ಗೋಕಾಕ:ದಿ.23 ರಂದು ಅಭಿಮಾನಿಗ ಮತ್ತು ಹಿತೈಸಿಗಳ ಚಿಂತನ-ಮಂಥನ ಸಭೆ : ಜೆಡಿಎಸ್ ಮುಖಂಡ ಅಶೋಕ

ದಿ.23 ರಂದು ಅಭಿಮಾನಿಗ ಮತ್ತು ಹಿತೈಸಿಗಳ ಚಿಂತನ-ಮಂಥನ ಸಭೆ : ಜೆಡಿಎಸ್ ಮುಖಂಡ ಅಶೋಕ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ 17:
ಸೋಮವಾರ ದಿ. 23-12-2019 ರಂದು ಮುಂಜಾನೆ 11-00 ಗಂಟೆಗೆ ನಗರದ ‘ಜ್ಞಾನ ಮಂದಿರ’ ಆಧ್ಯಾತ್ಮ ಕೇಂದ್ರಲ್ಲಿ ದಿ. 05 ರಂದು ಜರುಗಿದ ಗೋಕಾಕ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿಯಾದ ತಮ್ಮ ಪರ ಪ್ರಚಾರದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಕಾರ್ಯನಿರ್ವಹಿಸಿದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಮತ್ತು ಹಿತೈಸಿಗಳ ಚಿಂತನ-ಮಂಥನ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಚುನಾವಣೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಮುಂದಿನ ದಿನಗಳಲ್ಲಿ ಸ್ವಾಭಿಮಾನದ ಸಂಘಟನೆಯನ್ನು ತಾಲೂಕಿನಲ್ಲಿ ಬಲಪಡಿಸಲು ಸಹಕಾರ ನೀಡಬೇಕೆಂದು ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿಯಾಗಿದ್ದ ಅಶೋಕ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಚುನಾವಣೆಯಲ್ಲಿ ಪ್ರಚಾರ ಕಾರ್ಯದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿರುವ ಜೆ.ಡಿ.ಎಸ್. ಪಕ್ಷದ ರಾಷ್ಟ್ರ ಮತ್ತು ರಾಜ್ಯ ಘಟಕದ ಅಧ್ಯಕ್ಷರು, ಮುಖಂಡರುಗಳು ಮತ್ತು ಪದಾಧಿಕಾರಿಗಳು, ಜಿಲ್ಲಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಚುನಾವಣೆಯಲ್ಲಿ ಯಾವುದೇ ತರಹದ ಒತ್ತಾಯ ಮತ್ತು ಆಮಿಷಗಳಿಗೆ ಒಳಗಾಗದೇ ಕಾರ್ಯನಿರ್ವಹಿಸಿ ಗೋಕಾಕ ಮತ್ತು ಅರಭಾಂವಿ ವಿಧಾನಸಭಾ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.