ಸವದತ್ತಿ:ಪಿಎಸ್ಐ ಪರಶುರಾಮ ಪೂಜಾರಗೆ ಕರವೇಯಿಂದ ಸನ್ಮಾನ

ಪಿಎಸ್ಐ ಪರಶುರಾಮ ಪೂಜಾರಗೆ ಕರವೇಯಿಂದ ಸನ್ಮಾನ
ಸವದತ್ತಿ ಅ 29 : ಮುಖ್ಯಮಂತ್ರಿ ಸೇವಾ ಪದಕಕ್ಕೆ ಆಯ್ಕೆಯಾದ ಸವದತ್ತಿ ಪಿಎಸ್ಐ ಪರಶುರಾಮ ಪೂಜಾರ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು
ಬುಧವಾರದಂದು ಸವದತ್ತಿ ನಗರದ ಪೊಲೀಸ್ ಠಾಣೆಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಗೋಕಾಕ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಅವರು ಮೂಲತಃ ಗೋಕಾಕ ನಗರದವರಾದ ಪಿಎಸ್ಐ ಪೂಜಾರ ಅವರಿಗೆ ಗೌರವಿಸಿ ಸತ್ಕರಿಸಿದರು
ನಂತರ ಮಾತನಾಡಿದ ಖಾನಾಪುರ ಠಾಣೆಯಲ್ಲಿದ್ದು ಜನ ಮೆಚ್ಚುವ ಸೇವೆ ಗೈದಿರುವ ಪೂಜಾರ ಅವರ ಸೇವೆಯನ್ನು ಗುರುತಿಸಿರುವ ಇಲಾಖೆ ಅವರಿಗೆ 2017 ರ ಮುಖ್ಯಮಂತ್ರಿಗಳ ವಿಶಿಷ್ಟ ಸೇವಾ ಪದಕವನ್ನು ನೀಡಿ ಗೌರವಿಸಲು ಮುಂದಾಗಿರುವದು ಶ್ಲಾಘನೀಯ. ಬಡ ಕುಟುಂಬದಲ್ಲಿ ಹುಟ್ಟಿ ಇಷ್ಟೊಂದು ಸಾಧನೆ ಮಾಡಿದ ಪರಶುರಾಮ ಅವರ ಸಾಧನೆ ಇಲಾಖೆಗೆ ಮಾದರಿ ಅವರ ಈ ಸೇವೆ ಪೊಲೀಸ್ ಇಲಾಖೆಗೆ ಇನ್ನಷ್ಟು, ಮತ್ತಷ್ಟು ದೊರೆಯಲೆಂದು ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಸವದತ್ತಿ ಕರವೇ ಅಧ್ಯಕ್ಷ ಉದಯ ಚಿಕ್ಕನ್ನವರ , ಸಾಧಿಕ ಹಲ್ಯಾಳ , ಕೃಷ್ಣಾ ಖಾನಪ್ಪನವರ , ಮುಗುಟ ಪೈಲವಾನ , ಫಕ್ಕರಪ್ಪ ಗಣಾಚಾರಿ , ಪ್ರಕಾಶ ಮೂಳ್ಳರ , ಸೇರಿದಂತೆ ಅನೇಕರು ಉಪಸ್ಥಿತರಿದ್ದರು