RNI NO. KARKAN/2006/27779|Wednesday, January 28, 2026
You are here: Home » breaking news » ಬೆಳಗಾವಿ : ಪತ್ರಕರ್ತರು ಸಮಾಜದ ಮೂರನೇ ಕಣ್ಣು : ಸರ್ವೋತ್ತಮ ಜಾರಕಿಹೊಳಿ

ಬೆಳಗಾವಿ : ಪತ್ರಕರ್ತರು ಸಮಾಜದ ಮೂರನೇ ಕಣ್ಣು : ಸರ್ವೋತ್ತಮ ಜಾರಕಿಹೊಳಿ 

ಪತ್ರಕರ್ತರು ಸಮಾಜದ ಮೂರನೇ ಕಣ್ಣು : ಸರ್ವೋತ್ತಮ ಜಾರಕಿಹೊಳಿ

ನಮ್ಮ ಬೆಳಗಾವಿ ಇ – ವಾರ್ತೆ ಜು 5 :

ಪತ್ರಕರ್ತರು ಸಮಾಜದ ಮೂರನೇ ಕಣ್ಣು ಎಂದು ಗೋಕಾಕನ ಎಲ್.ಆರ್.ಜೆ ಪದವಿಪೂರ್ವ ಮಹಾವಿದ್ಯಾಲಯ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು
ಮಂಗಳವಾರದಂದು ನಗರದ ಜೀರಗೆ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಬೆಳಗಾವಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪತ್ರಕರ್ತರು ವೃಕ್ಷದ ಹಾಗೆ ಎಲ್ಲರಿಗೂ ಒಳ್ಳೆಯ ಮಾಡುವಲ್ಲಿ ಕಾರ್ಯಪ್ರವೃತ್ತವಾಗಬೇಕು. ಪತ್ರಕರ್ತರ ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸಬೇಕು ಕಾರ್ಯನಿರತ ಪತ್ರಕರ್ತರು ತಮ್ಮ ಜೀವನದಲ್ಲಿ ಆಳವಾದ ಅಧ್ಯಯನ ಮಾಡಿ ಸಮಾಜವನ್ನು ತಿದ್ದವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಾಡುವ ಪ್ರತಿ ಕಾರ್ಯಗಳಲ್ಲಿ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಲು ಸಿದ್ದ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ್, ಪೊಲೀಸ್ ಕಮಿಷನರ್ ಡಾ‌.ಬೋರಲಿಂಗ್ಯಯ, ಗುರುನಾಥ್ ಕಡಬೂರ, ಸರ್ವೋತ್ತಮ ಜಾರಕಿಹೊಳಿ , ಪುಂಡಲೀಕ ಬಾಳೋಜಿ, ಜಿಲ್ಲಾಧ್ಯಕ್ಷ ದಿಲೀಪ್ ಕುರಂದವಾಡೆ , ಶಿಕ್ಷಣಾಧಿಕಾರಿ ರವಿ ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: