ಘಟಪ್ರಭಾ:ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ ಚಾಲನೆ

ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ ಚಾಲನೆ
ಘಟಪ್ರಭಾ ಮಾ 27 : ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನಗರದ ವಿವಿಧ ಓಣಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 18 ಲಕ್ಷ ರೂ.ಗಳ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ ಸೋಮವಾರ ಚಾಲನೆ ನೀಡಿದರು.
ಮೌಲಾ ದೇಸಾಯಿ ಮನೆಯಿಂದ ಮುನ್ನೋಳಿ ಮನೆಯವರೆಗೆ ರಸ್ತೆ ನಿರ್ಮಾಣ, ಮೌಲಾ ದೇಸಾಯಿ ಮನೆಯಿಂದ ಜತ್ತಿ ಮನೆಯವರೆಗೆ ರಸ್ತೆ ನಿರ್ಮಾಣ, ಜತ್ತಿ ಮನೆಯಿಂದ ರೈಲ್ವೆ ಹದ್ದಿಯವರೆಗೆ ರಸ್ತೆ ನಿರ್ಮಾಣ, ಅರಳಿ ಸರ್ ಮನೆಯಿಂದ ನಾಂದನಿ ಟೀಚರ್ ಮನೆಯವರೆಗೆ ಚರಂಡಿ ನಿರ್ಮಾಣ, ಮೋಮಿನ ಮನೆಯಿಂದ ಮುಖ್ಯ ರಸ್ತೆ ವರೆಗೆ ಚರಂಡಿ ನಿರ್ಮಾಣ, ಖೋಜಾ ಹೊಲದಿಂದ ಮಲ್ಲಪ್ಪಾ ಬಡಿಗೇರ ಬಸಿ ನೀರಿನ ಕಾಲುವೆ ವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಡಿ.ಎಂ.ದಳವಾಯಿ, ಸುಧೀರ ಜೋಡಟ್ಟಿ, ಮಹೇಶ ಪಾಟೀಲ, ಅನ್ನಪ್ಪಾ ಹುಣಗುಂದ, ಜಗದೀಶ ಮಠಪತಿ, ಎಸ್.ಎಸ್.ಕಟ್ಟಿ, ಗ್ರಾ.ಪಂ ಕಾರ್ಯದರ್ಶಿ ಎ.ಎಮ್.ಮಾಹೂತ, ಸದಸ್ಯರಾದ ಶೇಖರ ರಜಪೂತ, ಕಲ್ಲಪ್ಪಾ ಸನದಿ, ನಾಗರಾಜ ನಾಯಿಕ, ಬಾಹುಬಲಿ ಕಡಹಟ್ಟಿ, ಹಸೀನಾ ಜತ್ತಿ, ಸಾವಿತ್ರಿ ಕುಂದರಗಿ, ಕಲ್ಲೋಳಿ ಗಾಡಿವಡ್ಡರ, ವಿನಾಯಕ ಜಾಧವ, ಗ್ರಾಮಸ್ಥರಾದ ಡಾ.ಕಡಲಗಿ, ಸುಶಾಂತ ಮಲ್ಲಾಪೂರೆ, ಪರಶುರಾಮ ಗಾಡಿವಡ್ಡರ, ಎಸ್.ಬಿ.ಬಿದರಿ ಸೇರಿದಂತೆ ಅನೇಕರು ಇದ್ದರು.