RNI NO. KARKAN/2006/27779|Monday, November 3, 2025
You are here: Home » breaking news » ಗೋಕಾಕ:ಭಾರತ ದೇಶ ಆಧ್ಯಾತ್ಮದ ತವರು ಮನೆ. ಇದು ಜಗತ್ತಿಗೆ ಮಾದರಿಯಾಗಿದೆ : ಶ್ರೀ ಮುರುಘರಾಜೇಂದ್ರ ಸ್ವಾಮೀಜಿ

ಗೋಕಾಕ:ಭಾರತ ದೇಶ ಆಧ್ಯಾತ್ಮದ ತವರು ಮನೆ. ಇದು ಜಗತ್ತಿಗೆ ಮಾದರಿಯಾಗಿದೆ : ಶ್ರೀ ಮುರುಘರಾಜೇಂದ್ರ ಸ್ವಾಮೀಜಿ 

ಭಾರತ ದೇಶ ಆಧ್ಯಾತ್ಮದ ತವರು ಮನೆ. ಇದು ಜಗತ್ತಿಗೆ ಮಾದರಿಯಾಗಿದೆ : ಶ್ರೀ ಮುರುಘರಾಜೇಂದ್ರ ಸ್ವಾಮೀಜಿ

ಗೋಕಾಕ ಮೇ 17 : ಭಾರತ ದೇಶ ಆಧ್ಯಾತ್ಮದ ತವರು ಮನೆ. ಇದು ಜಗತ್ತಿಗೆ ಮಾದರಿಯಾಗಿದೆ ಎಂದು ಇಲ್ಲಿನ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಬುಧವಾರದಂದು ನಗರದ ವಿಠಲ ಮಂದಿರದಲ್ಲಿ ಸದ್ಭಕ್ತರು ಹಮ್ಮಿಕೊಂಡ ಸಪ್ತಾಹ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು ಸಂತರ, ಸನ್ಯಾಸಿಗಳ, ಶರಣ ಸಹವಾಸ ಮಾಡಿದರೆ ಜೀವನ ಪಾವನವಾಗುತ್ತದೆ. ಆ ದಿಸೆಯಲ್ಲಿ ನಾವೆಲ್ಲರೂ ಕೂಡಿಕೊಂಡು ಸಂತರ ಶರಣರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಪ್ರಭು ಚವ್ಹಾಣ, ನಾಮದೇವ ರೇಣಕೆ, ರಾಮ ಭಗತ,ರಾಮ ಪಾಟೀಲ, ಮಾರುತಿ ಜಡೆನ್ನವರ, ಭೀಮಶಿ ಮಾಳಿ, ಬಾಳಪ್ಪ ಗುಗ್ಗಳಿ, ಮಹೇಶ್ ಕಟಾರೆ, ಲಕ್ಷ್ಮಣ ಯಮಕನಮರಡಿ, ಆನಂದ ಬದ್ನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: