ಬೆಳಗಾವಿ : ಸಿಸಿಬಿ ಪೊಲೀಸರ ಭರ್ಜರಿ ಬೇಟೆ : ಮನೆ ಕಳ್ಳತನ ಮಾಡಿದ ಇಬ್ಬರೂ ಆರೋಪಿಗಳ ಬಂಧನ
ಬೆಳಗಾವಿ ಸಿಸಿಬಿ ಪೊಲೀಸರ ಭರ್ಜರಿ ಬೇಟೆ : ಮನೆ ಕಳ್ಳತನ ಮಾಡಿದ ಇಬ್ಬರೂ ಆರೋಪಿಗಳ ಬಂಧನ
ಬೆಳಗಾವಿ ಫೆ 4: ರಾತ್ರಿ ವೇಳೆ ಮನೆಗಳ್ಳತನ ಮಾಡುತ್ತಿದ ಇಬ್ಬರು ಆರೋಪಿಗಳನ್ನು ಶನಿವಾರ ರಾತ್ರಿ ಬಂಧಿಸಿರುವ ಸಿಸಿಬಿ ಪೊಲೀಸರು ಬಂಧಿತರಿಂದ 541 ಗ್ರಾಂ ಬಂಗಾರದ ಆಭರಣಗಳು ಹಾಗೂ 2 ಕೆ.ಜಿ. 133 ಗ್ರಾಂ ಬೆಳ್ಳಿ ಆಭರಣಗಳು , ಲ್ಯಾಪಟಫ್ , ಡಿಜಿಟಲ್ ಕ್ಯಾಮರಾಗಳು ಸೇರಿದಂತೆ ಸೂಮಾರು 16 ಲಕ್ಷ ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ .
ಬೆಳಗಾವಿಯ ಅಶೋಕ ನಗರದ 2 ನೇ ಕ್ರಾಸ್ ನಿವಾಸಿ ಮಹ್ಮದ್ಅಜರುದ್ದೀನ ಮುಲ್ಲಾ (26) , ಹಾಗೂ ಟೀಪು ಸುಲ್ತಾನ್ ನಗರದ ರಫೀಕ್ಇಸಾಕ ಶೇಖ್ (24) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಆರೋಪಿಗಳು 2016 ರಿಂದ ಇಲ್ಲಿಯವರೆಗೆ 26 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಂದು ತನಿಖೆಯಿಂದ ತಿಳಿದು ಬಂದಿದೆ . ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿ , ಫರಾರಿಯಾಗುತ್ತಿದ್ದರು ಖಚಿತ ಮಾಹಿತಿ ಆಧರಿಸಿ ಪೊಲೀಸರು ನಿನ್ನೆ ರಾತ್ರಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ .
ಬೆಳಗಾವಿ ನಗರ ಪೊಲೀಸ್ ಆಯುಕ್ತರು ಡಾ. ಡಿ.ಸಿ. ರಾಜಪ್ಪ , ಐಪಿಎಸ್ ಸೀಮಾ ಲಾಟ್ಕರ ರವರ ಮಾರ್ಗದರ್ಶನದಲ್ಲಿ ಡಿಸಿಪಿ ಎಮ್.ಬಿ. ನಂದಗಾವಿ, ರವರ ನೇತೃತ್ವದಲ್ಲಿ, ಸಿಸಿಬಿ (ಸಿಇಎನ್ ಠಾಣೆ) ಠಾಣೆಯ ಪಿಐ ಬಿ.ಆರ್. ಗಡ್ಡೇಕರ, ಹಾಗೂ ಸಿಬ್ಬಂದಿಯರು ಈ ಕಾರ್ಯಚರಣೆ ನಡೆಯಿಸಿದ್ದಾರೆ