RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಜ್ಷಾನದ ಹಸಿವಿನಿಂದ ಪ್ರಯತ್ನಶೀಲರಾದರೆ ಉನ್ನತ ಹುದ್ದೆ ಪಡೆಯಲು ಸಾಧ್ಯ : ಶಂಕರಾನಂದ ಬನಶಂಕರಿ

ಗೋಕಾಕ:ಜ್ಷಾನದ ಹಸಿವಿನಿಂದ ಪ್ರಯತ್ನಶೀಲರಾದರೆ ಉನ್ನತ ಹುದ್ದೆ ಪಡೆಯಲು ಸಾಧ್ಯ : ಶಂಕರಾನಂದ ಬನಶಂಕರಿ 

ಜ್ಷಾನದ ಹಸಿವಿನಿಂದ ಪ್ರಯತ್ನಶೀಲರಾದರೆ ಉನ್ನತ ಹುದ್ದೆ ಪಡೆಯಲು ಸಾಧ್ಯ : ಶಂಕರಾನಂದ ಬನಶಂಕರಿ

ಗೋಕಾಕ ನ 29 : ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಹುದ್ದೆಗಳ ಕನಸು ಕಾಣುವುದರೊಂದಿಗೆ ಅದನ್ನು ನಿರ್ಧಿಷ್ಟ ಗುರಿಯೊಂದಿಗೆ ಪ್ರಯತ್ನಶೀಲರಾಗಿ ನನಸಾಗಿಸಿಕೊಳ್ಳುವಂತೆ ಬೆಳಗಾವಿ ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ ಹೇಳಿದರು.
ಅವರು ನಗರದ ನ್ಯೂ ಇಂಗ್ಲೀಷ ಸ್ಕೂಲ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಳಗಾವಿ ಇವರು ಹಮ್ಮಿಕೊಂಡ ವಸತಿ ನಿಲಯದ ಪದವಿ ಹಾಗೂ ಸ್ನಾತಕೊತರ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಒಂದು ದಿನದ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಖಾಲಿ ಹೊಟ್ಟೆ ನೂರು ಪಾಠಗಳನ್ನು ಕಲಿಸುತ್ತದೆ, ತುಂಬಿದ ಹೊಟ್ಟೆ ನೂರು ಆಟಗಳನ್ನು ಕಲಿಸುತ್ತದೆ.ಜ್ಷಾನದ ಹಸಿವಿನಿಂದ ಪ್ರಯತ್ನಶೀಲರಾದರೆ ಉನ್ನತ ಹುದ್ದೆ ಪಡೆಯಲು ಸಾಧ್ಯ. ಸರ್ಕಾರ ಕೆಎಎಸ್,ಐಎಎಸ್,ಐಪಿಎಸ್ ನಂತಹ ಹುದ್ದೆಗಳ ಮಾಹಿತಿ ನೀಡಿ ವಿದ್ಯಾರ್ಥಿಗಳನ್ನು ಜಾಗೃತಗೊಳಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಮಾಡಲು ಇಂತಹ ಕಾರ್ಯಾಗಾರವನ್ನು ಹಮ್ಮಿಕೊಳ್ಳುತ್ತಿರುವುದು. ಇದರ ಸದುಪಯೋಗದಿಂದ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿ ಕೊಳ್ಳುವುದರೊಂದಿಗೆ ತಂದೆತಾಯಿಗಳ ಕನಸನ್ನು ನನಸಾಗಿಸಿಕೊಳ್ಳಿರೆಂದು ಹಾರೈಸಿದರು.
ಬೆಳಗಾವಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ರಾಮನಗೌಡ ಕಲ್ಲೋಳ್ಳಿ, ರಾಯಚೂರಿನ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡರ, ಧಾರವಾಡದ ಗಾಂಧಿ ಅಧ್ಯಯನ ಸಂಸ್ಥೆ ಉಪನ್ಯಾಸಕ ತಿರುಪತಿ ಪಾಟೀಲ ಈ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು. ಗೋಕಾಕ, ಸವದತ್ತಿ,ರಾಮದುರ್ಗ,ಬೈಲಹೊಂಗಲ ತಾಲೂಕಗಳ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ, ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ಆರ್.ಕೆ.ಬಿಸಿರೊಟ್ಟಿ, ಬಿ.ಕೆ.ಜಟಗೊಂಡ, ಎಸ್.ಆರ್.ಮರಿಗೌಡರ, ಇಲಾಖೆಯ ಪದವಿ ಅಂತಿಮ ವರ್ಷದ ನಿಲಯಾಧಿಕಾರಿಗಳು ಇದ್ದರು.

Related posts: