RNI NO. KARKAN/2006/27779|Sunday, July 5, 2026
You are here: Home » breaking news » ಬೆಳಗಾವಿ:ವಿವಾದಾತ್ಮಕ ಹೇಳಿಕೆ : ಶಾಸಕ ಸಂಜಯ ವಿರುದ್ಧ ಪ್ರಕರಣ ದಾಖಲು

ಬೆಳಗಾವಿ:ವಿವಾದಾತ್ಮಕ ಹೇಳಿಕೆ : ಶಾಸಕ ಸಂಜಯ ವಿರುದ್ಧ ಪ್ರಕರಣ ದಾಖಲು 

ವಿವಾದಾತ್ಮಕ ಹೇಳಿಕೆ : ಶಾಸಕ ಸಂಜಯ ವಿರುದ್ಧ ಪ್ರಕರಣ ದಾಖಲು
ಬೆಳಗಾವಿ ಏ 20: ಬೆಳಗಾವಿ ತಾಲೂಕಿನ ಸೂಳೆಬಾಂವಿ ಗ್ರಾಮದಲ್ಲಿ ಚುನಾವಣೆ ಪ್ರಚಾರದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಅಭ್ಯರ್ಥಿ ಶಾಸಕ ಸಂಜಯ ಪಾಟೀಲ್ ವಿರುದ್ಧ ಮಾರಿಹಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಬಿಜೆಪಿಗೆ ಮತ ಹಾಕಿದ್ರೆ ರಾಮಮಂದಿರ ನಿರ್ಮಿಸಲು ಪ್ರಯತ್ನಿಸುತ್ತೇನೆ ಎಂದಿದ್ದ ಶಾಸಕ ಸಂಜಯ್ ಪಾಟೀಲ್, ಕಾಂಗ್ರೆಸ್‍ಗೆ ಮತ ಹಾಕಿದ್ರೆ ಅವರು ಟಿಪ್ಪು ಜಯಂತಿ, ಬಾಬ್ರಿ ಮಸೀದಿ ನಿರ್ಮಿಸ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. 

ಅಲ್ಲದೇ ಈ ಪ್ರಚೋದನಾತ್ಮಕ ಹೇಳಿಕೆಯ ವಿಡಿಯೋ ತುಣಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿತ್ತು. ಇದು ಕೋಮುಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆಯಾಗಿದೆ ಎಂದು ಪರಿಗಣಿಸಿರುವ ಚುನಾವಣಾ ಅಧಿಕಾರಿಗಳು, ಶಾಸಕ ಸಂಜಯ್ ವಿರುದ್ಧ ಐಪಿಸಿ 153(ಎ0), 259(ಎ) ಸೆಕ್ಷನ್ ಅಡಿ ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Related posts: