ಗೋಕಾಕ:ಸಂವಿಧಾನ ನಮ್ಮ ದೇಶದ ಮೂಲ ಕಾನೂನು ಅದನ್ನು ಎಲ್ಲರೂ ಗೌರವಿಸಿ ಆಚರಣೆಗೆ ತರಬೇಕು : ತಹಶೀಲ್ದಾರ ಡಾ.ಮೋಹನ ಭಸ್ಮೆ

ಸಂವಿಧಾನ ನಮ್ಮ ದೇಶದ ಮೂಲ ಕಾನೂನು ಅದನ್ನು ಎಲ್ಲರೂ ಗೌರವಿಸಿ ಆಚರಣೆಗೆ ತರಬೇಕು : ತಹಶೀಲ್ದಾರ ಡಾ.ಮೋಹನ ಭಸ್ಮೆ
ಗೋಕಾಕ ಜ 25 : ಸಂವಿಧಾನ ನಮ್ಮ ದೇಶದ ಮೂಲ ಕಾನೂನು ಅದನ್ನು ಎಲ್ಲರೂ ಗೌರವಿಸಿ ಆಚರಣೆಗೆ ತರಬೇಕು ಎಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು.
ಶುಕ್ರವಾರದಂದು ನಗರದ ಮಹರ್ಷಿ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ 75 ಗಣ್ಯರಾಜೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಮೂಲಭೂತ ಕರ್ತವ್ಯಗಳನ್ನು ದೇಶದ ಪ್ರತಿಯೊಬ್ಬ ಪ್ರಜೆಯು ಸರಿಯಾಗಿ ಪಾಲಿಸಿದರೆ, ಮೂಲಭೂತ ಹಕ್ಕುಗಳನ್ನು ಗೌರವಿಸದಂತೆ. ಬೇರೆಯವರ ಹಕ್ಕುಗಳನ್ನು ಎಂದೂ ಉಲ್ಲಂಘನೆ ಮಾಡಬಾರದು ಎಂದ ಅವರು ಸರಕಾರ ನಮಗೆ ಎಲ್ಲವನ್ನೂ ನೀಡುತ್ತಿವೆ ಅವುಗಳ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬರೂ ಸಾವಲಂಭಿ ಜೀವನವನ್ನು ನಡೆಸಬೇಕು.
ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬ ಆದ್ಯ ಕರ್ತವ್ಯವಾಗಿದ್ದು, ಪರಿಸರ ಹಾಳುಮಾಡದೆ ಎಲ್ಲರೂ ಪ್ಲಾಸ್ಟಿಕ್ ನಿಷೇಧ ಮಾಡಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಇಓ ಜಿ.ಬಿ. ಬಳಗಾರ, ಸಿಪಿಐ ಗೋಪಾಲ ರಾಠೋಡ, ಪೌರಾಯುಕ್ತ ಎಸ್.ಎ.ಮಹಾಜನ್ , ಡಾ.ಮೋಹನ ಕಮತ , ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಎ.ಬಿ.ಮಲ್ಲಬನ್ನವರ , ಅರಣ್ಯ ಅಧಿಕಾರಿ ಸಂಜೀವ ಸಂಸುದ್ದಿ, ಕೃಷಿ ಅಧಿಕಾರಿ ಎಂ ಎಂ ನಧಾಫ್ , ಹೆಸ್ಕಾಂನ ಎಸ್.ಪಿ.ವರಾಳೆ, ಶಿವಾನಂದ ಹಿರೇಮಠ, ತಾಲೂಕು ವೈದ್ಯಾಧಿಕಾರಿ ಎಂ.ಎಸ್.ಕೊಪ್ಪದ, ಹಿರಿಯ ನ್ಯಾಯವಾದಿ,ಪಿಎಸ್ಐ ಕೆ.ವಾಲಿಕರ, ಎಂ.ಎಲ್.ಜನಮಟ್ಟಿ,ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಬಸವರಾಜ ಆರೆನ್ನವರ, ಪ್ರಕಾಶ ಮೂರಾರಿ, ಬಾಬು ಮುಳಗುಂದ, ಸಿದ್ದಪ್ಪ ಹುಚ್ಚರಾಮಗೋಳ , ಸೋಮಶೇಖರ್ ಮಗದುಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.