ಘಟಪ್ರಭಾ:ಪೇವರ್ಸ್ ಹಾಕುವ ಕಾಮಗಾರಿಗೆ ಚಾಲನೆ
ಪೇವರ್ಸ್ ಹಾಕುವ ಕಾಮಗಾರಿಗೆ ಚಾಲನೆ
ಘಟಪ್ರಭಾ ಫೆ 18 ,: ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 12 ನೇ ವಾರ್ಡಿನಲ್ಲಿ 2017-18 ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಅನುದಾನಡಿಯಲ್ಲಿ ಮಾರುತಿ ದೇವಸ್ಥಾನದಿಂದ ದೇಶಪಾಂಡೆ ಮನೆವರೆಗೆ ರಸ್ತೆಯ ಮೇಲೆ ಪೇವರ್ಸ್ ಹಾಕುವ ಕಾಮಗಾರಿಗೆ ಗ್ರಾಮದ ಹಿರಿಯರಾದ ಡಿ.ಎಂ.ದಳವಾಯಿ ಅವರು ಶುಕ್ರವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಇಮ್ರಾನ್ ಬಟಕುರ್ಕಿ, ಸಲೀಮ ಕಬ್ಬೂರ, ಮಲ್ಲೇಶ ಕೋಳಿ, ಪ,ಪಂ ಮುಖ್ಯಾಧಿಕಾರಿ ಕೆ.ಬಿ.ಪಾಟೀಲ, ಗ್ರಾಮಸ್ಥರಾದ ಸುರೇಶ ಪೂಜಾರಿ, ಡಾ.ಹೂಗಾರ, ರಮಜಾನ ಖೋಜಾ, ಕೋಮಲ್ ಖೋಜಾ, ಮೌಲಾ ಬಾಗವಾನ, ಶೇಖರ ಕುಲಗೂಡ, ಫೈಜಲ ಬಾಗವಾನ, ಗುತ್ತಿಗೆದಾರ ಶಂಕರ ಗಾಡಿವಡ್ಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
