RNI NO. KARKAN/2006/27779|Sunday, August 3, 2025
You are here: Home » breaking news » ಮೂಡಲಗಿ:ಕುಲಗೋಡ ಭಾಗದ ರೈತರ ಜಮೀನುಗಳಿಗೆ ಹರಿಸುವ ಜವಾಬ್ದಾರಿ ನನ್ನದು : ಶಾಸಕ ಬಾಲಚಂದ್ರ

ಮೂಡಲಗಿ:ಕುಲಗೋಡ ಭಾಗದ ರೈತರ ಜಮೀನುಗಳಿಗೆ ಹರಿಸುವ ಜವಾಬ್ದಾರಿ ನನ್ನದು : ಶಾಸಕ ಬಾಲಚಂದ್ರ 

ಕುಲಗೋಡ ಭಾಗದ ರೈತರ ಜಮೀನುಗಳಿಗೆ ಹರಿಸುವ ಜವಾಬ್ದಾರಿ ನನ್ನದು : ಶಾಸಕ ಬಾಲಚಂದ್ರ

ಮೂಡಲಗಿ ಫೆ 23: ಹಿಡಕಲ್ ಜಲಾಶಯದಿಂದ ಬಿಡಲಾಗುವ ನೀರನ್ನು ಕುಲಗೋಡ ವಿತರಣಾ ಕಾಲುವೆಯ ಕೊನೆಯ ಭಾಗದ ಲಕ್ಷ್ಮೇಶ್ವರ, ಹೊನಕುಪ್ಪಿ, ಹೊಸಟ್ಟಿ, ಭೈರನಟ್ಟಿ, ಕುಲಗೋಡ ಭಾಗದ ರೈತರ ಜಮೀನುಗಳಿಗೆ ಹರಿಸುವ ಜವಾಬ್ದಾರಿ ನನ್ನದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಗುರುವಾರದಂದು ಬಗರನಾಳ, ಬಿಲಕುಂದಿ, ಲಕ್ಷ್ಮೇಶ್ವರ ಹಾಗೂ ಹೊನಕುಪ್ಪಿ ಗ್ರಾಮಗಳಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಈಗಾಗಲೇ ಕುಲಗೋಡ ವಿತರಣಾ ಕಾಲುವೆಯ ರೈತರ ಜಮೀನುಗಳಿಗೆ ಮೂರು ಬಾರಿ ಜಲಾಶಯದಿಂದ ನೀರು ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿಯೂ ಕೃಷಿ ಚಟುವಟಿಕೆಗಾಗಿ ಜಲಾಶಯದಿಂದ ಬಿಡಲಾಗುತ್ತಿರುವ ನೀರನ್ನು ಶಾಶ್ವತವಾಗಿ ಈ ಭಾಗಕ್ಕೆ ಹರಿಸುತ್ತೇನೆಂದು ಹೇಳಿದರು.
ಈಗಾಗಲೇ ಕುಲಗೋಡ ವಿತರಣಾ ಕಾಲುವೆಯ ಸುಧಾರಣೆಗಾಗಿ ಸರ್ಕಾರದ ಬಳಿ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಜೂನ್ ತಿಂಗಳಲ್ಲಿ ಕಾಮಗಾರಿಯನ್ನು ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇದರ ಬಗ್ಗೆ ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ರೈತರ ಅಭಿವೃದ್ಧಿಯೇ ನನ್ನ ಪ್ರಮುಖ ಧ್ಯೇಯವಾಗಿದ್ದು ರೈತರ ಹಿತಕ್ಕಾಗಿ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹೇಳಿದರು.
ಕೌಜಲಗಿಯಿಂದ ಹೊನಕುಪ್ಪಿ ಮಾರ್ಗವಾಗಿ ಲಕ್ಷ್ಮೇಶ್ವರ ಕ್ರಾಸವರೆಗೆ ರಸ್ತೆಯನ್ನು ದುರಸ್ತಿ ಮಾಡಲಾಗುವುದು. ಜೊತೆಗೆ ಕುಲಗೋಡದಿಂದ ಯಾದವಾಡವರೆಗೆ ರಸ್ತೆ ಕಾಮಗಾರಿಯನ್ನು ಅಭಿವೃದ್ಧಿಪಡಿಸಲಾಗುವುದು. ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದಾಗಿ ಹೇಳಿದ ಅವರು, ಮಾರ್ಚ ತಿಂಗಳೊಳಗೆ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದರು. ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ನೀಡುವ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕ ಶೌಚಾಲಯಗಳನ್ನು ಈಗಾಗಲೇ ಸಾರ್ವಜನಿಕರ ಬೇಡಿಕೆಯಂತೆ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ಜಿಪಂ ಮಾಜಿ ಸದಸ್ಯ ವಿಠ್ಠಲ ಸವದತ್ತಿ, ಗೋಸಬಾಳ ಗ್ರಾಪಂ ಅಧ್ಯಕ್ಷ ಶಿವಲಿಂಗ ಬಳಿಗಾರ, ಬಿ.ಕೆ. ಗಂಗರಡ್ಡಿ, ಪ್ರಕಾಶ ಹೆಗಡೆ, ತಾಪಂ ಸದಸ್ಯ ರಮೇಶ ಗಡಗಿ, ಈರಪ್ಪ ಹಾವಾಡಿ, ಸುಭಾಸ ಹಾವಾಡಿ, ಬಸನಗೌಡ ಪಾಟೀಲ, ಹನಮಂತ ಹಾವಾಡಿ, ಯಮನಪ್ಪ ಹಾವಾಡಿ, ಬಸಪ್ಪ ಕಪರಟ್ಟಿ, ಅರ್ಜುನ ಬಂಗಾರಿ, ರಮೇಶ ಇಟ್ನಾಳ, ಸುರೇಶ ಸಣ್ಣಕ್ಕಿ, ಎಚ್.ಕೆ. ಅಲಕನೂರ, ಶೇಖರ ಸಿದ್ಧಾಪೂರ, ಹಣಮಂತ ಹೆಗಡೆ, ಯಲ್ಲಪ್ಪ ಅಲಕನೂರ, ಬಸು ಹೆಗಡೆ, ಅನೀಲ ಕನಕಿಕೋಡಿ, ಮಕ್ತುಮ ಮೋಮಿನ, ಸಂಜೀವ ಗಡಗಿ, ಶೇಖರ ಹರಿಜನ, ಉದಯ ಕರಜಗಿಮಠ ಪ್ರಮುಖರು ಉಪಸ್ಥಿತರಿದ್ದರು.

Related posts: