ಗೋಕಾಕ: ಮಹಾ ಸಚಿವರ ಬೆಳಗಾವಿ ಪ್ರವೇಶವನ್ನು ನಿಷೇಧಿಸಲು ದಿಟ್ಟ ಕ್ರಮ ಕೈಗೋಳಿ : ಜಿಲ್ಲಾಡಳಿತಕ್ಕೆ ಕರವೇ ಅಧ್ಯಕ್ಷ ಖಾನಪ್ಪನವರ ಎಚ್ಚರಿಕೆ

ಮಹಾ ಸಚಿವರ ಬೆಳಗಾವಿ ಪ್ರವೇಶವನ್ನು ನಿಷೇಧಿಸಲು ದಿಟ್ಟ ಕ್ರಮ ಕೈಗೋಳಿ : ಜಿಲ್ಲಾಡಳಿತಕ್ಕೆ ಕರವೇ ಅಧ್ಯಕ್ಷ ಖಾನಪ್ಪನವರ ಎಚ್ಚರಿಕೆ
ಗೋಕಾಕ ಮೇ 24: – ಮಹಾರಾಷ್ಟ್ರ ರಾಜ್ಯದ ಆರೋಗ್ಯ ಮತ್ತು ಸಾರಿಗೆ ಸಚಿವರು ನಾಳೆ ಬೆಳಗಾವಿಗೆ ಆಗಮಿಸಿ ಬೆಳಗಾವಿಯ ಧರ್ಮವೀರ ಸಂಬಾಜಿ ವೃತ್ತದಲ್ಲಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗುತಾರೆಂದು ಹರಡಿರುವ ಸುದ್ದಿ ಖಂಡನಾರ್ಹ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಆಕ್ರೋಶ ವಕ್ತ ಪಡಿಸಿದ್ದಾರೆ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು
ಶಿವಸೇನೆಯ ಇಬ್ಬರು ಕ್ಯಾಬಿನೇಟ್ ಸಚಿವರು ಬೆಳಗಾವಿಗೆ ಬಂದು ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗುವ ನಾಡವಿರೋಧಿ ಯೋಜನೆ ರೂಪಿಸಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡುಸಲು ಮುಂದಾಗಿದ್ದಾರೆ ಕೂಡಲೇ ಜಿಲ್ಲಾಡಳಿದ ಎಚ್ಚರಗೊಂಡು ನಾಡದ್ರೋಹಿ ಮಹಾ ಸಚಿವರನ್ನು ಬೆಳಗಾವಿ ಪ್ರವೇಶವನ್ನು ನಿಷೇಧಿಸಲು ದಿಟ್ಟ ಕ್ರಮ ಕೈಗೋಳಬೇಕು ಇಲ್ಲದಿದ್ದರೆ ಮುಂದಾಗುವ ಆನಾಹುತಗಳಿಗೆ ಜಿಲ್ಲಾಡಳಿತ ಹೋಣೆ ಯಾಗಬೇಕಾಗುತ್ತೆ ಎಂದು ಖಾನಪ್ಪನವರ ಜಿಲ್ಲಾಡಳಿತವನ್ನು ಎಚ್ಚರಿಸಿದ್ದಾರೆ
ನಾಳೆ ಈ ಕುರಿತು ಗೋಕಾಕಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ನಾಡವಿರೋಧಿ ಎಂಇಎಸ ಮತ್ತು ಬೆಳಗಾವಿಗೆ ಬರಲು ಸಿದ್ದವಾಗಿರುವ ಮಹಾ ಸಚಿವರ ಪ್ರತಿಕೃತಿ ಧಹಿಸಿ ಪ್ರತಿಭಟಿಸಲಾಗುವುದು ಎಂದು ಖಾನಪ್ಪನವರ ತಿಳಿಸಿದ್ದಾರೆ