 : ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಖ್ಯ ಮಂತ್ರಿಯಾದ 24 ಗಂಟೆಗಳಲ್ಲಿ ರೈತರ ಎಲ್ಲ ಸಾಲ ಮಾನ್ನಾ ಮಾಡುತ್ತೆನೆಂದು ಹೇಳಿಕೆ ನೀಡಿ ಸಾಲ ಮನ್ನಾ ಮಾಡದಿದ್ದಕ್ಕೆ ಬಿಜೆಪಿ ಸೋಮವಾರ ರಾಜ್ಯ ಬಂದಗೆ ಕರೆ ಕೊಟ್ಟ ಹಿನ್ನಲೆಯಲ್ಲಿ ಬಂದಕ್ಕೆ ಘಟಪ್ರಭಾದಲ್ಲಿ ನಿರಸ ಪ್ರತಿಕ್ರಿಯೆ ಕಂಡು ಬಂದಿತು.
ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರೆದಿದ್ದು ವ್ಯಾಪಾರ ವಹಿವಾಟ ಜೋರಾಗಿ ನಡೆಯಿತು. ಶಾಲಾ ಕಾಲೇಜು ಪ್ರಾರಂಭವಾಗಿದ್ದು ಬಸ್ಸ ಸಂಚಾರ ಎಂದಿನಂತೆ ನಡೆಯಿತು.

ಕಾರ್ಯಕರ್ತರ ಕೊರತೆಯಿಂದ ಬಂದ ವಿಫಲ: ಬಂದ ಕುರಿತು ಪ್ರತಿಕ್ರಿಯೆಸಿದ ಸುರೇಶ ಪಾಟೀಲ ನಿಷ್ಠಾವಂತ ಕಾರ್ಯಕರ್ತರ ಕೊರತೆಯಿಂದ ಇಂದು ಘಟಪ್ರಭಾದಲ್ಲಿ ಬಂದ ವಿಫಲವಾಗಿದೆ. ನಾವು ಬಿಜೆಪಿ ಪರವಾಗಿ ಅನೇಕ ಹೋರಾಟಗಳನ್ನು ಮಾಡುತ್ತ ಬಂದಿದ್ದರೂ ನಮಗೆ ಚುನಾವಣೆಯಲ್ಲಿ ಪ್ರಾಮುಖ್ಯತೆ ನೀಡದೆ ಅನ್ಯಾಯ ಮಾಡಿದ್ದಾರೆ. ಚುನಾವಣೆಯಲ್ಲಿ ಜಾತಿ ರಾಜಕಾರಣ ಮಾಡಿ ಚುನಾವಣೆ ನಂತರ ಮನೆ ಸೇರುವ ಕಾರ್ಯಕರ್ತರಿಂದ ಎಂದು ಯಾವುದು ಬಂದ ಯಶಸ್ವಿಯಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Related posts: