ಗೋಕಾಕ:ಪೊಲೀಸ್ ಇಲಾಖೆ ಹಾಗೂ ಕಮರ್ಶಿಯಲ್ ಟ್ಯಾಕ್ಸ್ ಅಸೋಸಿಯೇಶನ ವತಿಯಿಂದ ನೆರೆ ಸಂತ್ರಸ್ತರಿಗೆ ಪರಿಹಾರ

ಪೊಲೀಸ್ ಇಲಾಖೆ ಹಾಗೂ ಕಮರ್ಶಿಯಲ್ ಟ್ಯಾಕ್ಸ್ ಅಸೋಸಿಯೇಶನ ವತಿಯಿಂದ ನೆರೆ ಸಂತ್ರಸ್ತರಿಗೆ ಪರಿಹಾರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ, 16 :-
ವರುಣನ ಅರ್ಭಟಕ್ಕೆ ನಲುಗಿ ನದಿ ತೀರದ ಗ್ರಾಮಗಳ ಮನೆಗಳು ಸಂಪೂರ್ಣ ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಕಮರ್ಶಿಯಲ್ ಟ್ಯಾಕ್ಸ್ ಅಸೋಸಿಯೇಶನ್‍ದವರು ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ನೆರೆ ಸಂತ್ರಸ್ಥರಿಗೆ ಸ್ವಾಂತಾನ ಹೇಳಿ ಧೈರ್ಯ ತುಂಬಿದರು.
ಅವರು, ತಾಲೂಕಿನ ತಾಲೂಕಿನ ಬೀಸನಕೊಪ್ಪ, ಢವಳೇಶ್ವರ, ಹುಣಶ್ಯಾಳ ಪಿ.ವಾಯ್., ಖಂಡ್ರಟ್ಟಿ, ಉದಗಟ್ಟಿ ತಪಶಿ ಕ್ರಾಸ್, ಮೆಳವಂಕಿ, ಹಡಗಿನಾಳ, ಗ್ರಾಮಗಳಲ್ಲಿ ತೆರೆದ ಗಂಜಿ ಕೇಂದ್ರಗಳಿಗೆ ತೆರಳಿ ಕಿರಾಣಿ ಸಾಮಗ್ರಿ, ರೇನ್‍ಕೋಟ್, ಬ್ರೆಡ್, ಬಿಸ್ಕತ್, ವಾಟರ್ ಬಾಟಲಗಳು, ಔಷಧಿಗಳು, ಸೇರಿದಂತೆ ದಿನನಿತ್ಯ ಬಳಕೆಯ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಡಿಎಸ್‍ಪಿ ಪ್ರಭು ಡಿ.ಟಿ. ಹಾಗೂ ಕಮರ್ಶಿಯಲ್ ಟ್ಯಾಕ್ಸ್ ಅಸೋಸಿಯೇಶನ್‍ನ ಅಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.