ಚಿಕ್ಕೋಡಿ: ಜಿಲ್ಲಾ ಬಿಸಿಯೂಟ ಶಿಕ್ಷಣಾಧಿಕಾರಿಯಾಗಿ ಜಿ.ಬಿ.ಬಳಗಾರ ಅಧಿಕಾರ ಸ್ವೀಕಾರ

ಚಿಕ್ಕೋಡಿ ಜಿಲ್ಲಾ ಬಿಸಿಯೂಟ ಶಿಕ್ಷಣಾಧಿಕಾರಿಯಾಗಿ ಜಿ.ಬಿ.ಬಳಗಾರ ಅಧಿಕಾರ ಸ್ವೀಕಾರ
ಚಿಕ್ಕೋಡಿ ಮಾ 1: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನೂತನ ಬಿಸಿಯೂಟ ಶಿಕ್ಷಣಾಧಿಕಾರಿಯಾಗಿ ಗೋಕಾಕಿನ ಜಿ.ಬಿ.ಬಳಗಾರ ಗುರುವಾರದಂದು ಚಿಕ್ಕೋಡಿ ಉಪನಿರ್ದೇಶಕರ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು
ಪ್ರಭಾರ ಜಿಲ್ಲಾ ಬಿಸಿಯೂಟ ಅಧಿಕಾರಿಯಾಗಿದ್ದ ಗೋಕಾಕ ತಾಲೂಕಾ ಬಿಸಿಯೂಟ ಸಹಾಯಕ ನಿರ್ದೇಶಕ ಎಂ.ಡಿ.ಬೇಗ ಅವರು ನೂತನ ಶಿಕ್ಷಣಾಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು
ನಂತರ ಕಛೇರಿಯ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಬಿಸಿಯೂಟ ಶಿಕ್ಷಣಾಧಿಕಾರಿ ಎಲ್ಲರ ಸಹಕಾರದಿಂದ ಇಂದು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಮುಂದಿನ ದಿನಗಳಲ್ಲಿ ಈ ಹುದ್ದೆಗೆ ಸೂಕ್ತ ನ್ಯಾಯ ದೊರಕಿಸುವ ನೀಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು . ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಪೌಷ್ಠಿಕ ಆಹಾರ ನೀಡಿಲು ಇಲಾಖೆ ಹಲವು ಯೋಜನೆಗಳನ್ನು ರೂಪಿಸಿದ್ದು ಅವುಗಳನ್ನು ಅನುಷ್ಠಾನಕ್ಕೆ ಗೋಳಿಸಿ ಪ್ರತಿಯೋಬ್ಬ ವಿದ್ಯಾರ್ಥಿ ತಲುಪಿಸಬೇಕಾದ ಮಹತ್ತರ ಜವಾಬ್ದಾರಿ ಇಲಾಖೆ ನಮಗೆ ನೀಡಿದೆ ಎಲ್ಲರ ಸಹಾಯ ಸಹಕಾರದಿಂದ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಮತ್ತು ಬಿಸಿಯೂಟ ಕಾರ್ಯಕ್ರಮದಲ್ಲಿ ಮಹತ್ತರ ಬದಲಾವಣೆ ತರಲು ಪ್ರಯತ್ನಸಲಾಗುವುದು ಎಂದು ಜಿ.ಬಿ.ಬಳಗಾರ ಹೇಳಿದರು
ಈ ಮಧ್ಯ ನೂತನವಾಗಿ ಬಿಸಿಯೂಟ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲು ಕಛೇರಿಗೆ ಆಗಮಿಸಿದ ಜಿ.ಬಿ.ಬಳಗಾರ ಅವರು ಜೊತೆ ಗೋಕಾಕ ಮತ್ತು ಮೂಡಲಗಿ ಶೈಕ್ಷಣಿಕ ವಲಯದ ಸೂಮಾರು 200 ಕ್ಕೂ ಹೆಚ್ಚು ಶಿಕ್ಷಕರು , ಶಿಕ್ಷಕರ ವಿವಿಧ ಸಂಘಗಳ ಪಧಾಧಿಕಾರಿಗಳು ಸ್ವಯಂ ಪ್ರೇರಿತವಾಗಿ ಗಳಿಕೆ (ಸಿ.ಎಲ್) ರಜೆ ಪಡೆದು ಬಂದಿದ್ದರಿಂದ ಉಪನಿರ್ದೇಶಕರ ಕಛೇರಿ ಕಿಕ್ಕಿರಿದು ತುಂಬಿತ್ತು ಎಲ್ಲ ಶಿಕ್ಷಕ ಬಳಗ ಮತ್ತು ಅಭಿಮಾನಿಗಳು ತಮ್ಮ ನೆಚ್ಚಿನ ಅಧಿಕಾರಿಯನ್ನು ಅಭಿನಂದಿಸಿ ಗೌರವಿಸಿದ ಸಂಧರ್ಭ ಎಲ್ಲರ ಹೂಬ್ಬೇರುವಂತೆ ಮಾಡಿತ್ತು
ವೇದಿಕೆಯಲ್ಲಿ ಉಪನಿರ್ದೇಶಕ ರಾಜೀವ ನಾಯಕ , ಚಿಕ್ಕೋಡಿ ಡಯಟ್ ಪ್ರಾಚಾರ್ಯ ಮೋಹನ ಜೀರಗ್ಯಾಳ , ಚಿಕ್ಕೋಡಿ ಶಿಕ್ಷಣಾಧಿಕಾರಿ ಅಜೀತ ಮನ್ನೀಕೇರಿ , ಎಂ.ಡಿ.ಬೇಗ , ಡಿ.ಎಸ್.ಕುರ್ಲಕಣಿ , ಸಿದ್ದರಾಮ ಲೋಕನ್ನವರ , ಜಿ.ಆರ್.ಮಾಳಗಿ , ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಬಿಸಿಯೂಟ ಸಹಾಯಕ ನಿರ್ದೇಶಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು