RNI NO. KARKAN/2006/27779|Monday, July 14, 2025
You are here: Home » breaking news » ಗೋಕಾಕ:ಪ್ರತಿಯೊಬ್ಬರೂ ಕನ್ನಡದಲ್ಲೇ ಮಾತನಾಡುವ ಸಂಕಲ್ಪ ತೊಡಬೇಕು: ಸಮ್ಮೇಳನದ ಸರ್ವಾಧ್ಯಕ್ಷ ಮಹಾಲಿಂಗ ಮಂಗಿ ಅಭಿಮತ

ಗೋಕಾಕ:ಪ್ರತಿಯೊಬ್ಬರೂ ಕನ್ನಡದಲ್ಲೇ ಮಾತನಾಡುವ ಸಂಕಲ್ಪ ತೊಡಬೇಕು: ಸಮ್ಮೇಳನದ ಸರ್ವಾಧ್ಯಕ್ಷ ಮಹಾಲಿಂಗ ಮಂಗಿ ಅಭಿಮತ 

ಪ್ರತಿಯೊಬ್ಬರೂ ಕನ್ನಡದಲ್ಲೇ ಮಾತನಾಡುವ ಸಂಕಲ್ಪ ತೊಡಬೇಕು: ಸಮ್ಮೇಳನದ ಸರ್ವಾಧ್ಯಕ್ಷ ಮಹಾಲಿಂಗ ಮಂಗಿ ಅಭಿಮತ

ಗೋಕಾಕ ಫೆ 4: (ಪ್ರೋ: ಕೆ.ಜಿ.ಕುಂದಣಗಾರ ವೇದಿಕೆ) ಕನ್ನಡದಲ್ಲೇ ಮಾತನಾಡುವ ಸಂಕಲ್ಪ ಪ್ರತಿಯೊಬ್ಬರೂ ತೊಡಬೇಕು ಕನ್ನಡ ಸಾಹಿತ್ಯ, ಜಾನಪದ, ಸಂಸ್ಕಂತಿ,ದೇಶಿಕಲೆ ಉಳಿಸಿ ಬೆಳೆಸುವ ಜವಾಬ್ದಾರಿ ಅವಶ್ಯವಾಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಮಹಾಲಿಂಗ ಮಂಗಿ ಹೇಳಿದರು.
ಅವರು ಭಾನುವಾರದಂದು ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ,ಗೋಕಾಕ ತಾಲೂಕಾ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು.
ಕನ್ನಡದ ಬೆಳವಣಿಗೆಗೆ ಕೃಷಿ ಮತ್ತು ಶಿಕ್ಷಣದ ಸಮಸ್ಯೆಗಳೊಂದಿಗೆ ಜಾಗತೀಕರಣ, ಸಂಸ್ಕøತಿಕರಣ,ಖಾಸಗೀಕರಣ,ನಗರೀಕರಣ ಮುಂತಾದ ಸಮಸ್ಯೆ ಸವಾಲುಗಳನ್ನು ಎದುರಿಸಬೇಕಾಗಿದೆ. ನಮ್ಮತನ, ಕನ್ನಡತನ,ಮಾನವತೆ ಏನಾದರೂ ಉಳಿದಿದ್ದರೇ ಅದು ಹಳ್ಳಿಗಳಲ್ಲಿ ಮತ್ತು ಧರ್ಮ, ಸಂಸ್ಕøತಿ, ಪರಂಪರೆಗಳಲ್ಲಿ ಮಾತ್ರ ಎಂದರು.

ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ, ಗೋಕಾಕ ತಾಲೂಕಾ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಮಹಾಲಿಂಗ ಮಂಗಿ ದಂಪತಿಗಳನ್ನು ಬೆಳ್ಳಿರಥದಲ್ಲಿ ಸ್ವಾಗತ ಕೋರಲಾಯಿತು.

ಕನ್ನಡವನ್ನು ಕೇವಲವಾಗಿ ಕಾಣುತ್ತಾ ಇಂಗ್ಲಿಷ್ ನ್ನು ಉನ್ನತ್ತೀಕರಿಸಿ ಮಾತನಾಡುವವರು ತಿಳಿದಿರಬೇಕು. ಆಂಗ್ಲ ಭಾಷೆ ಕಾಡು ಭಾಷೆಯಾಗಿದ್ದಾಗಮರಾಠಿ,ಮಲಿಯಾಳಿ ಇನ್ನೂ ಕಣ್ತರೆದೆ ಇದ್ದಾಗ ಕನ್ನಡದಲ್ಲೇ ಮಹಾಕಾವ್ಯ ರಚನೆಗೊಂಡಿದ್ದವು.ಸಶಕ್ತ ಸಂಪತ್ ಭರಿತ ಶಾಸ್ತ್ರೀಯ ಭಾಷೆ ಕನ್ನಡ ವಿಕಸನಗೊಳ್ಳುತ್ತಾ ಹಳಗನ್ನಡ, ನಡುಗನ್ನಡ, ಉಪಕ್ರಮೀಸಿ ಹೊಸಗನ್ನಡದ ಕಾಲಘಟ್ಟದಲ್ಲಿದ್ದೇವೆ. ಅನ್ಯಭಾಷೆಗಳಲ್ಲಿ ಮಹಾಕಾವ್ಯ ಪರಂಪರೆ ನಿಂತು ಹೋದರೂ ಇಂದಿಗೂ ನಿರಂತರವಾಗಿ ಮಹಾಕಾವ್ಯಗಳು ಬರುತ್ತಿವೆ. ಭಾಷೆ ಶ್ರೀಮಂತಿಕೆ ಶ್ರೇಷ್ಠತೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ ಎಂದರು.
ಅನ್ಯ ಭಾಷಿಕರ ಅತೀಕ್ರಮದಲ್ಲೂ ಕರ್ನಾಟಕ ಹಲವು ಕಡೆ ಮುಂಬೈ, ಹೈದರಾಬಾದ್ , ಮದ್ರಾಸ್, ಮೈಸೂರ ಪ್ರಾಂತಗಳಾಗಿ ಹಂಚಿಕೊಂಡಿದ್ದರೂ ತನ್ನ ಅಖಂಡತೆಯನ್ನು ಕಾಯ್ದುಕೊಂಡಿದೆ. ಏಕೀಕರಣಕ್ಕಾಗಿ ಬೃಹತ್ ಹೋರಾಟ ನಡೆದು 1956ರ ನ.1ರಂದು ರಾಜ್ಯೋಧ್ಯವಾದರೂ ಕರ್ನಾಟಕ ನಾಮಕರಣಗೊಳ್ಳಲು 17 ವರ್ಷ ಬೇಕಾಯಿತು. ರಾಜ್ಯದಲ್ಲಿಂದು ಕನ್ನಡ ಆಡಳಿತ ಶಿಕ್ಷಣ ಮತ್ತು ಅನ್ನದ ಭಾಷೆಯಾಗಬೇಕಾಗಿದೆ. ಏಕೀಕರಣದ ರೂವಾರಿಗಳ ಕನಸಿನಂತೆ ಎಂದೆಂದಿಗೂ ಅಖಂಡ ಕರ್ನಾಟಕವಾಗಿಯೇ ಬೆಳಗಬೇಕಾಗಿದೆ ಎಂದು ಮಹಾಲಿಂಗ ಮಂಗಿ ಹೇಳಿದರು.

ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ, ಗೋಕಾಕ ತಾಲೂಕಾ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ದೇಶಿಸಿ ಸಮ್ಮೇಳನದ ಸರ್ವಾಧ್ಯಕ್ಷ ಮಹಾಲಿಂಗ ಮಂಗಿ ಮಾತನಾಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುಣಧೋಳಿಯ ಶಿವಾನಂದ ಸ್ವಾಮಿಜಿ, ಬಾಗೋಜಿಕೊಪ್ಪದ ಶಿವಲಿಂಗ ಮಹಾಸ್ವಾಮಿಜಿ ವಹಿಸಿದ್ದರು.
ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು 4ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದರು.
ನಿಕಟಪೂರ್ವ ಅಧ್ಯಕ್ಷ ಪ್ರೋ: ಚಂದ್ರಶೇಖರ ಅಕ್ಕಿ ಅವರು ಸರ್ವಾಧ್ಯಕ್ಷ ಮಹಾಲಿಂಗ ಮಂಗಿ ಅವರಿಗೆ ಕನ್ನಡ ಧ್ವಜವನ್ನು ಹಸ್ತಾಂತರಿಸಿದರು.
ವಿಶ್ರಾಂತ ಪ್ರಾಧ್ಯಾಪಕರಾದ ಡಾ| ಸಿ.ಕೆ.ನಾವಲಗಿ ಹಾಗೂ ಪ್ರೋ: ಗಂಗಾಧರ ಮಳಗಿ ಅವರು ಕೃತಿಗಳನ್ನು ಬಿಡುಗಡೆ ಮಾಡಿದರು.
ಅತಿಥಿಗಳಾಗಿ ಹೂನ್ನೂರಿನ ಪ್ರವಚನಕಾರ ಡಾ| ಈಶ್ವರ ಮಂಟೂರ, ಜಿ.ಪಂ ಸದಸ್ಯರಾದ ಶಕುಂತಲಾ ಪರುಶೆಟ್ಟಿ, ಶಶಿಕಲಾ ಸಣ್ಣಕ್ಕಿ, ಎಂ.ಆರ್.ಭೋವಿ,ಅಶೋಕ ಪರುಶೆಟ್ಟಿ, ಗ್ರಾ.ಪಂ ಅಧ್ಯಕ್ಷ ರಾಯಪ್ಪ ಬಳೋಲದಾರ, ಪ್ರಭಾ ಶುಗರ್ ಉಪಾಧ್ಯಕ್ಷ ರಾಮಣ್ಣಾ ಮಹಾರೆಡ್ಡಿ, ಪರುಶರಾಮ ನಾಯಿಕ್, ತಾ.ಪಂ ಸದಸ್ಯರಾದ ಶಾಂತಪ್ಪ ಹಿರೇಮೇತ್ರಿ, ಲಕ್ಷ್ಮಣ ಮಸಗುಪ್ಪಿ, ಪಿಕೆಪಿಎಸ್ ಅಧ್ಯಕ್ಷ ಮಹೇಶ ಪಟ್ಟಣಶೆಟ್ಟಿ, ಎಸ್.ಬಿ.ಲೋಕನ್ನವರ, ಹುಕ್ಕೇರಿ ಕಸಾಪ ಅಧ್ಯಕ್ಷ ಪ್ರಕಾಶ ದೇಶಪಾಂಡೆ, ಬೆಳಗಾವಿ ಕಸಾಪ ಅಧ್ಯಕ್ಷ ಬಸವರಾಜ ಸಸಾಲಟ್ಟಿ, ಸುಭಾಸ ಕೌಜಲಗಿ, ಅಶೋಕ ಉದ್ದಪ್ಪನವರ, ಝಾಕೀರ ಜಮಾದಾರ,ಅಕ್ಬರ ಮುಲ್ತಾನಿ, ಗ್ರಾ.ಪಂ ಸದಸ್ಯರು, ಅಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.
ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ ಸ್ವಾಗತಿಸಿದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ| ರಾಜೇಂದ್ರ ಸಣ್ಣಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನದ ಸರ್ವಾಧ್ಯಕ್ಷ ಮಹಾಲಿಂಗ ಮಂಗಿ ದಂಪತಿಗಳನ್ನು ಬೆಳ್ಳಿರಥದಲ್ಲಿ ಭವ್ಯ ಮೆರವಣಿಗೆಯು ಗ್ರಾ.ಪಂ ಕಾರ್ಯಾಲಯದಿಂದ ವೇದಿಕೆ ವರೆಗೆ ಕುಂಭ ಮೇಳ ಹಾಗೂ ವಿವಿಧ ಜಾನಪದ ಕಲಾ ತಂಡಗಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭನೆಯಿಂದ ಜರುಗಿತು.
ನಿರ್ಣಯಗಳು: * ಕೌಜಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ರಚನೆ ಮಾಡಬೇಕು. *ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವನ್ನು ಕೌಜಲಗಿಯಲ್ಲಿ ಪ್ರಾರಂಭಗೊಳ್ಳಬೇಕು. * ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಗೆ ಪ್ರೋ: ಕೆ.ಜಿ.ಕುಂದಣಗಾರ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಗೆ ಕೌಜಲಗಿ ನಿಂಗಮ್ಮ ಹೆಸರನ್ನು ನಾಮಕರಣ ಮಾಡುವ ನಿರ್ಣಯವನ್ನು ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು

Related posts: