RNI NO. KARKAN/2006/27779|Saturday, July 12, 2025
You are here: Home » breaking news » ಗೋಕಾಕ:ಗೋಕಾಕದಲ್ಲಿ ಅಮಿತ ಶಾ ಅಬ್ಬರ : ಬಿಜೆಪಿ ಬೆಂಬಲಿಸಲು ಶಾ ಮನವಿ

ಗೋಕಾಕ:ಗೋಕಾಕದಲ್ಲಿ ಅಮಿತ ಶಾ ಅಬ್ಬರ : ಬಿಜೆಪಿ ಬೆಂಬಲಿಸಲು ಶಾ ಮನವಿ 

ಗೋಕಾಕದಲ್ಲಿ ಅಮಿತ ಶಾ ಅಬ್ಬರ : ಬಿಜೆಪಿ ಬೆಂಬಲಿಸಲು ಶಾ ಮನವಿ

ಗೋಕಾಕ ಎ 13: ಜಿಲ್ಲೆಯಲ್ಲಿ ಚುನಾವಣೆ ಅಬ್ಬರ ಜೋರಾಗಿ ನಡೆದಿದೆ . ಜಿಲ್ಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಆಗಮಿಸಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡಿದ್ದಾರೆ .

ಕಳೆದ ಎರೆಡು ದಶಕಗಳಿಂದ ಕಾಂಗ್ರೇಸ ಪಕ್ಷದ ಮತ್ತು ಜಾರಕಿಹೊಳಿ ಕುಟುಂಬದ ಭದ್ರಕೋಟೆಯಾಗಿ ಪರಿನಿರ್ಮಿಸಿರುವ ಗೋಕಾಕ ಕ್ಷೇತ್ರದಲ್ಲಿ ಶುಕ್ರವಾರದಂದು ಶಾ ಆಗಮಿಸಿ ರೋಡ್ ಶೋ ನಡೆಸಿ ಪಕ್ಷಕ್ಕೆ ಹೋಸ ಹುಮ್ಮಸ್ಸು ನೀಡಿದ್ದಾರೆ ಎನ್ನಲಾಗುತ್ತಿದೆ .

ಬಾಗಲಕೋಟೆ ಜಿಲ್ಲೆ ಮುಧೋಳದಿಂದ ನೇರವಾಗಿ ಗೋಕಾಕ್ಕೆ ಬಂದಿಳಿದ ಶಾ ಗೆ ಪಕ್ಷದ ಮುಖಂಡರು ಬರ್ಜರಿ ಸ್ವಾಗತ ನೀಡಿದರು

ಸಂಗೊಳ್ಳಿ ರಾಯಣ್ಣ ವೃತ್ತದಿಂದ ತೆರದ ವಾಹನದಲ್ಲಿ ಅಮಿತ್ ಶಾ ಮೆರವಣಿಗೆ ನಡೆಸಿದರು. ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಗೋಕಾಕ್‌ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾದ ರೋಡ್ ಶೋ ಅಪ್ಸರಾ ಕೂಟ, ಅಗಸಿ ಕೂಟ, ಭಗವಾನ್ ಶೇಟ್‍ಜಿ ಕೂಟ, ಬಾಫನಾ ಕೂಟ ಮಾರ್ಗವಾಗಿ ಸಂಚರಿಸಿ ಕೊಳವಿ ಹನುಮಂತ ದೇವಸ್ಥಾನಕ್ಕೆ ಸಮಾಪ್ತಿಗೊಂಡಿತು. ರೋಡ್ ಶೋ ಉದ್ದಕ್ಕೂ ಮತದಾರರನ್ನು ನೇರವಾಗಿ ಸಂಪರ್ಕಿಸಿ ಬಿಜೆಪಿಗೆ ಆಶೀರ್ವದಿಸುವಂತೆ ಕೋರಿದರು. ಗೋಕಾಕ್‌ ನಗರ ಇಂದು ಸಂಪೂರ್ಣ ಕೇಸರಿಮಯವಾಗಿತ್ತು. 

ತುಂತುರು ಮಳೆಯನ್ನೂ ಲೆಕ್ಕಿಸದೆ ಬಿಜೆಪಿ ಕಾರ್ಯಕರ್ತರು ಹುರುಪಿನಿಂದ ರೋಡ್‌ ಶೋನಲ್ಲಿ ಭಾಗಿಯಾಗಿದ್ದರು. ಇನ್ನು ಅಮಿತ್ ಶಾ ರೋ ಶೋಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ರೋಡ್ ಶೋ ಬಳಿಕ ಅಮಿತ್ ಶಾ ನಿಪ್ಪಾಣಿಗೆ ತೆರಳಿ, ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡರು.

ರೋಡ್‌ ಶೋನಲ್ಲಿ ಶಾಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದರಾದ ಸುರೇಶ ಅಂಗಡಿ, ಡಾ. ಪ್ರಭಾಕರ ಕೋರೆ, ಪ್ರಹ್ಲಾದ್ ಜೋಶಿ ಸಾಥ್‌ ನೀಡಿದರು. 

Related posts: