ಮೂಡಲಗಿ:ವಡೇರಹಟ್ಟಿ ಗ್ರಾಮದ ಅಭಿವೃದ್ಧಿಗೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಮಂಜೂರು : ಶಾಸಕ ಬಾಲಚಂದ್ರ
ವಡೇರಹಟ್ಟಿ ಗ್ರಾಮದ ಅಭಿವೃದ್ಧಿಗೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಮಂಜೂರು : ಶಾಸಕ ಬಾಲಚಂದ್ರ
ಮೂಡಲಗಿ ಫೆ 11 : ವಡೇರಹಟ್ಟಿ ಗ್ರಾಮದ ಅಭಿವೃದ್ಧಿಗೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಮಂಜೂರಾಗಿದ್ದು, ಈ ಯೋಜನೆ ಯಿಂದ ಗ್ರಾಮವು ಸರ್ವಾಂಗೀಣ ವಿಕಾಸ ಹೊಂದಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸಮೀಪದ ವಡೇರಹಟ್ಟಿ ಗ್ರಾಮದಲ್ಲಿ ರವಿವಾರದಂದು ಒಂದು ಕೋ.ರೂ ವೆಚ್ಚದ ಸಿ.ಎಮ್.ಜಿ.ವಿ.ವಾಯ್ ಯೋಜನೆಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಯೋಜನೆಯಲ್ಲಿ ರಸ್ತೆಗಳ ಸುಧಾರಣೆ, ರಂಗಮಂದಿರ, ಗರಡಿ ಮನೆ, ದೇವಸ್ಥಾನದ ಜೀರ್ಣೋದ್ಧಾರ, ಸೌರ ಬೆಳಕು ಮುಂತಾದ ಅಭಿವೃದ್ಧಿ ಪರ ಕಾರ್ಯಗಳು ನಡೆಯಲಿವೆ. ಗುಣಮಟ್ಟದಿಂದ ಕಾಮಗಾರಿಯನ್ನು ಕೈಗೊಂಡು ನಿಗಧಿತ ಅವಧಿಯೊಳಗೆ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮವು ಅಭಿವೃದ್ಧಿ ಹೊಂದಬೇಕಾದರೆ ತಮ್ಮಲ್ಲಿರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು, ಅಭಿವೃದ್ಧಿಗೆ ಎಲ್ಲರೂ ಒಂದಾಗಬೇಕು. ಒಗ್ಗಟ್ಟಿನಿಂದ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯವಿದೆ ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಮೀಪದ ವಡೇರಹಟ್ಟಿ ಗ್ರಾಮದಲ್ಲಿ ರವಿವಾರ ಸಂಜೆ ಒಂದು ಕೋ.ರೂ ವೆಚ್ಚದ ಸಿ.ಎಮ್.ಜಿ.ವಿ.ವಾಯ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಯಾರಿಗೂ ದುಡ್ಡು ಕೊಡದಿರಿ : ಅರ್ಹ ಫಲಾನುಭವಿಗಳನ್ನು ಗುರ್ತಿಸಿ ಅಂತವರಿಗೆ ಯೋಜನೆಗಳನ್ನು ಕಲ್ಪಿಸಿಕೊಡುವ ಜವಾಬ್ದಾರಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗಿದೆ. ತಮ್ಮ ಜವಾಬ್ದಾರಿಯನ್ನರಿತು ಜನೋಪಯೋಗಿ ಕೆಲಸಗಳನ್ನು ಮಾಡಬೇಕು. ಮದ್ಯವರ್ತಿಗಳ ಹಾವಳಿಯಿಂದಾಗಿ ಅರ್ಹ ಕುಟುಂಬಗಳಿಗೆ ಸರಕಾರದ ಸೌಲಭ್ಯಗಳು ಮರಿಚಿಕೆಯಾಗಿವೆ. ಅದರಲ್ಲೂ ಮನೆಗಳ ಹಂಚಿಕೆ ವಿಚಾರದಲ್ಲಿ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ಬಂದಿದ್ದು, ಮನೆಗಳ ಮಂಜೂರಾತಿಗಾಗಿ ಫಲಾನುಭವಿಗಳು ಯಾರಿಗೂ ಹಣ ನೀಡಬೇಡಿ ನೀಡಿದರೆ ಅದಕ್ಕೆ ನೀವೇ ಜವಾಬ್ದಾರರು ಆಗುತ್ತೀರಿ ಎಂದು ಖಡಕ್ ಆಗಿ ನುಡಿದರು.
ರಸ್ತೆಗಳ ಸುಧಾರಣೆ: ಈಗಾಗಲೇ ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ರೈತರ ಜಮೀನುಗಳಿಗೆ ಸಂಪರ್ಕ ಸಾಧಿಸಲು ಅನುಕೂಲವಾಗುವಂತೆ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಮಾರ್ಚ ತಿಂಗಳೊಳಗೆ ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳು ಮುಗಿಯಲಿವೆ ಎಂದು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿದರು ಹಾಗೂ ಆರ್.ಐ.ಡಿ.ಎಫ್-20 ಯೋಜನೆಯಡಿ 9.17 ಲಕ್ಷ ರೂಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಮಾರುತಿ ತೋಳಮರಡಿ, ಗ್ರಾ.ಪಂ ಅಧ್ಯಕ್ಷ ಸಿದ್ದಪ್ಪ ವಡೇರ, ತಾ.ಪಂ ಸದಸ್ಯ ಗೋಪಾಲ ಕುದರಿ, ವಕೀಲ ಮುತ್ತಣ್ಣಾ ಕುಳ್ಳೂರ, ಕೆ.ಎಮ್.ಎಫ ನಿರ್ದೇಶಕ ಮಲ್ಲು ಪಾಟೀಲ, ಬನಪ್ಪ ವಡೇರ, ಅಡಿವೆಪ್ಪ ಹಾದಿಮನಿ, ವಿಠ್ಠಲ ಗಿಡೋಜಿ, ಸಿದ್ದಪ್ಪ ಪಡಚಿ, ಪರಸಪ್ಪ ಸಾರಾಪೂರ, ಸಿದ್ಲಿಂಗ ಗಿಡೋಜಿ, ಮಾರುತಿ ಸೋಡ್ರಗೋಳ, ಶಿವಪ್ಪ ಗಿಡೋಜಿ, ರುದ್ರಗೌಡ ಪಾಟೀಲ, ರೆಬ್ಬುಜಿ ಮಳಿವಡೇರ, ಗೋಪಾಲ ಬಿರನಗಡ್ಡಿ, ಸಿದ್ದಪ್ಪ ಪೂಜೇರಿ, ವಿಠ್ಠಲ ಜೋಕಾನಟ್ಟಿ, ರಮೇಶ ಈರಗಾರ ಮುಂತಾದವರು ಉಪಸ್ಥಿತರಿದ್ದರು.
